Advertisement
ಆಗ್ನೇಯ ವಿಭಾಗ ಎಚ್‌ಎಸ್‌ಆರ್ ಪೊಲೀಸ್ ಠಾಣೆ ಆವರಣದಲ್ಲಿನ ನೂತನ ಸಿಇಎನ್ ಪೊಲೀಸ್ ಠಾಣೆಯನ್ನು ಗುರುವಾರ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಸೈಬರ್ ವಂಚನೆ ನಿಯಂತ್ರಣ ಮಾಡುವ ಸಲುವಾಗಿ ಯೋಜನೆ ಮಾಡಿಕೊಳ್ಳಲಾ ಗಿದ್ದು. ಈ ಕಾರ್ಯಕ್ಕೆ ಆರ್‌ಬಿಐ ಕೂಡ ಸಹಕಾರ ನೀಡುತ್ತಿದೆ. ನಗರದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಸಂಚಾರ ಕುರಿತ ದೂರುಗಳಿಗಾಗಿ ನಮ್ಮ-100 ಇರು ವಂತೆಯೂ ಇನ್ಮುಂದೆ ಸೈಬರ್ ಕ್ರೈಂ ನಿಯಂತ್ರಣ ಕೊಠಡಿಗೆ ದೂರುಗಳನ್ನು ಸಹಾಯವಾಣಿ ಮೂಲಕ ನೆರವು ನೀಡಲಾಗುವುದು. ನೇರವಾಗಿ ನಮ್ಮ-100ಕ್ಕೆ ಕರೆ ಮಾಡಿದಾಗ ಅವುಗಳಲ್ಲಿ 1,2,3,4 ಆಯ್ಕೆ ಬರುತ್ತವೆ. ಈ ಪೈಕಿ ಸೈಬರ್ ಸಹಾಯವಾಣಿ ಸಂಪರ್ಕಕ್ಕೆ ನಂಬರ್‌ವೊಂದನ್ನು ಆಯ್ಕೆ ಮಾಡಿಕೊಂಡು ಸಿಬ್ಬಂದಿ ಜತೆ ನೇರವಾಗಿ ದೂರು ನೀಡಿ ಸಹಾಯ ಪಡೆದು ಕೊಳ್ಳಬಹುದು. ಅಗತ್ಯವಿದ್ದಲ್ಲಿ ಮಾತ್ರ ಸೆನ್ ಪೊಲೀಸ್ ಠಾಣೆಗೆ ತೆರಳಿ ನೇರವಾಗಿ ದೂರು ನೀಡಬಹುದು. ಅದರಿಂದ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.
Related Articles
Advertisement
ಸೆನ್ ಪೊಲೀಸ್ ಠಾಣೆಗಳಿಗೆ ತಜ್ಞರ ನೇಮಕ : ನಗರದಲ್ಲಿರುವ 8 ಸಿಇಎನ್(ಸೈಬರ್, ಆರ್ಥಿಕ ಅಪರಾಧಗಳು ಮತ್ತು ನಾರ್ಕೋಟಿಕ್ಸ್)(ಸೆನ್) ಪೊಲೀಸ್ ಠಾಣೆಗಳಿಗೆ ನುರಿತ ತಜ್ಞರನ್ನು ನೇಮಕ ಮಾಡಿಕೊಳ್ಳಲಾಗುವುದು. ಸಿಇಎನ್ ಠಾಣೆಗಳಲ್ಲಿ ಸಿಬ್ಬಂದಿ ಕೊರತೆಯಿದ್ದು, ಹಂತ-ಹಂತವಾಗಿ ಭರ್ತಿ ಮಾಡಲಾಗುವುದು. ಜತೆಗೆ ನಗರದ ಸೆನ್ ಪೊಲೀಸ್ ಠಾಣೆಗಳಲ್ಲಿ ನುರಿತ ತಜ್ಞರಕೊರತೆ ಇದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಪ್ರತಿ ಸೆನ್ ಪೊಲೀಸ್ ಠಾಣೆಗೆ ಮೂವರು ತಂತ್ರಜ್ಞಾನ ಮತ್ತು ತಾಂತ್ರಿಕ ತಜ್ಞರನ್ನು ಹೊರಗುತ್ತಿಗೆ ಮೂಲಕ ನೇಮಿಸಿಕೊಳ್ಳಲಾಗುವುದು. ಈ ಮೂಲಕ ಪ್ರಕರಣಗಳ ಇತ್ಯರ್ಥ ಹಾಗೂ ದೂರುದಾರರಿಗೆ ಪರಿಹಾರಕೊಡಿಸಲಾಗುವುದು. ಇದೊಂದು ಮಾದರಿ ಸೆನ್ ಪೊಲೀಸ್ ಠಾಣೆಯಾಗಿದ್ದು, ನಗರದ ಬೇರೆ ಠಾಣೆಗಿಂತ ಭಿನ್ನವಾಗಿದೆ. ಕಾರ್ಪೋರೇಟ್ ಮಾದರಿಯಲ್ಲಿ ವಿನ್ಯಾಸ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತಕಮಲ್ ಪಂತ್ ಹೇಳಿದರು.