ರಾಯಚೂರು: ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಡಿವಾಣ ಹಾಕುವಂತೆ ಆಗ್ರಹಿಸಿ ವೆಲ್ಫೆರ್ ಪಾರ್ಟಿ ಆಫ್ ಇಂಡಿಯಾದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಡಿಸಿ ಕಚೇರಿ ಎದುರಿನ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದ ಬಳಿಕ ಈ ಕುರಿತು ಡಿಸಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ರೈಲದ ಬೆಲೆ 50 ಡಾಲರ್‌ಗೆ ಕುಸಿದಿದೆ. ಆದರೂ ಕೇಂದ್ರ ಸರ್ಕಾರ ಪೆಟ್ರೋಲ್ ಬೆಲೆಯನ್ನು ಪ್ರತಿ ಲೀಟರ್‌ಗೆ 90 ರೂ.ಗೆ ಹೆಚ್ಚಿಸಿರುವುದು ಖಂಡನೀಯ.
ಈ ಹಿಂದೆ ಯುಪಿಎ ಸರ್ಕಾರದಲ್ಲಿ ಕಚ್ಚಾ ತೈಲ ಬೆಲೆ ಬ್ಯಾರಲ್‌ಗೆ 130 ಡಾಲರ್ ಇದ್ದಾಗ ಪೆಟ್ರೋಲ್ ಬೆಲೆ ಲೀಟರ್ 70 ರೂ. ಇತ್ತು. ಆದರೆ, ಕಚ್ಚಾ ತೈಲ ಬೆಲೆ ಕಡಿಮೆಯಾದರೂ ಬೆಲೆ ಇಳಿಸುತ್ತಿಲ್ಲ ಎಂದು ದೂರಿದರು. ತೈಲ ಬೆಲೆ ದಿನೇದಿನೇ ಹೆಚ್ಚಿಸುತ್ತಿದ್ದು,ದೇಶದ ಬಡ ಮಧ್ಯಮ ವರ್ಗದ ಜನ ಪರದಾಡುವಂತಾಗಿದೆ. ಸರಕು ಸಾಗಣೆ ದರವೂ ಹೆಚ್ಚಾಗಿ ದಿನಬಳಕೆ ವಸ್ತುಗಳು ಕೂಡ ದುಬಾರಿಯಾಗುತ್ತಿವೆ. ಕೇಂದ್ರ ಸರ್ಕಾರ ಕೂಡಲೇ ತೈಲ ಬೆಲೆ ಇಳಿಸುವಂತೆ ರಾಷ್ಟ್ರಪತಿ ಸೂಕ್ತ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ:ಐಟಿಐ ಆನ್‌ಲೈನ್ ಪ್ರವೇಶ ಪರೀಕ್ಷೆಗೆ ವಿರೋಧ
ಪಕ್ಷದ ಜಿಲ್ಲಾ ಕಾರ್ಯಾಧ್ಯಕ್ಷ ಅಬ್ದುಲ್ ಲತೀಫ್ ಸಾಬ್, ಕಾರ್ಯಕರ್ತರಾದ ಎಂ.ಡಿ ಫಾರೂಖ್, ಅಬ್ದುಲ್ ಹುಸೇನ್, ನೂರುದ್ದೀನ್, ಮಕೂºಲ್ ಹುಸೇನ್, ಅಬ್ದುಲ್ ಘನಿ, ಸಾ ಕ್ ಪಾಷಾ ಸೇರಿ ಇತರರು ಪ್ರತಿಭಟನೆಯಲ್ಲಿದ್ದರು