Advertisement

ಕಟ್‌ ಕಾಪಿ ಪೇಸ್ಟ್‌

08:35 PM Feb 23, 2020 | Sriram |

ಲ್ಯಾರಿ ಟೆಸ್ಲರ್‌ ಎಂಬ ಕಂಪ್ಯೂಟರ್‌ ವಿಜ್ಞಾನಿ ಕೆಲ ದಿನಗಳ ಹಿಂದಷ್ಟೆ ತೀರಿಕೊಂಡರು. ಜಗತ್ತಿನೆಲ್ಲೆಡೆ ಅದು ಸುದ್ದಿಯಾಯಿತು. ಏಕೆಂದರೆ, ಇಂದು ಜಗತ್ತಿನಲ್ಲಿರುವ ಎಲ್ಲಾ ಕಂಪನಿಗಳ ಎಲ್ಲಾ ಕಂಪ್ಯೂಟರ್‌ಗಳಲ್ಲಿ ಕಂಡು ಬರುವ ಸವಲತ್ತೂಂದನ್ನು ಮೊದಲ ಬಾರಿಗೆ ನೀಡಿದ್ದು ಟೆಸ್ಲರ್‌.

Advertisement

ಅದು “ಕಟ್‌- ಕಾಪಿ- ಪೇಸ್ಟ್‌’ ಸವಲತ್ತು. ಇದು, ಅತ್ಯಂತ ಸರಳವಾದರೂ ತುಂಬಾ ಪ್ರಾಮುಖ್ಯತೆ ಪಡೆದಿರುವ ಸವಲತ್ತಾಗಿದೆ. ಟೆಸ್ಲರ್‌ ಅದನ್ನು ಅಭಿವೃದ್ಧಿ ಪಡಿಸಿದ್ದು ಝೆರಾಕ್ಸ್‌ ಸಂಸ್ಥೆಯಲ್ಲಿ. ಇಂದಿನ ಕಂಪ್ಯೂಟರ್‌ಗಳ ಸ್ವರೂಪ ಮತ್ತು ಕಾರ್ಯಾಚರಣೆಯ ಮೂಲ ಝೆರಾಕ್ಸ್‌ ಕಂಪನಿಯಲ್ಲೇ ತಯಾರಾಗಿತ್ತು ಎಂದರೆ ಅತಿಶಯೋಕ್ತಿಯಲ್ಲ. ಆದರೆ ಒಂದೇ ಸಮಸ್ಯೆ ಎಂದರೆ ಅವೆಲ್ಲಾ ಆವಿಷ್ಕಾರಗಳನ್ನು ಅನುಷ್ಠಾನಕ್ಕೆ ತರುವುದಕ್ಕೆ ಆ ಸಂಸ್ಥೆಗೆ ಇಷ್ಟವಿರಲಿಲ್ಲ. ಅದರ ಮೂಲ ಗುರಿ ಏನಿದ್ದರೂ ಝೆರಾಕ್ಸ್‌ ಕಾಪಿ ಯಂತ್ರಗಳನ್ನು ಅಭಿವೃದ್ಧಿ ಪಡಿಸುವತ್ತ ಮಾತ್ರ ಇತ್ತು.

ಆದರೆ, ಸಂಸ್ಥೆ ತನ್ನ ಖ್ಯಾತಿಯನ್ನು ಹೆಚ್ಚಿಸಿಕೊಳ್ಳಲು ಆಯ್ದ ಉದ್ಯಮದ ಮಂದಿಯನ್ನು ಕರೆಸಿ ತಮ್ಮ ಆವಿಷ್ಕಾರಗಳ ಪ್ರಾತ್ಯಕ್ಷಿಕೆ ನೀಡುತ್ತಿತ್ತು. ಹಾಗೆ ಝೆರಾಕ್ಸ್‌ ಸಂಸ್ಥೆಗೆ ಭೇಟಿ ಕೊಟ್ಟವರು ಆ್ಯಪಲ್‌ ಸಂಸ್ಥೆಯ ಸ್ಟೀವ್‌ ಜಾಬ್ಸ್. ಆಗಿನ್ನೂ ಆ್ಯಪಲ್‌ ಯಾವುದೇ ಉತ್ಪನ್ನವನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿರಲಿಲ್ಲ. ಹೇಳಬೇಕೆಂದರೆ, ಆ್ಯಪಲ್‌ ಹೆಸರನ್ನೇ ಯಾರೂ ಕೇಳಿರಲಿಲ್ಲ. ಟೆಸ್ಲರ್‌ನ ಆವಿಷ್ಕಾರಗಳನ್ನು ಕಂಡು ಜಾಬ್ಸ್ ಮಂತ್ರಮುಗ್ಧರಾಗಿದ್ದರು.

ಯಾವ ತಂತ್ರಜ್ಞಾನ ಝೆರಾಕ್ಸ್‌ ಕಂಪನಿಯಲ್ಲಿ ಪ್ರದರ್ಶನಕ್ಕೆ ಮಾತ್ರ ಬಳಕೆಯಾಗುತ್ತಿತ್ತೋ ಅದನ್ನು ಸ್ಟೀವ್‌ ತಮ್ಮ ಸಂಸ್ಥೆಯ ಮೊದಲ ಕಂಪ್ಯೂಟರ್‌ ತಯಾರಿಯಲ್ಲಿ ಬಳಸಿಕೊಂಡರು. ಅಷ್ಟೇ ಅಲ್ಲ ಸ್ಟೀವ್‌ ಜಾಬ್ಸ್ ಮತ್ತು ಟೆಸ್ಲರ್‌ಗೆ ಸ್ನೇಹ ಬೆಳೆಯಿತು. ಮುಂದೆ ಟೆಸ್ಲರ್‌ ಝೆರಾಕ್ಸ್‌ ಸಂಸ್ಥೆ ತೊರೆದು ಆ್ಯಪಲ್‌ ಸೇರಿಕೊಂಡರು. ಅಲ್ಲಿ 17 ವರ್ಷಗಳ ಕಾಲ ಅನೇಕ ಅಭಿವೃದ್ಧಿ ಕೆಲಸಗಳಲ್ಲಿ ಭಾಗಿಯಾದರು. ಕಟ್‌ ಕಾಪಿ ಪೇಸ್ಟ್‌ ತಂತ್ರಜ್ಞಾನ ಮೊದಲು ಅಳವಡಿಕೆಯಾಗಿದ್ದು ಆ್ಯಪಲ್‌ ಕಂಪ್ಯೂಟರ್‌ನಲ್ಲಿ. ಇಂದು ಕಟ್‌- ಕಾಪಿ- ಪೇಸ್ಟ್‌ ಸವಲತ್ತಿಲ್ಲದೆ ಯಾವುದೇ ಗಣಕಯಂತ್ರವನ್ನು ಊಹಿಸಿಕೊಳ್ಳುವುದೇ ಕಷ್ಟ.

Advertisement

Udayavani is now on Telegram. Click here to join our channel and stay updated with the latest news.

Next