Advertisement

ಸೈಬರ್ ಕೈಚಳಕ : ಕೆವೈಸಿ ಅಪ್‌ಡೇಟ್‌ ಮಾಡುತ್ತಿದ್ದಂತೆ ಮಹಿಳೆಯ ಖಾತೆಯಿಂದ ಹಣ ಮಾಯ

11:23 AM Mar 27, 2022 | Team Udayavani |

ಬೆಂಗಳೂರು : ಕೆವೈಸಿ ಅಪ್‌ಡೇಟ್‌ ಮಾಡುವಂತೆ ಅಪರಿಚಿತ ನಂಬರ್‌ನಿಂದ ಬಂದ ಸಂದೇಶ ನಂಬಿ ಮಹಿಳೆಯೊಬ್ಬರು 70 ಸಾವಿರ ರೂ. ಕಳೆದುಕೊಂಡಿದ್ದಾರೆ. ಈ ಸಂಬಂಧ ಆಗ್ನೇಯ ವಿಭಾಗದ ಸೆನ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಬಿಟಿಎಂ ಲೇಔಟ್‌ ನಿವಾಸಿ ದೂರುದಾರರಾದ ಪ್ರೀತಿ ಅವರಿಗೆ ಕೆಲ ದಿನಗಳ ಹಿಂದೆ ಅಪರಿಚಿತ ನಂಬರ್‌ನಿಂದ ಸಂದೇಶವೊಂದು ಬಂದಿದ್ದು, ಕೆವೈಸಿ ಅಪ್‌ಡೇಟ್‌ ಮಾಡುವಂತೆ ತಿಳಿಸಿ ದ್ದಾರೆ.

Advertisement

ಅದನ್ನು ನಂಬಿದ ಪ್ರೀತಿ, ಲಿಂಕ್‌ ತೆರೆದು, ಬ್ಯಾಂಕ್‌ನ ಮಾಹಿತಿ ಭರ್ತಿ ಮಾಡಿದ ಕೆಲವೇ ಕ್ಷಣಗಳಲ್ಲಿ ಅವರ ಖಾತೆ ಯಲ್ಲಿದ್ದ 70, 429 ರೂ. ಕಡಿತಗೊಂಡಿದೆ. ಈ ಹಿನ್ನೆಲೆಯಲ್ಲಿ ಪ್ರೀತಿ ಅವರು ದೂರು ನೀಡಿದ್ದು, ತನಿಖೆ ನಡೆಯುತ್ತಿದೆ ಎಂದು ಸೆನ್‌ ಠಾಣೆ ಪೊಲೀಸರು ಹೇಳಿದರು.

ಇದನ್ನೂ ಓದಿ : ದೇಶದಲ್ಲಿ ಕಲ್ಲಿದ್ದಲು ಕೊರತೆಯಿಲ್ಲ: ಒತ್ತಿ ಹೇಳಿದ ಪ್ರಹ್ಲಾದ್ ಜೋಶಿ

Advertisement

Udayavani is now on Telegram. Click here to join our channel and stay updated with the latest news.

Next