ಥಾಣೆ: 26/11 ರ ಭಯೋತ್ಮಾದಕರ ದಾಳಿಯಲ್ಲಿ ಹುತಾತ್ಮರಾದ ಯೋಧರು ಮತ್ತು ಸಾರ್ವಜನಿಕರಿಗೆ ಶ್ರದ್ಧಾಂಜಲಿ ಅರ್ಪಿಸುವ ಉದ್ದೇಶದಿಂದ ಯೋಧರು ಮತ್ತು ದಿವ್ಯಾಂಗ ಯೋಧರು ನ. 14ರಂದು ದಿಲ್ಲಿಯ ಇಂಡಿಯಾಗೇಟ್‌ನಿಂದ ಹೊರಟು 1,450 ಕಿ. ಮೀ. ಪ್ರಯಾಣ ಬೆಳೆಸಿ, ನ. 25 ರಂದು ಮಧ್ಯಾಹ್ನ ಮೀರಾರೋಡ್‌ನ ಫೌಂಟೇನ್ ಹೊಟೇಲ್ ಸಮೀಪದಲ್ಲಿರುವ ಶೆಲ್ಟರ್ ಹೊಟೇಲ್‌ನ ಆಡಳಿತ ಪಾಲುದಾರ ರಮಾನಾಥ ಶೆಟ್ಟಿ, ಸತೀಶ್ ಶೆಟ್ಟಿ, ನವೀನ್ ಸುಧಾಕರ್ ಶೆಟ್ಟಿ ಮತ್ತು ಶಿವಪ್ರಸಾದ್ ಶೆಟ್ಟಿ ಇವರ ಮುಂದಾಳತ್ವದಲ್ಲಿ ಮುಂಬಯಿಯಲ್ಲಿ ಸ್ವಾಗತಿಸಲಾಯಿತು.
ಶೆಲ್ಟರ್ ಹೊಟೇಲ್‌ನ ಹೊರ ಆವರಣದಲ್ಲಿ ಇರಿಸಲಾಗಿರುವ ಹುತಾತ್ಮರಾದವರ ಭಾವಚಿತ್ರಗಳಿಗೆ ಕ್ಯಾಂಡಲ್ ಹಚ್ಚಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಬಳಿಕ ಅರುಣೋದಯ ರೈ ಅವರ ಆಡಳಿತದಲ್ಲಿರುವ ಸೈಂಟ್ ಆ್ಯಗ್ನೇಸ್ ಶಾಲೆಯ ವಿದ್ಯಾರ್ಥಿಗಳು ಪಥಸಂಚಲನ ಮೂಲಕ ಶೆಲ್ಟರ್ ಹೊಟೇಲ್‌ನ ಸಭಾಂಗಣಕ್ಕೆ ಬರಮಾಡಿಕೊಳ್ಳಲಾಯಿತು.
ಭವ್ಯ ವೇದಿಕೆಯಲ್ಲಿ ಯೋಧರನ್ನು ಹೊಟೇಲಿನ ಆಡಳಿತ ಪಾಲುದಾರರು ಮತ್ತು ಮೀರಾ-ಭಾಯಂದರ್‌ನ ಸಮಾಜ ಸೇವಕರಾದ ಕಿಶೋರ್ ಶೆಟ್ಟಿ ಕುತ್ಯಾರ್, ಅರುಣೋದಯ ರೈ, ಗಿರೀಶ್ ಶೆಟ್ಟಿ ತೆಳ್ಳಾರ್, ಸಂತೋಷ್ ರೈ ಬೆಳ್ಳಿಪಾಡಿ, ದಾಮೋದರ ಶೆಟ್ಟಿ, ಭಾಸ್ಕರ ಶೆಟ್ಟಿ, ಚಂದ್ರಶೇಖರ ಶೆಟ್ಟಿ ಹಾಗೂ ಸುಭಾಷ್ ಶೆಟ್ಟಿ ಗೌರವಿಸಿದರು.
ಗೌರವ ಸ್ವೀಕರಿಸಿದ ಸೈಕಲ್ ಜಾಥದಲ್ಲಿ ಪಾಲ್ಗೊಂಡ ಆದಿತ್ಯ ಮೆಹ್ತಾ ಫೌಂಡೇಷನ್‌ನ ನಿರ್ದೇಶಕ ಆದಿತ್ಯ ಮೆಹ¤ ಅವರು ಮಾತನಾಡಿ, 2008 ರಲ್ಲಿ ಹುತಾತ್ಮರಾದ ಯೋಧರಿಗೆ ಮತ್ತು ಸಾಮಾನ್ಯ ಜನರ ಆತ್ಮಕ್ಕೆ ಚಿರಶಾಂತಿ ಸಿಗುವಂತಾಗಲಿ. ಸುಮಾರು 1,450 ಕಿ. ಮೀ. ಪ್ರಮಾಣ ಬೆಳೆಸಿದ ದಿವ್ಯಾಂಗನಾದ ನನಗೆ ತುಂಬಾ ಕಷ್ಟವಾಯಿತು. ಆದರೂ ಹುತಾತ್ಮರನ್ನು ಸ್ಮರಿಸುತ್ತಾ ಪ್ರಯಾಣ ಬೆಳೆಸಿದೆ. ಆದಿತ್ಯ ಮೆಹ¤ ಫೌಂಡೇಷನ್ ಯೋಧರಿಗೆ ಮತ್ತು ದೇಶಭಕ್ತರಿಗೆ ಕೃತಕ ಕಾಲುಗಳನ್ನು ನೀಡುತ್ತಾ ಬಂದಿದ್ದೇವೆ ಎಂದರು.
ವೇದಿಕೆಯಲ್ಲಿ ಸೈಕಲ್ ಜಾಥದಲ್ಲಿ ಆಗಮಿಸಿದ ಹರೀಂದರ್ ಸಿಂಗ್, ಕೈಗೊಲಾಲ್, ಅಜಯ್ ಸಿಂಗ್, ಅಜಯ್ ಕುಮಾರ್, ಗುರುಲಾಲ್ ಸಿಂಗ್ ಇವರೆಲ್ಲರೂ ಬಿಎಸ್‌ಎಫ್ ಮತ್ತು ಸಿಆರ್‌ಪಿಎಫ್‌ನ ಯೋಧರ ಹಾಗೂ ಮೀರಾ-ಭಾಯಂದರ್ ಮಹಾನಗರ ಪಾಲಿಕೆಯ ಉಪಮೇಯರ್ ಚಂದ್ರಕಾಂತ್ ವೈತಿ, ಕ್ಯಾಪ್ಟನ್ ವಿನೋದ್ ಶರ್ಮಾ ಉಪಸ್ಥಿತರಿದ್ದು, ಹುತಾತ್ಮರಾದವರಿಗೆ ಶ್ರದ್ಧಾಂಜಲಿ ಅರ್ಪಿಸಿದರು.
ನ. 26 ರಂದು ಬೆಳಗ್ಗೆ ಗೇಟ್‌ವೇ ಆಫ್ ಇಂಡಿಯಾದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಢ°ವೀಸ್ ಅವರು ಸ್ವಾಗತಿಸಿ ಗೌರವಿಸಿದರು. ದೆಹಲಿಯಿಂದ ಹೊರಟು ಗುಜರಾತ್‌ನ ವಡೋದರದಿಂದ ಮೀರಾರೋಡ್‌ಗೆ ಆಗಮಿಸಿದಾಗ ಕನ್ನಡಿಗರು, ಶೆಲ್ಟರ್ ಗ್ರೂಪ್ ಆಫ್ ಹೊಟೇಲ್‌ನ ಆಡಳಿತ ಪಾಲುದಾರರು ಸ್ವಾಗತಿಸಿದರು.