ಬ್ರಿಸ್ಬೇನ್: ಗೇಮ್ಸ್‌ನ ಶೂಟಿಂಗ್ ಸ್ಪರ್ಧೆಯಲ್ಲಿ ಹೀನಾ ಸಿಧು ಗೇಮ್ಸ್ ದಾಖಲೆಯೊಂದಿಗೆ ಚಿನ್ನ ಗೆದ್ದ ಸಾಧನೆಗೈದರೆ ಪದಕ ಭರವಸೆಯ ಗಗನ್ ನಾರಂಗ್ ನಿರೀಕ್ಷಿತ ನಿರ್ವಹಣೆ ನೀಡದೇ ನಿರಾಶೆಯಲ್ಲಿ ಮುಳುಗಿಸಿದರು. ಚೈನ್ ಸಿಂಗ್ ನಾಲ್ಕನೇ ಸ್ಥಾನ ಪಡೆಯಲಷ್ಟೇ ಶಕ್ತರಾದರು. ವನಿತೆಯರ 25 ಮೀ. ಪಿಸ್ತೂಲ್ ವಿಭಾಗದಲ್ಲಿ 28ರ ಹರೆಯದ ಸಿಧು ಅಂತಿಮ ಹೊಡೆತದಲ್ಲಿ 38 ಅಂಕ ಪಡೆಯುವ ಮೂಲಕ ಚಿನ್ನಕ್ಕೆ ಗುರಿಯಿಟ್ಟರು. 35ರ ಹರೆಯದ ಆಸ್ಟ್ರೇಲಿಯದ ಎಲೆನಾ ಗಾಲಿಯಾಬೋವಿಚ್ ಬೆಳ್ಳಿ ಮತ್ತು ಮಲೇಶ್ಯದ ಅಲಿಯಾ ಅಜಾಹರಿ ಕಂಚು ಪಡೆದರು. ಇದು ಶೂಟಿಂಗ್ ಸ್ಪರ್ಧೆಯಲ್ಲಿ ಭಾರತಕ್ಕೆ ಲಭಿಸಿದ ಮೂರನೇ ಚಿನ್ನವಾಗಿದೆ. ಇದೇ ವಿಭಾಗದಲ್ಲಿ ಸ್ಪರ್ಧಿಸಿದ್ದ ಭಾರತದ ಅನುರಾಜ್ ಸಿಂಗ್ ನೀರಸವಾಗಿ ಆಡಿ ಆರನೇ ಸ್ಥಾನ ಪಡೆದರು.
ಸದ್ಯ ಸಾಗುತ್ತಿರುವ ಗೇಮ್ಸ್‌ನಲ್ಲಿ ಇದು ಸಿಧು ಅವರಿಗೆ ಸಿಕ್ಕಿದ ಎರಡನೇ ಪದಕವಾಗಿದೆ. ಅವರು ತನ್ನ ನೆಚ್ಚಿನ 10 ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿ ತನ್ನ ದೇಶದವರೇ ಆದ 16ರ ಹರೆಯದ ಮನು ಭಾಕರ್‌ಗೆ ಶರಣಾಗಿ ಬೆಳ್ಳಿಗೆ ತೃಪ್ತಿಪಟ್ಟುಕೊಂಡಿದ್ದರು. 25 ಮೀ. ಪಿಸ್ತೂಲ್ ವಿಭಾಗದಲ್ಲಿ ಇದು ಸಿಧು ಅವರ ಮೊದಲ ಚಿನ್ನವಾಗಿದೆ.
ನರ ಸಮಸ್ಯೆಯಿಂದ ಟ್ರಿಗರ್ ಬೆರಳಿನಿಂದ ಗುರಿ ಇಡಲು ಅವರು ಒದ್ದಾಡುತ್ತಿದ್ದರೂ ಅಮೋಘ ನಿರ್ವಹಣೆಯ ಮೂಲಕ ಮೂರನೇ ಸ್ಥಾನಿಯಾಗಿ ಫೈನಲಿಗೇರಿದ್ದರು. ಟ್ರಿಗರ್ ಬೆರಳಲ್ಲಿ ನೋವಿನ ಸಂವೇದನೆ ಯಿದ್ದರೂ ಸರಿಯಾಗಿ ಗುರಿ ಇಡಲು ಸಾಧ್ಯ ವಾಗಿದ್ದಕ್ಕೆ ಸಂತೋಷ ವಾಗುತ್ತಿದೆ.ಆಟದ ಕಡೆ ಹೆಚ್ಚಿನ ಗಮನ ವಿದ್ದ ಕಾರಣ ನೋವಿನ ಅನುಭವ ಅಷ್ಟೇನೂ ಆಗಿರ ಲಿಲ್ಲ ಎಂದು ಸಿಧು ತಿಳಿಸಿದರು. ಈ ಸಮಸ್ಯೆಗೆ ಯಾವಾಗಲೂ ಫಿಸಿಯೋಥೆರಪಿ ಮಾಡಿಸುತ್ತಿದ್ದೆ. ಆದರೆ ಈ ದಿನ ನನ್ನ ಬೆರಳು ಮುಟ್ಟದಂತೆ ಫಿಸಿಯೋಗೆ ಹೇಳಿದ್ದೆ. ಇದರಿಂದ ನನಗೆ ಸ್ವಲ್ಪಮಟ್ಟಿನ ರಿಲೀಫ್ ಸಿಕ್ಕಿದ್ದರಿಂದ ಎಲ್ಲವೂ ಸುಗಮವಾಗಿ ಸಾಗಿತು ಎಂದು ಸಿಧು ವಿವರಿಸಿದರು.
ಟ್ರಿಗರ್ ಬೆರಳಲ್ಲಿ ನೋವಿನ ಸಂವೇದನೆಯಿದ್ದರೂ ಸರಿಯಾಗಿ ಗುರಿ ಇಡಲು ಸಾಧ್ಯವಾಗಿದ್ದಕ್ಕೆ ಸಂತೋಷ ವಾಗುತ್ತಿದೆ.ಆಟದ ಕಡೆ ಹೆಚ್ಚಿನ ಗಮನವಿದ್ದ ಕಾರಣ ನೋವಿನ ಅನುಭವ ಅಷ್ಟೇನೂ ಆಗಿರಲಿಲ್ಲ
25 ಮೀ. ಪಿಸ್ತೂಲ್ ವಿಭಾಗದಲ್ಲಿ ಚಿನ್ನ
ಗಂಡನಿಂದಲೇ ತರಬೇತಿ ಪಡೆದ ಹೀನಾ ಸಿಧು ವೃತ್ತಿಯಲ್ಲಿ ದಂತವೈದ್ಯೆಯಾಗಿದ್ದಾರೆ