Advertisement
ಉಡುಪಿ: ನಿತ್ಯವೂ ನಡೆಯುತ್ತಿರುವ ಸೈಬರ್ ಅಪರಾಧ ಪ್ರಕರಣಗಳ ಹಿನ್ನೆಲೆ ಬೆಂಬತ್ತಿ ಹೋದರೆ ಕಾಣ ಸಿಗುವ ಉತ್ತರವೆಂದರೆ ನಮ್ಮ ಅವಸರ, ಅನಗತ್ಯ ಆತಂಕ ಹಾಗೂ ಸಾಮಾನ್ಯ ಜಾ°ನದ ಕೊರತೆ.
ಸ್ಮಾರ್ಟ್‌ಫೋನ್‌ಗಳ ಬಳಕೆ ಹೆಚ್ಚಿದಂತೆ ವಿಭಿನ್ನ ರೀತಿಯ ತಂತ್ರಜ್ಞಾನಗಳೂ ಫೋನ್‌ಗಳಲ್ಲಿ ಬಂದಿದ್ದು, ಇವುಗಳ ಬಳಕೆಯ ಸಂದರ್ಭದಲ್ಲಿ ಗ್ರಾಹಕರು ಎಚ್ಚರಿಕೆಯ ಹೆಜ್ಜೆ ಇರಿಸುವುದು ಅತೀ ಅಗತ್ಯ. ಇಲ್ಲದಿದ್ದರೆ ಸೈಬರ್ ವಂಚಕರ ಬಲೆಗೆ ಬೀಳುವುದು ಗ್ಯಾರಂಟಿ ಎಂಬಂತಾಗಿದೆ.
Related Articles
Advertisement
“ಏನು, ಗೂಗಲ್ ಪೇ ಇಲ್ಲವಾ? ಫೋನ್ ಪೇ ನೂ ಇಲ್ಲವಾ?’ ಎಂದು ಸ್ನೇಹಿತರು ಕೇಳಿದ ಕೂಡಲೇ “ಅಯ್ಯೋ, ಇಲ್ಲ. ಹಾಕಿಕೊಳ್ಳಬೇಕು’ ಎಂದು ದನಿ ಸಣ್ಣಗೆ ಮಾಡಿಕೊಳ್ಳಬೇಕಿಲ್ಲ. ನಮಗೆ ಸುರಕ್ಷಿತವಾಗಿ ಈ ಪೇಮೆಂಟ್ ಆ್ಯಪ್ ಗಳನ್ನು ಬಳಸಲು ಬರುವುದಿದ್ದರೆ ಬಳಸಿ. ಒಂದುವೇಳೆ ಸೀಮಿತವಾಗಿ ಬಳಸುವುದಿದ್ದರೂ ನೀವು ಕಲಿತಷ್ಟು, ಅರಿತಷ್ಟೇ ಬಳಸಿ. ಗೊತ್ತಿಲ್ಲದ್ದನ್ನೂ “ಹೀಗಿರಬಹುದು’ ಎಂದು ಅಂದುಕೊಂಡು ಏನು ಮಾಡಬೇಡಿ. ಆ ಬದಿಯಲ್ಲಿ ಗಾಳ ಹಾಕಿಕೊಂಡು ಕುಳಿತ ಸೈಬರ್ ವಂಚಕರು ತಮ್ಮತ್ತ ನಮ್ಮ ಖಾತೆಯಲ್ಲಿನ ಹಣವನ್ನು ಎಳೆದುಕೊಂಡುಬಿಡುತ್ತಾರೆ, ಎಚ್ಚರವಿರಲಿ. ಹಾಗಾಗಿ ಅತಿಯಾದ ಆನ್‌ಲೈನ್ ವ್ಯವಹಾರಗಳಿಂದಲೂ ಸೈಬರ್ ವಂಚಕರು ನಮ್ಮ ಖಾತೆಗೆ ಕನ್ನಹಾಕಬಹುದು.
ಕೆಲವು ಕ್ಷಣದಲ್ಲಿ ಹಣ ಮಾಯವಿದೇಶ ಸಹಿತ ಉತ್ತರ ಭಾರತದಲ್ಲಿ ಐಟಿ-ಬಿಟಿ ಹೆಸರಿನಲ್ಲಿ ನಕಲಿ ಕಂಪೆನಿಗಳು ಕಾರ್ಯಾಚರಣೆ ಮಾಡುತ್ತಿದ್ದು, ವ್ಯವಸ್ಥಿತವಾಗಿ ದಕ್ಷಿಣ ಭಾರತದವರನ್ನು ಗುರಿಯಾಗಿಸಿಕೊಂಡು ಹಣ ಲೂಟಿ ಮಾಡುತ್ತಿದ್ದಾರೆ. ಜಸ್ಟ್ ಡಯಲ್ ಸಹಿತ ಇತರ ಮೂಲಗಳಿಂದ ಮೊಬೈಲ್ ಸಂಖ್ಯೆ ಗಳನ್ನು ಸಂಗ್ರಹಿಸಿ ಲಿಂಕ್‌ಗಳನ್ನು ರವಾನಿಸ ಲಾಗುತ್ತದೆ. ಕರೆಗಳನ್ನು ಮಾಡಿ ದಾರಿ ತಪ್ಪಿಸಿ ಹಣ ದೋಚುವ ಖದೀಮರಿದ್ದಾರೆ. ಕೆಲವೇ ಕ್ಷಣದಲ್ಲಿ ನಮ್ಮ ಖಾತೆಯಲ್ಲಿದ್ದ ಸಾವಿರ, ಲಕ್ಷ, ಕೋಟಿಗಳು ಮಂಗಮಾಯವಾದ ದೂರುಗಳು ಜಿಲ್ಲೆಯ ಹಲವೆಡೆ ದಾಖಲಾಗಿರುವುದು ಇದಕ್ಕೆ ನಿದರ್ಶನ. ಮಾರು ಹೋಗುವುದೇಕೆ?
ಸೈಬರ್ ವಂಚನೆಯ ಬಗ್ಗೆ ಪ್ರತಿಯೊಬ್ಬರಿಗೂ ಇರುವ ಜ್ಞಾನ ಅಲ್ಪ ಮಾತ್ರ. ಕೆಲವು ಆ್ಯಪ್‌ಗ್ಳನ್ನು ಡೌನ್‌ಲೋಡ್ ಮಾಡಿದರೆ ಅಕೌಂಟ್‌ನಲ್ಲಿರುವ ಹಣ ಕಡಿತವಾಗುತ್ತದೆ ಎಂಬ ಕಲ್ಪನೆಯೇ ಈಗಲೂ ಹಲವಾರು ಮಂದಿಯಲ್ಲಿದೆ. ಆದರೆ ವಾಸ್ತವ ಹಾಗಲ್ಲ. ಸ್ವಲ್ಪ ಎಚ್ಚರ ತಪ್ಪಿದರೂ ನಮ್ಮ ಖಾತೆಯಿಂದ ಯಾರೋ ಹಣ ಲಪಟಾಯಿಸಬಹುದು. ಈ ನಿಟ್ಟಿನಲ್ಲಿ ಆನ್‌ಲೈನ್ ವ್ಯವಹಾರ, ಷೇರುಮಾರುಕಟ್ಟೆಯಲ್ಲಿ ಹೂಡಿಕೆ ಇತ್ಯಾದಿ ಯಾವುದೇ ಅನಾಮಧೇಯ ಲಿಂಕ್‌ಗಳನ್ನು ಕ್ಲಿಕ್ ಮಾಡುವ ಮುನ್ನ ಎಚ್ಚರ ವಹಿಸುವುದು ಅತೀ ಅಗತ್ಯ ಎನ್ನುತ್ತಾರೆ ಪೊಲೀಸರು. ಷೇರು ಮಾರುಕಟ್ಟೆ
ಹೂಡಿಕೆಯೆಂಬ ದೊಡ್ಡ ಖೆಡ್ಡಾ
ಷೇರು ಮಾರುಕಟ್ಟೆಯ ಬಗ್ಗೆ ಈಗ ವಿದ್ಯಾರ್ಥಿಗಳಿಂದ ಹಿರಿಯ ನಾಗರಿಕರವರೆಗೂ ಅತೀವ ಆಸಕ್ತಿ. ಯಾವುದೇ ವ್ಯವಹಾರಕ್ಕೆ ಸಂಬಂಧಿಸಿದಂತೆ ಗೂಗಲ್‌ನಲ್ಲಿ ಒಂದು ಬಾರಿ ಸರ್ಚ್ ಮಾಡಿದರೆ ಅದಕ್ಕೆ ಸಂಬಂಧಿಸಿದ ಹಲವು ಲಿಂಕ್‌ಗಳನ್ನು ಕಾಣ ಬಹುದು. ಇತ್ತೀಚೆಗೆ ಜಿಲ್ಲೆಯ ಉಪನ್ಯಾಸಕ ರೊಬ್ಬರು ಷೇರುಮಾರುಕಟ್ಟೆಯ ಆಸೆಗೆ ಬಿದ್ದು 40 ಲ.ರೂ.ಗೂ ಅಧಿಕ ಹಣವನ್ನು ಕಳೆದುಕೊಂಡರು. ಮೊದಲಿಗೆ ವಾಟ್ಸಾಪ್ ಗ್ರೂಪ್ ರಚಿಸಿದ ವಂಚಕರು ಅದಕ್ಕೆ ಇವರನ್ನು ಸೇರ್ಪಡೆ ಮಾಡಿ ದಿನನಿತ್ಯ ಲಾಭ ಬರುವ ಬಗ್ಗೆ ತಿಳಿಸಿದ್ದರು. ಕೆಲವು ದಿನಗಳ ಕಾಲ ಆ ಗ್ರೂಪ್ ಅನ್ನು ಗಮನಿಸುತ್ತಿದ್ದ ಉಪನ್ಯಾಸಕರು ಅನಂತರ ಹಣ ಹೂಡಿಕೆ ಮಾಡ ತೊಡಗಿದರು. ದಿನಂಪ್ರತಿ ಸಾವಿರಾರು ರೂ.ಹೂಡಿಕೆ ಮಾಡಿದರು. ಮೊದಲಿಗೆ ಶೇ.10ರಷ್ಟು ಲಾಭಾಂಶ ಅವರು ಷೇರು ಖಾತೆಗೆ ಬಂದಿತು. ಬಳಿಕ ವಂಚಕರು 25 ಲ.ರೂ. ಹಾಗೂ 50 ಲ.ರೂ.ಗೂ ಅಧಿಕ ಹೂಡಿಕೆ ಮಾಡಿದರೆ ಶೇ.50 ಹಾಗೂ ದುಪ್ಪಟ್ಟು ಹಣ ನೀಡುವ ಆಮಿಷವೊಡ್ಡಿದ್ದರು. ಈ ಮಧ್ಯೆ ದೈನಂದಿನ ಆಟಕ್ಕೆ ಸಾಲ ಸೌಲಭ್ಯ ಒದಗಿಸುವುದಾಗಿಯೂ ತಿಳಿಸಿದ್ದರು. ಇದನ್ನು ನಂಬಿದ ಅವರು ಹಣ ಹೂಡಿಕೆ ನಿಲ್ಲಿಸಲಿಲ್ಲ. ಆದರೆ ಸಾಲ ವಸೂಲಾತಿ ನೆಪದಲ್ಲಿ ಇವರ ಖಾತೆಯಲ್ಲಿದ್ದ ಹಣ ಅಷ್ಟೇ ವೇಗವಾಗಿ ಕಡಿಮೆಯಾಯಿತು.
ಆಯ್ಕೆಯೂ ಇರಲಿಲ್ಲ. ತಾನು ಮೋಸ ಹೋಗಿದ್ದೇನೆ ಎಂಬ ಬಗ್ಗೆ ಮನವರಿಕೆಯಾಗಿ ಕೂಡಲೇ ಸೈಬರ್ ಠಾಣೆಗೆ ತೆರಳಿ ಅವರು ದೂರು ನೀಡಿದರು. ಈ ಪೈಕಿ ಸುಮಾರು 2 ಲ.ರೂ.ಗಳನ್ನು ಪೊಲೀಸರು ತಡೆಹಿಡಿದಿರುವುದಾಗಿ ತಿಳಿಸಿದ್ದು, ಉಳಿದ ಹಣದ ಮೂಲ ಪತ್ತೆಯ ಬಳಿಕವಷ್ಟೇ ಏನಾಯಿತೆಂಬ ವಿಷಯ ಬಹಿರಂಗಗೊಳ್ಳಬೇಕಿದೆ. ಮೂಲ ಪತ್ತೆಯ ಸವಾಲು
ಜಿಲ್ಲೆಯಲ್ಲಿ ಈ ವರ್ಷ ನಡೆದ ಒಟ್ಟು 63 ಪ್ರಕರಣಗಳಲ್ಲಿ 13,22,30,534 ರೂ.ಗಳನ್ನು ಸಂತ್ರಸ್ತರು ಕಳೆದುಕೊಂಡಿದ್ದು, ಈ ಪೈಕಿ 35,57,705 ರೂ.ಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಪೈಕಿ ಸಂತ್ರಸ್ತರ ಖಾತೆಗಳಿಂದ ಹೋದ ಹಣದ ಮೂಲ ಪತ್ತೆಯೇ ಬ್ಯಾಂಕ್‌ನವರಿಗೆ ಸವಾಲಿನ ಕಾರ್ಯವಾಗಿದೆ. ಪಶ್ಚಿಮ ಬಂಗಾಳ, ಒರಿಸ್ಸಾ, ಬಿಹಾರ, ಹೊಸದಿಲ್ಲಿ ಹೀಗೆ ವಿವಿಧೆಡೆಗಳ ಲೊಕೇಷನ್ ಸಿಗುತ್ತಿದ್ದು, ಆ ಖಾತೆ ಯಾರ ಹೆಸರಿನಲ್ಲಿದೆ ಎಂಬ ಮಾಹಿತಿಗಳೇ ತಿಳಿದುಬಂದಿಲ್ಲ.