Advertisement
ಸರ್ಕಾರಿ ಶಾಲೆಯ ಒಂದರಿಂದ 10ನೇ ತರಗತಿಯ 40 ಲಕ್ಷಕ್ಕೂ ಅಧಿಕ ಮಕ್ಕಳಿಗೆ ಸರ್ಕಾರದಿಂದ ಸಮವಸ್ತ್ರ, ಪಠ್ಯ ಪುಸ್ತಕ, ಬಿಸಿಯೂಟ, ಹಾಲು, ಸೈಕಲ್ ಸಹಿತವಾಗಿ ಅನೇಕ ಸೌಲಭ್ಯ ಉಚಿತವಾಗಿ ನೀಡಲಾಗುತ್ತಿದೆ. ಇದಲ್ಲದೆ, ಖಾಸಗಿ ಶಾಲೆಯಲ್ಲಿ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಎ) ಅಡಿಯಲ್ಲಿ ವ್ಯಾಸಂಗ ಮಾಡುತ್ತಿರುವ ಸುಮಾರು 6 ಲಕ್ಷ ವಿದ್ಯಾರ್ಥಿಗಳ ಶುಲ್ಕ ಮರುಪಾವತಿಯೂ ಸರ್ಕಾರವೇ ಮಾಡುತ್ತಿದೆ.ಇದರಲ್ಲಿ ಕೆಲವೊಂದು ಯೋಜನೆಗೆ ಕೇಂದ್ರ ಸರ್ಕಾರದಿಂದ ಅನುದಾನ ಬರುತ್ತಿತ್ತು. ಇನ್ನು ಕೆಲವು ಯೋಜನೆಗೆ ರಾಜ್ಯ ಸರ್ಕಾರವೇ ಅನುದಾನ ಭರಿಸುತ್ತಿತ್ತು. ಮತ್ತೆ ಕೆಲವು ಯೋಜನೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಅನುಷ್ಠಾನಗೊಳಿಸಲಾಗಿದೆ.
Related Articles
Advertisement
ಆರ್ ಟಿಇ ಅನುದಾನ ಬಾಕಿ: ಕೇಂದ್ರ ಸರ್ಕಾರದ ಅನುದಾನದ ಕೊರತೆ ಒಂದೆಡೆಯಾದರೆ, ರಾಜ್ಯ ಸರ್ಕಾರವು ಕೂಡ ಆರ್‌ಟಿಇ ಮಕ್ಕಳ ಶುಲ್ಕ ಮರುಪಾವತಿ ಅನುದಾನವನ್ನು ಖಾಸಗಿ ಶಾಲೆಗಳಿಗೆ ನೀಡಿಲ್ಲ. 2019-20ನೇ ಸಾಲಿನ ಆರ್‌ಟಿಇ ಶುಲ್ಕ ಮರುಪಾವತಿಯೇ ಸಾವಿರ ಕೋಟಿ ರೂ.ಗಳಿಗೂ ಹೆಚ್ಚಿದೆ. ಮುಂದಿನ ವರ್ಷವೂ ಈ ಅನುದಾನ ನೀಡಬೇಕು. ಆರ್ಥಿಕತೆ ಸುಧಾರಿಸುವ ಮೊದಲೇ ಹಣಕಾಸಿನ ಹೊಡೆತ ಬೀಳುವ ಸಾಧ್ಯತೆಯೂ ಇದೆ ಮತ್ತು ಕೆಲವೊಂದು ಯೋಜನೆಗಳನ್ನು ಸರ್ಕಾರ ಒಮ್ಮಿಂದೊಮ್ಮೆಲೆ ರದ್ದು ಮಾಡಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತಿದೆ.
ಮುಂದಿನ ಶೈಕ್ಷಣಿಕ ವರ್ಷದ ಅನುದಾನ ಹಂಚಿಕೆ ಕುರಿತು ಯಾವುದೇ ಸ್ಪಷ್ಟತೆ ಇನ್ನು ಸಿಕ್ಕಿಲ್ಲ. ಕೇಂದ್ರದ ಅನುದಾನ ಹಂಚಿಕೆ ಕುರಿತ ಸಭೆ ಇನ್ನೂ ನಡೆದಿಲ್ಲ. ಕೊರೊನಾ ಭೀತಿ ದೇಶದಾದ್ಯಂತ ಇರುವುದರಿಂದ ಸ್ವಲ್ಪ ವಿಳಂಬ ಆಗಬಹುದು. –ಡಾ.ಟಿ.ಎಂ.ರೇಜು, ಯೋಜನಾ ನಿರ್ದೇಶಕರು, ರಾಜ್ಯ ಸಮಗ್ರ ಶಿಕ್ಷಣ
–ರಾಜು ಖಾರ್ವಿ ಕೊಡೇರಿ