Advertisement

ಮಂಗಳೂರು: 22 ಎಟಿಎಂ ಸ್ಕಿಮ್ಮಿಂಗ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಅಂತಾರಾಜ್ಯ ಚೋರರ ಬಂಧನ

01:42 PM Feb 24, 2021 | Team Udayavani |

ಮಂಗಳೂರು: ಕಳೆದ ವರ್ಷದ ನವೆಂಬರ್ ನಿಂದ ಇಲ್ಲಿಯವರೆಗೆ ನಗರದ ಹಲವೆಡೆ ಎಟಿಎಂ ಗಳಲ್ಲಿ ಸ್ಕಿಮ್ಮಿಂಗ್ ಉಪಕರಣ ಅಳವಡಿಸಿ ಹಣ ದೋಚುತ್ತಿದ್ದ ನಾಲ್ವರು ಅಂತಾರಾಜ್ಯ ಚೋರರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

Advertisement

ಕೇರಳದ ತ್ರಿಶ್ಯೂರ್ ನ ಗ್ಲಾಡಿವಿನ್ ಜಿಂಟೋ ಜಾಯ್ (37 ವ), ದೆಹಲಿ ಪ್ರೇಮ್ ನಗರ ನಿವಾಸಿ ದಿನೇಶ್ ಸಿಂಗ್ ರಾವತ್ (44 ವ), ಕಾಸರಗೋಡು ಜಿಲ್ಲೆಯ ಅಬ್ದುಲ್ ಮಜೀದ್ (27 ವ) ಮತ್ತು ಕೇರಳ ರಾಜ್ಯದ ಅಲಪುರ ನಿವಾಸಿ ರಾಹುಲ್ ಟಿ ಎಸ್ (24 ವ) ಬಂಧಿತ ಆರೋಪಿಗಳು.

ಇದನ್ನೂ ಓದಿ:ಅಪರಾಧಗಳ ಕಡಿವಾಣಕ್ಕೆ ಸಿಸಿ ಕ್ಯಾಮೆರಾ ಹದ್ದಿನ ಕಣ್ಣು

2020ರ ನವೆಂಬರ್ ನಿಂದ ಇಲ್ಲಿಯವರೆಗೆ ನಗರದ ಕುಳಾಯಿ ಬ್ಯಾಂಕ್ ಆಫ್ ಇಂಡಿಯಾ ಎಟಿಎಂ, ಚಿಲಿಂಬಿ, ನಾಗುರಿ, ಕಪಿತಾನಿಯೋ ದ ಕೆನರಾ ಬ್ಯಾಂಕ್ ಎಟಿಎಂ, ಮಂಗಳಾದೇವಿಯ ಎಸ್ ಬಿಐ ಎಟಿಎಂ ಗಳಲ್ಲಿ ಸ್ಕಿಮ್ಮಿಂಗ್ ಅಳವಡಿಸಿ, ಗ್ರಾಹಕರ ಮಾಹಿತಿ ಕದ್ದು ನಕಲಿ ಎಟಿಎಂ ಕಾರ್ಡು ತಯಾರಿಸಿ ದೆಹಲಿ, ಬೆಂಗಳೂರು, ಕಾಸರಗೋಡು, ಮಡಿಕೇರಿ, ಗೋವಾ ಮುಂತಾದ ಕಡೆಗಳಲ್ಲಿ ಹಣ ವಿಡ್ರಾ ಮಾಡುತ್ತಿದ್ದರು. ಈ ಬಗ್ಗೆ ಮಂಗಳೂರು ನಗರ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ 22 ಪ್ರಕರಣಗಳು ದಾಖಲಾಗಿತ್ತು.

Advertisement

ಆರೋಪಿಗಳಿಂದ ಸ್ಕಿಮ್ಮಿಂಗ್ ಡಿವೈಸ್, ಎರಡು ಕಾರು, ನಕಲಿ ಎಟಿಎಂ ಕಾರ್ಡುಗಳು, ಐದು ಮೊಬೈಲ್, ಎರಡು ಆಪಲ್ ವಾಚ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ:ಮೈಸೂರು ಪಾಲಿಕೆ ಚುನಾವಣೆ: ಬಿಜೆಪಿ ಲೆಕ್ಕಾಚಾರ ಉಲ್ಟಾ, ಜೆಡಿಎಸ್‌ ತೆಕ್ಕೆಗೆ ಮೇಯರ್‌ ಪಟ್ಟ!

Advertisement

Udayavani is now on Telegram. Click here to join our channel and stay updated with the latest news.

Next