ಗೋಲ್ಡ್ ಕೋಸ್ಟ್: ವೇಟ್ ಲಿಫ್ಟಿಂಗ್ನಲ್ಲಿ ಮೀರಾಬಾಯಿ ಚಾನು ಚಿನ್ನದ ಪದಕ ಗೆದ್ದು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಆರಂಭ ನೀಡಿದ್ದಾರೆ. ಇದು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಅವರು ಗೆದ್ದ ಒಟ್ಟಾರೆ 2ನೇ ಪದಕ. 2014ರಲ್ಲಿ ನಡೆದ ಗ್ಲಾಸೊY ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 48 ಕೆ.ಜಿ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದಿದ್ದರು.
ಕಳೆದ ವರ್ಷವಷ್ಟೇ ಅವರು ಅಮೆರಿಕದಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆದ್ದು ಭಾರತಕ್ಕೆ ಕೀರ್ತಿ ತಂದಿದ್ದರು.
ವರ್ಷದಿಂದ ವರ್ಷಕ್ಕೆ ಚಾನು ಅಪ್ರತಿಮ ಸಾಧನೆ: ಕಳೆದ ವರ್ಷ ಚಾನು ಕ್ಲೀನ್ ಹಾಗೂ ಜರ್ಕ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಭಾರತಕ್ಕೆ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದುಕೊಟ್ಟಿದ್ದರು. ಚಾನು ಒಟ್ಟಾರೆ ಕೂಟದಲ್ಲಿ 196 ಕೆ.ಜಿ ಎತ್ತಿ ಅಭೂತಪೂರ್ವ ಸಾಧನೆ ಮಾಡಿದ್ದರು. ಇದಕ್ಕೂ ಮೊದಲು 2016ರ ರಿಯೋ ಒಲಿಂಪಿಕ್ಸ್ ಕೂಟಕ್ಕೆ ಚಾನು ಅರ್ಹತೆ ಪಡೆದುಕೊಂಡಿದ್ದರು.
ಆದರೆ ಸೋತು ಭಾರೀ ನಿರಾಸೆ ಅನುಭವಿಸಿದ್ದರು. ಇದೀಗ ಕಾಮನ್‌ವೆಲ್ತ್ ಗೆಲುವಿನಿಂದ ರಿಯೋ ಒಲಿಂಪಿಕ್ಸ್ ಸೋಲಿನ
ನೋವನ್ನು ಮರೆತಿದ್ದೇನೆ ಎಂದು ಸ್ಪರ್ಧೆಯ ಬಳಿಕ ಚಾನು ಪ್ರತಿಕ್ರಿಯಿಸಿದ್ದಾರೆ.