ಬರ್ಮಿಂಗ್ಹ್ಯಾಮ್: ಕರ್ನಾಟಕದ ಸ್ವಿಮ್ಮರ್ ಶ್ರೀಹರಿ ನಟರಾಜನ್ 100 ಮೀ. ಬ್ಯಾಕ್ಸ್ಟ್ರೋಕ್ ಸ್ಪರ್ಧೆಯ ಫೈನಲ್ ಪ್ರವೇಶಿಸಿದ್ದಾರೆ.
ಸೆಮಿಫೈನಲ್ನಲ್ಲಿ ಅವರು 54:55 ಸೆಕೆಂಡ್ಸ್ ನಲ್ಲಿ ಗುರಿ ಮುಟ್ಟಿದರು.
21 ವರ್ಷದ ಶ್ರೀಹರಿ ನಟರಾಜನ್ ಹೀಟ್ನಲ್ಲಿ 4ನೇ, ಒಟ್ಟಾರೆಯಾಗಿ 7ನೇ ಸ್ಥಾನಿಯಾದರು. ರವಿವಾರ ಫೈನಲ್ ಸ್ಪರ್ಧೆ ಏರ್ಪಡಲಿದೆ.
ಬೆಂಗಳೂರಿನವರಾದ ಶ್ರೀಹರಿ ನಟರಾಜನ್ ಜಯಿಸಿದ್ದೇ ಆದಲ್ಲಿ ಕಾಮನ್ವೆಲ್ತ್ ಗೇಮ್ಸ್ ಈಜಿನಲ್ಲಿ ಭಾರತಕ್ಕೆ ದ್ವಿತೀಯ ಪದಕ ಒಲಿಯಲಿದೆ. 2010ರ ಹೊಸದಿಲ್ಲಿ ಗೇಮ್ಸ್ನಲ್ಲಿ ಪ್ರಶಾಂತ್ ಕರ್ಮಾಕರ್ ಭಾರತಕ್ಕೆ ಕಂಚಿನ ಪದಕ ಜಯಿಸಿ ಕೊಟ್ಟಿದ್ದರು.
400 ಮೀ. ಫ್ರೀಸ್ಟೈಲ್ನಲ್ಲಿ ಕುಶಾಗ್ರ ರಾವತ್ ಸೆಮಿಫೈನಲ್ ಪ್ರವೇಶಿಸಲು ವಿಫಲರಾದರು. ಅವರು 3:57.45 ಸೆಕೆಂಡ್ ಸಾಧನೆಯೊಂದಿಗೆ ಒಟ್ಟಾರೆಯಾಗಿ 14ನೇ ಸ್ಥಾನಿಯಾದರು.
ಪುರುಷರ 50 ಮೀ. ಬಟರ್ಫ್ಲೈ ಸ್ಪರ್ಧೆಯಲ್ಲಿ ಸಾಜನ್ ಪ್ರಕಾಶ್ ಕೂಡ ಫೈನಲ್ ಅವಕಾಶವನ್ನು ಕಳೆದುಕೊಂಡರು. ಅವರು 8ನೇ ಸ್ಥಾನಿಯಾದರು (25.01 ಸೆ.).