Advertisement

ಬ್ಯಾಡ್ಮಿಂಟನ್‌: ಭಾರತಕ್ಕೆ ಮುನ್ನಡೆ

06:30 AM Apr 06, 2018 | Team Udayavani |

ಗೋಲ್ಡ್‌ ಕೋಸ್ಟ್‌: ಭಾರತೀಯ ಶಟ್ಲರ್‌ಗಳು ಗೇಮ್ಸ್‌ನ ಬ್ಯಾಡ್ಮಿಂಟನ್‌ ಸ್ಪರ್ಧೆಯ ಮಿಕ್ಸೆಡ್‌ ತಂಡ ವಿಭಾಗದಲ್ಲಿ ಶ್ರೀಲಂಕಾ ಮತ್ತು ಪಾಕಿಸ್ಥಾನ ವಿರುದ್ಧ 5-0 ಅಂತರದಿಂದ ಸುಲಭವಾಗಿ ಜಯ ಸಾಧಿಸಿದೆ.

Advertisement

ವಿಶ್ವದ ಎರಡನೇ ರ್‍ಯಾಂಕಿನ ಕಿದಂಬಿ ಶ್ರೀಕಾಂತ್‌ ಮತ್ತು ಸೈನಾ ನೆಹ್ವಾಲ್‌ ಅವರ ಭರ್ಜರಿ ಆಟದಿಂದಾಗಿ ಭಾರತವು ಬೆಳಗ್ಗೆ ಶ್ರೀಲಂಕಾ ಮತ್ತು ಸಂಜೆ ಪಾಕಿಸ್ಥಾನವನ್ನು ಸುಲಭವಾಗಿ ಮಣಿಸಿತು.

ಪಾಕಿಸ್ಥಾನ ವಿರುದ್ಧದ ಸಿಂಗಲ್ಸ್‌ ಪಂದ್ಯದಲ್ಲಿ ಶ್ರೀಕಾಂತ್‌ ಮುರಾದ್‌ ಅಲಿ ಅವರನ್ನು 21-16, 22-20 ಗೇಮ್‌ಗಳ ಕಠಿನ ಹೋರಾಟದಲ್ಲಿ ಜಯ ಸಾಧಿಸಿದರು. ಇದೇ ವೇಳೆ ಸೈನಾ ಮಹೂರ್‌ ಶಹಜಾದ್‌ ಅವರನ್ನು 21-7, 21-11 ಗೇಮ್‌ಗಳಿಂದ ಸುಲಭವಾಗಿ ಮಣಿಸಿ ಐದು ಪಂದ್ಯಗಳ ಹೋರಾಟದಲ್ಲಿ 3-0 ಮುನ್ನಡೆ ಸಾಧಿಸಿ ಗೆಲುವು ಖಚಿತಪಡಿಸಿದರು.

ಪುರುಷರ ಡಬಲ್ಸ್‌ನಲ್ಲಿ ಪ್ರಣವ್‌ ಚೋಪಾx ಮತ್ತು ಚಿರಾಗ್‌ ಶೆಟ್ಟಿ ಅವರು ಮುಹಮ್ಮದ್‌ ಇರ್ಫಾನ್‌ ಸಯೀದ್‌ ಭಟ್ಟಿ ಮತ್ತು ಮುರಾದ್‌ ಅಲಿ ಅವರನ್ನು 21-9, 21-15 ಗೇಮ್‌ಗಳಿಂದ ಉರುಳಿಸಿದರೆ ವನಿತೆಯರ ಡಬಲ್ಸ್‌ನಲ್ಲಿ ಅಶ್ವಿ‌ನಿ ಪೊನ್ನಪ್ಪ ಮತ್ತು ರುತ್ವಿಕಾ ಅವರು ಮಹೂರ್‌ ಮತ್ತು ಪಲ್ವಾಶಾ ಅವರನ್ನು 21-6, 21-10 ಗೇಮ್‌ಗಳಿಂದ ಕೆಡಹಿ ಕ್ಲೀನ್‌ಸಿÌàಪ್‌ ಸಾಧಿಸಿದರು.

ಮುಂದಿನ ಸುತ್ತಿನಲ್ಲಿ ಭಾರತವು ಸ್ಕಾಟ್ಲೆಂಡ್‌ ತಂಡವನ್ನು ಎದುರಿಸಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next