Advertisement

ಕಾಮನ್‌ವೆಲ್ತ್‌ ಗೇಮ್ಸ್‌ 2022: 16ರ ಸುತ್ತಿಗೆ ಜೋಶ್ನಾ ಚಿನ್ನಪ್ಪ-ಸೌರವ್‌ ಘೋಷಾಲ್‌

11:31 PM Jul 30, 2022 | Team Udayavani |

ಬರ್ಮಿಂಗ್‌ಹ್ಯಾಮ್‌: ಭಾರತದ ಸ್ಟಾರ್‌ ಸ್ಕ್ವಾಷ್‌ ಆಟಗಾರರಾದ ಜೋಶ್ನಾ ಚಿನ್ನಪ್ಪ ಮತ್ತು ಸೌರವ್‌ ಘೋಷಾಲ್‌ ಸುಲಭ ಜಯದೊಂದಿಗೆ ಪ್ರಿ-ಕ್ವಾರ್ಟರ್‌ ಫೈನಲ್‌ ತಲುಪಿದ್ದಾರೆ. ಇಬ್ಬರೂ 3-0 ಗೆಲುವು ಸಾಧಿಸಿದರು.

Advertisement

18 ಬಾರಿಯ ರಾಷ್ಟ್ರೀಯ ಚಾಂಪಿಯನ್‌ ಜೋಶ್ನಾ ಚಿನ್ನಪ್ಪ ಬಾರ್ಬಡಾಸ್‌ನ ಮೀಗನ್‌ ಬೆಸ್ಟ್‌ ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡಿ 11-8, 11-9, 12-10ರಿಂದ ಗೆದ್ದು ಬಂದರು.

ಸೌರವ್‌ ಘೋಷಾಲ್‌ ಶ್ರೀಲಂಕಾದ ಶಮಿಲ್‌ ವಕೀಲ್‌ ವಿರುದ್ಧ 11-4, 11-4, 11-6 ಅಂತರದ ಜಯ ಸಾಧಿಸಿದರು. ಆದರೆ ಸುನಯನಾ ಸಾರಾ ಕುರುವಿಲ್ಲ ಅವರ ಆಟ ಕೊನೆಗೊಂಡಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next