Advertisement

Cyber ​​Fraud Case: ತಿಂಗಳಲ್ಲಿ 50ಕ್ಕೂ ಹೆಚ್ಚು ದೂರು

12:37 AM Feb 03, 2024 | Team Udayavani |

ಕಾಸರಗೋಡು: ಆನ್‌ಲೈನ್‌ ಅಥವಾ ನಕಲಿ ಆ್ಯಪ್‌ಗಳ ಮೂಲಕ ನಡೆಸುತ್ತಿರುವ ವಿವಿಧ ರೀತಿಯ ವಂಚನೆ ಪ್ರಕರಣಗಳು ಎಗ್ಗಿಲ್ಲದೆ ನಡೆಯುತ್ತಿದೆ. ಇಂತಹ ವಂಚನೆಗಳಿಗೆ ಸಂಬಂಧಿಸಿ ಕಾಸರಗೋಡಿನ ಸೈಬರ್‌ ಪೊಲೀಸ್‌ ಠಾಣೆಯಲ್ಲಿ ತಿಂಗಳಿಗೆ ತಲಾ 50 ಕ್ಕಿಂತಲೂ ಅಧಿಕ ದೂರುಗಳು ದಾಖಲಾಗುತ್ತಿವೆ.

Advertisement

ಕಾಸರಗೋಡಿನಲ್ಲಿ 2020 ನವಂಬರ್‌ 1 ರಂದು ಸೈಬರ್‌ ಪೊಲೀಸ್‌ ಠಾಣೆ ಆರಂಭಿಸಲ್ಪಟ್ಟಿತ್ತು. ಹೀಗೆ ಸೈಬರ್‌ ವಂಚನೆಗಳಿಗೆ ಸಂಬಂಧಿಸಿ ಹತ್ತರಷ್ಟು ದೂರುಗಳು ಠಾಣೆಗೆ ಸಲ್ಲಿಸಲಾಗಿತ್ತು. 2021 ರಲ್ಲಿ 25, 2022 ರಲ್ಲಿ 33 ಮತ್ತು 2023 ರಲ್ಲಿ 57 ಕ್ಕೇರಿದೆ. ಇಂತಹ ಸೈಬರ್‌ ವಂಚನೆಗೆ ಸಂಬಂಧಿಸಿ ಸೈಬರ್‌ ಪೊಲೀಸ್‌ ಠಾಣೆ ಮತ್ತು ನ್ಯಾಶನಲ್‌ ಸೈಬರ್‌ ಕ್ರೈಂ ಪೋರ್ಟ್‌ಗಳ ಮೂಲಕ ಪ್ರತೀ ತಿಂಗಳು ಕನಿಷ್ಠ 50 ರಷ್ಟು ದೂರುಗಳು ಸಲ್ಲಿಸಲಾಗುತ್ತಿದೆ.

ಹೀಗೆ ಲಭಿಸಿದ ದೂರುಗಳ ಪೈಕಿ ಬಹುಪಾಲು ಆರ್ಥಿಕ ವಂಚನೆಗೊಳಗಾದ ದೂರಗಳೇ ಆಗಿದೆ. ಇನ್ನು ವಿದೇಶಗಳಲ್ಲಿ ದುಡಿಯುತ್ತಿರುವ ಕೆಲವರು ಊರಲ್ಲಿರುವ ತಮ್ಮ ಮನೆಗೆ ಸರಿಯಾದ ಬ್ಯಾಂಕ್‌ ಖಾತೆಯ ಮೂಲಕ ಹಣ ಕಳುಹಿಸದೆ ಅನಧಿಕೃತ ಅಕೌಂಟ್‌ಗಳ ಮೂಲಕ ಹಣ ಕಳುಹಿಸುತ್ತಾರೆ. ಹೀಗೆ 171 ಕ್ಕಿಂತಲೂ ಹೆಚ್ಚು ಮೊಬೈಲ್‌ ಖಾತೆಗಳು ಕೇರಳ ಸಹಿತ ದೇಶದಾದ್ಯಂತ ಕಾರ್ಯವೆಸಗುತ್ತಿದೆ. ಇಂತಹ ಖಾತೆಗಳ ಮೂಲಕ ಹೆಚ್ಚಾಗಿ ತಮ್ಮ ಹಣ ಕಳೆದು ಕೊಂಡು ವಂಚನೆಗೊಳಗಾಗುತ್ತಾರೆ. ಅಂತಹ 171 ಅಕೌಂಟ್‌ಗಳ ಕಾರ್ಯನಿರ್ವಹಣೆಯನ್ನು ಜಿಲ್ಲೆಯಲ್ಲಿ ಈಗ ಸ್ಥಗಿತಗೊಳಿಸಲಾಗಿದೆ. ಸೈಬರ್‌ ವಂಚನೆಗೊಳಗಾಗುವವರು ಆ ಬಗ್ಗೆ 1930 ಎಂಬ ನಂಬ್ರಕ್ಕೆ ಕರೆದು ದೂರು ನೀಡಬಹುದೆಂದು ಪೊಲೀಸರು ತಿಳಿಸಿದ್ದಾರೆ.

ವಿದೇಶ ಕೇಂದ್ರೀಕರಿಸಿ
ಆನ್‌ಲೈನ್‌ ವಂಚನೆ
ಆನ್‌ಲೈನ್‌ ಮೂಲಕ ಆರ್ಥಿಕ ವಂಚನೆಗೊಳಗಾದ ಬಗ್ಗೆ ನೀಡಲಾದ ದೂರಿನಂತೆ ಜಿಲ್ಲೆಯಲ್ಲಿ 57 ಪ್ರಕರಣ ಗಳು ತನಿಖಾ ಹಂತದಲ್ಲಿದೆಯೆಂದು ಸೈಬರ್‌ ಪೊಲೀಸ್‌ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ. ಆನ್‌ಲೈನ್‌ ಮೂಲಕ ಹಣ ಲಪಟಾಯಿಸುತ್ತಿರುವ ವಂಚಕರು ಅವಲಂಬಿಸುತ್ತಿರುವ ಮಾರ್ಗಗಳು ಹೆಚ್ಚಾಗಿ ಸಮಾನ ರೀತಿಯದ್ದಾಗಿದೆ. ಹೀಗೆ ನಡೆಸಲ್ಪಡುವ ಹೆಚ್ಚಿನ ಆರ್ಥಿಕ ವಂಚನೆಗಳು ಚೈನಾ, ಮ್ಯಾನ್ಮಾರ್‌ ಮತ್ತು ನೈಜೀರಿಯಾ, ಕಾಂಬೋಡಿಯಾ ದೇಶಗಳನ್ನು ಪ್ರಧಾನ ಕೇಂದ್ರವನ್ನಾಗಿ ನಡೆಸಲಾಗುತ್ತಿದೆ.

ಸುಲಭದಲ್ಲಿ ಸಾಲ ಲಭಿಸುವಂತೆ ಮಾಡಲಾಗುವುದು ಹಾಗು ಮತ್ತಿತರ ಹಲವು ಆಕರ್ಷಕ ಭರವಸೆಗಳನ್ನು ನೀಡಿ ಇಂತಹ ವಿದೇಶಿ ವಂಚಕರು ತಮ್ಮದೇ ಆದ ಸ್ವಂತ ಆ್ಯಪ್‌ಗ್ಳನ್ನು ತಯಾರಿಸಿ ಅದರ ಮೂಲಕ ಅಮಾಯಕರನ್ನು ತಮ್ಮ ಬಲೆಗೆ ಸಿಲುಕಿಸಿ ವಂಚನೆ ನಡೆಸುತ್ತಿದ್ದಾರೆ. ಈ ಬಗ್ಗೆ ಸಾರ್ವಜನಿಕರು ಭಾರೀ ಜಾಗ್ರತೆ ವಹಿಸಬೇಕೆಂದು ಡಿವೈಎಸ್‌ಪಿ ಪಿ.ಬಾಲಕೃಷ್ಣನ್‌ ಮುನ್ನೆಚ್ಚರಿಕೆ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next