Advertisement
ವೈದ್ಯರು ಕ್ಲಿನಿಕ್‌ನಲ್ಲಿದ್ದ ಸಂದರ್ಭ ಕರೆ ಮಾಡಿ, ತಾನು ಸೈನ್ಯದಲ್ಲಿ ಅಧಿಕಾರಿಯಾಗಿದ್ದು ನಮ್ಮ ಯೋಧರಿಗೆ ನೀವು ಚಿಕಿತ್ಸೆ ಕೊಡಬೇಕು. ಇದಕ್ಕಾಗಿ ನಿಮಗೆ ರಿಜಿಸ್ಟರ್ ನಂಬ್ರ ಕೊಡಲಾಗುವುದು ಎಂದು ಹೇಳಿ ಮೊಬೈಲ್‌ನಲ್ಲಿ ಕೋಡ್ ಹಾಕಲು ಹೇಳಿದ್ದಾನೆ. ಮೊದಲ ಬಾರಿ ಹಾಕಿದಾಗ 50 ಸಾವಿರ ರೂ. ಹೀಗೆ ಒಟ್ಟು ಮೂರು ಬಾರಿ ತಲಾ 50 ಸಾ.ರೂ. ಒಂದು ಬಾರಿ 30 ಸಾ.ರೂ. ಹಾಗೂ ಕೊನೆಯ ಬಾರಿ 20 ಸಾ.ರೂ ಡ್ರಾ ಮಾಡಿ ಸಂಪರ್ಕ ಕಡಿತಗೊಳಿಸಿದ್ದಾನೆ ಎನ್ನಲಾಗಿದೆ.
ಕಡಿತ ಮಾಡಿ
ಯಾವುದೇ ಒಟಿಪಿ ನೀಡದೆಯೂ ಹೈಟೆಕ್ ಕಳ್ಳರು ಸೈನ್ಯದ ಹೆಸರು ದುರ್ಬಳಕೆ ಮಾಡಿಕೊಂಡು ನಾನಾ ತಂತ್ರಜ್ಞಾನ ಉಪಯೋಗಿಸಿ ಬ್ಯಾಂಕ್‌ನಿಂದ ಹಣ ಡ್ರಾ ಮಾಡುತ್ತಿದ್ದು ,ಹೆಚ್ಚಿನ ತಾಂತ್ರಿಕ ವ್ಯವಸ್ಥೆಯನ್ನೂ ಮೀರಿ ಅಪರಾಧಿಗಳು ಕೃತ್ಯ ನಡೆಸುತ್ತಿರುವುದು ಪೊಲೀಸ್ ಇಲಾಖೆಗೂ ಸವಾಲಾಗಿ ಪರಿಣಮಿಸಿದೆ. ಯೋಧರ, ಸೈನ್ಯಾಧಿಕಾರಿಯ ಹೆಸರಿನಲ್ಲಿ ಸುಳ್ಳು ಕರೆ ಬಂದಲ್ಲಿ ಯಾವುದೇ ಕಾರಣಕ್ಕೂ ಕರೆ ಮುಂದುವರಿಸದೆ ಯಾವುದೇ ಕೋಡ್ ನಂಬ್ರವನ್ನು ಒತ್ತದೆ ದೂರವಾಣಿ ಸಂಪರ್ಕ ಕಡಿತ ಮಾಡುವುದೇ ಸುರಕ್ಷತೆಯ ದಾರಿ ಎಂಬುದು ಐಟಿ ತಂತ್ರಜ್ಞರ ಸಲಹೆಯಾಗಿದೆ.