Advertisement

ಖೇಲ್‌ರತ್ನ: ನೀರಜ್‌ ಹೆಸರು ಶಿಫಾರಸು

10:37 AM May 01, 2018 | |

ಹೊಸದಿಲ್ಲಿ: ಕಾಮನ್ವೆಲ್ತ್‌ ಗೇಮ್ಸ್‌ ಇತಿಹಾಸದ ಜಾವೆಲಿನ್‌ ಎಸೆತದಲ್ಲಿ ಮೊದಲ ಸ್ವರ್ಣ ಪದಕ ಗೆದ್ದ ಭಾರತದ ನೀರಜ್‌ ಚೋಪ್ರಾ ಹೆಸರನ್ನು ಪ್ರತಿಷ್ಠಿತ ರಾಜೀವ್‌ ಗಾಂಧಿ ಖೇಲ್‌ರತ್ನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.

Advertisement

“ಈ ಬಾರಿ ಖೇಲ್‌ರತ್ನ ಪ್ರಶಸ್ತಿಗೆ ತೀವ್ರ ಪೈಪೋಟಿ ಇದೆ. ಇದು ನನಗೆ ಒಲಿಯುತ್ತದೆ ಎಂದು ಹೇಳಲಾಗದು. ಆದರೆ ಈ ಪ್ರಶಸ್ತಿಗೆ ಹೆಸರನ್ನು ಶಿಫಾರಸು ಮಾಡುವುದೇ ಬಹು ದೊಡ್ಡ ಗೌರವ’ ಎಂದು ನೀರಜ್‌ ಚೋಪ್ರಾ ಪ್ರತಿಕ್ರಿಯಿಸಿದ್ದಾರೆ. 

ಒಂದು ವೇಳೆ ನೀರಜ್‌ ಚೋಪ್ರಾ ಖೇಲ್‌ರತ್ನಕ್ಕೆ ಭಾಜನರಾದರೆ ಆಗ ಭಾರತದ ಆ್ಯತ್ಲೆಟಿಕ್ಸ್‌ ತಾರೆಗಳಾದ ಜ್ಯೋತಿರ್ಮಯಿ ಸಿಕªರ್‌, ಕೆ.ಎಂ. ಬೀನಾ ಮೋಳ್‌, ಅಂಜು ಬಾಬ್ಬಿ ಜಾರ್ಜ್‌, ಪ್ಯಾರಾಲಿಂಪಿಕ್‌ ಜಾವೆಲಿನ್‌ ತ್ರೋವರ್‌ ದೇವೇಂದ್ರ ಜಜಾರಿಯಾ ಸಾಲಲ್ಲಿ ಕಾಣಿಸಿಕೊಂಡಂತಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next