Advertisement

ಲಾಕ್ ಡೌನ್ ನಿಯಮ ಪಾಲಿಸದ ಗ್ರಾಹಕರು : ಪೊಲೀಸರಿಂದ ಎಚ್ಚರಿಕೆ

11:54 AM May 10, 2021 | Team Udayavani |

ಮೂಡುಬಿದಿರೆ : ಹದಿನಾಲ್ಕು ದಿನಗಳ ಲಾಕ್ಡೌನ್ ನ ಕಠಿಣ ನಿಯಮಗಳ ಪಾಲನೆಯ ಮೊದಲ ದಿನವಾದ ಸೋಮವಾರ ಮೂಡುಬಿದಿರೆ ಯಲ್ಲಿ ಮುಂಜಾನೆ 6 ರಿಂದ 9ರ ವರೆಗೆ ತೆರೆದಿದ್ದ ಅವಶ್ಯಕ ವಸ್ತುಗಳ ಅಂಗಡಿಗಳಲ್ಲಿ ವಿಪರೀತ  ಜನಸಂದಣಿ ಕಂಡುಬಂದಿದೆ.

Advertisement

ತರಕಾರಿ, ದಿನಸಿ, ಹಣ್ಣು, ಹಾಲು, ಪತ್ರಿಕೆ, ಬೇಕರಿ ಅಂಗಡಿಗಳಲ್ಲಿ ಜನ ಸಮೂಹವೇ ಕಂಡುಬಂತು. ಇನ್ನು ದಿನವಿಡೀ ತೆರೆದಿರುವ ಮೆಡಿಕಲ್ ಸ್ಟೋರ್ ಗಳಲ್ಲಿಯೂ ಜನ ಕಿಕ್ಕಿರಿದಿದ್ದರು.

ರಸ್ತೆ ಬದಿ ಬೇಕಾಬಿಟ್ಟಿಯಾಗಿ ವಾಹನಗಳನ್ನು ಪಾರ್ಕ್ ಮಾಡಲಾಗಿದ್ದು, ವಾಹನಗಳ ಚಾಲಕರಿಗೆ ಪೊಲೀಸ್ ಗಸ್ತು ಪಡೆಯವರ ಎಚ್ಚರಿಕೆ ನೀಡಿದ್ದಾರೆ. ಎಲ್ಲ ಕಡೆ ಜನ ಮಾಸ್ಕ್ ಹಾಕಿಕೊಂಡಿದ್ದರಾದರೂ ಕೂಡ ವೈಯಕ್ತಿಕವಾಗಿ ಅಂತರ ಕಾಪಾಡಿಕೊಳ್ಳಲಾಗದ ಸ್ಥಿತಿ ಕಂಡು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next