Advertisement

ಬ್ಯಾಂಕ್‌ ಬೆಳವಣಿಗೆಗೆ ಗ್ರಾಹಕ-ಸಿಬ್ಬಂದಿ ಸಹಕಾರ ಅಗತ್ಯ: ನಾಗಠಾಣ

04:39 PM Dec 28, 2020 | Suhan S |

ನಿಡಗುಂದಿ: ಗ್ರಾಹಕ, ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಸಹಕಾರದಿಂದ ನಡೆದರೆಬ್ಯಾಂಕುಗಳು ಆರ್ಥಿಕವಾಗಿ ಸಬಲವಾಗಲು ಸಾಧ್ಯವಾಗುತ್ತವೆ ಎಂದು ಸ್ವಾಮಿ ವಿವೇಕಾನಂದ ಸಹಕಾರಿ ಬ್ಯಾಂಕ್‌ ಅಧ್ಯಕ್ಷ ಸಿದ್ದಣ್ಣ ನಾಗಠಾಣ ಹೇಳಿದರು.

Advertisement

ಪಟ್ಟಣದ ಜಿವಿವಿಎಸ್‌ ಕಾಲೇಜು ಆವರಣದಲ್ಲಿ ನಡೆದ ಸ್ವಾಮಿ ವಿವೇಕಾನಂದಬ್ಯಾಂಕ್‌ನ 25ನೇ ವರ್ಷದ ಸರ್ವಸಾಧಾರಣ ಸಭೆಯಲ್ಲಿ ಅವರು ಮಾತನಾಡಿದರು.

ಸಹಕಾರ ಸಂಸ್ಥೆಗಳು ಕಟ್ಟುವುದು ಸುಲಭ. ಆದರೆ, ಕಟ್ಟಿದ ಸಂಸ್ಥೆಗಳನ್ನು ಪ್ರಗತಿ ಪಥದತ್ತ ನಡೆಸುವುದು ಸವಾಲಿನ ಕೆಲಸವಾಗಿರುತ್ತದೆ. ಎಲ್ಲ ಸವಾಲುಗಳನ್ನುಮೆಟ್ಟಿ ಕಳೆದ 25 ವರ್ಷದಿಂದ ಸ್ವಾಮಿ ವಿವೇಕಾನಂದ ಸಹಕಾರಿ ಬ್ಯಾಂಕ್‌ ಪ್ರಗತಿಯ ಹಾದಿಯಲ್ಲಿ ನಡೆಯುತ್ತಿದೆ. ಆರ್‌ಬಿಐ ನಿರ್ದೇಶನದ ಹಾದಿಯ ಜತೆಗೆ ಗ್ರಾಹಕರ ಹಿತಕಾಯುವಲ್ಲಿ ಬ್ಯಾಂಕು ಮುಂಚೂಣಿಯಲ್ಲಿ ಸಾಗುತ್ತಿದೆ. ಈ ನಿಟ್ಟಿನಲ್ಲಿ ಕಳೆದೆರಡುವರ್ಷದಿಂದ ವಿಡಿಸಿಸಿ ಬ್ಯಾಂಕ್‌ನಿಂದ ಉತ್ತಮ ಕಾರ್ಯ ನಿರ್ವಹಣೆ ಪ್ರಶಸ್ತಿ ಪಡೆದು ಜನರ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು.

ಸಹಕಾರ ಸಂಸ್ಥೆಗಳ ಪ್ರಗತಿಯ ಹಾದಿನಿಂತ ನೀರಾಗಬಾರದು. ಗ್ರಾಹಕರ ಆರ್ಥಿಕ ಸಮಸ್ಯೆಗಳಿಗೆ ನಿರಂತರ ಶ್ರಮಿಸುತ್ತ ಬ್ಯಾಂಕ್‌ನ್ನು ಎತ್ತರಕ್ಕೆ ಕೊಂಡೋಯ್ಯಬೇಕು. ಸಂಸ್ಥೆಯಆಡಳಿತ ಮಂಡಳಿ ಸಿಬ್ಬಂದಿ ಸಮಚಿತ್ತದಿಂದಗ್ರಾಹಕರ ಸಮಸ್ಯೆಯನ್ನು ಅರಿತು ಕಾರ್ಯಮಾಡಬೇಕು. ಸಿಬ್ಬಂದಿ ಹಾಗೂ ಗ್ರಾಹಕರು ಪರಸ್ಪರ ವಿಸ್ವಾಸದಿಂದ ನಡೆದುಕೊಂಡುಬ್ಯಾಂಕ್‌ನ್ನು ಲಾಭದತ್ತ ಸಾಗಿಸಬೇಕು ಎಂದರು.

ಸ್ವಾಮಿ ವಿವೇಕಾನಂದ ಬ್ಯಾಂಕ್‌ ವ್ಯವಸ್ಥಾಪಕ ರವೀಂದ್ರ ಕ್ಯಾದಿಗ್ಗೇರಿ ಮಾತನಾಡಿ, ಕಳೆದ 25ವರ್ಷದಿಂದ ನಡೆದಕೊಂಡು ಬಂದಿರುವಸಂಸ್ಥೆ, ಹಲವಾರು ಏಳು ಬಿಳುಗಳನ್ನು ಕಂಡುಸಾಧನೆಯ ಹಾದಿಯಲ್ಲಿ ಸಾಗುತ್ತಿದೆ. 1 ಕೋಟಿ ಅಧಿಕ ಷೇರು ಬಂಡವಾಳ ಹೊಂದಿದ್ದು 22 ಕೋಟಿಗೂ ಹೆಚ್ಚು ಠೇವುಗಳನ್ನು ಹೊಂದಲಾಗಿದೆ. 26 ಕೋಟಿಗೂ ಅಧಿಕದುಡಿಯುವ ಬಂಡವಾಳ ಹೊಂದಿ 14 ಕೋಟಿಗೂ ಅಧಿಕ ಸಾಲ ವಿತರಿಸಿ 13.49 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ. ಬ್ಯಾಂಕಿನ ಪ್ರಗತಿಗೆ ಆಡಳಿತ ಮಂಡಳಿ ಸಹಕಾರಸಿಬ್ಬಂದಿ ಕಾರ್ಯನಿಷ್ಠೆ ಹಾಗೂ ಗ್ರಾಹಕರ ವಿಶ್ವಾಸ ವ್ಯವಹಾರದಿಂದ ಬ್ಯಾಂಕ್‌ ಮುನ್ನಡೆಸಾಗುತ್ತಿದೆ. ಬ್ಯಾಂಕ್‌ ಕಾರ್ಯ ಮನಗಂಡು ಎರಡು ವರ್ಷದಿಂದ ವಿಡಿಸಿಸಿ ಬ್ಯಾಂಕ್‌ ಉತ್ತಮ ಕಾರ್ಯ ನಿರ್ವಹಣೆ ಪ್ರಶಸ್ತಿ ನೀಡಿ ಗೌರವಿಸಿದೆ ಎಂದರು.

Advertisement

ಸ್ವಾಮಿ ವಿವೇಕಾನಂದ ಬ್ಯಾಂಕ್‌ ಉಪಾಧ್ಯಕ್ಷ ಬಸವರಾಜ ಮುಚ್ಚಂಡಿ, ವೃತ್ತಿಪರ ನಿರ್ದೇಶಕ ಎಂ.ಎನ್‌. ತಪಶೆಟ್ಟಿ,ನಿರ್ದೇಶಕರಾದ ಸಂಗಣ್ಣ ಕುಮಟಗಿ, ಎಂ.ಕೆ.ಚನ್ನಿಗಾವಿ, ಎಸ್‌.ಎಸ್‌. ಹುಕುಮನಾಳ, ಜಿ.ಆರ್‌. ಯಂಡಿಗೇರಿ, ಆರ್‌.ಬಿ. ಪೂಜಾರಿ,ವಿ.ಡಿ. ವಿಭೂತಿ ಬ್ಯಾಂಕ್‌ ಸಿಬ್ಬಂದಿಗಳಾದಎ.ಎಂ. ಕುಮಟಗಿ, ಎ.ವೈ. ಸಕ್ರಿ, ಎಸ್‌.ಬಿ.ಸಿರಾಳಶೆಟ್ಟಿ, ಬಸವರಾಜ ಕಿಣಗಿ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next