Advertisement
ಇದರಿಂದಾಗಿ ತಿಂಗಳಿಗೆ ಸುಮಾರು 10 ಲಕ್ಷ ರೂ. ಮೊತ್ತ ಪಾವತಿ ಆಗುತ್ತಿದೆ. ಈ ಹಿಂದೆ ವಾಮಂಜೂರು, ಕುಡುಪು, ಪಚ್ಚನಾಡಿ ಸಹಿತ ಸಿಟಿಗಿಂತ ದೂರದ ಪ್ರದೇಶದ ಮಂದಿಗೆ ಬಿಲ್ ಪಾವತಿ ಕಷ್ಟವಾಗುತ್ತಿತ್ತು. ಇದನ್ನು ಮನಗಂಡು ಪಾಲಿಕೆ ಮತ್ತು ಅಂಚೆ ವಿಭಾಗವು ಒಡಂಬಡಿಕೆ ಮುಖೇನ ಈ ಸೇವೆಯನ್ನು ಆರಂಭ ಮಾಡಿದೆ. ನೀರಿನ ಬಿಲ್‌ನ ಪ್ರತಿ ತಾರದೆ ಕೇವಲ ಬಿಲ್‌ನಲ್ಲಿ ನಮೂದಾಗಿರುವ ಸೀಕ್ವೆನ್ಸ್ ನಂಬರ್ ಹೇಳಿಯೂ ಬಿಲ್ ಕಟ್ಟಲು ಅವಕಾಶ ನೀಡಲಾಗಿದೆ. ಪ್ರಸ್ತುತ ಈ ಸೇವೆಯು ಮನಪಾ ವ್ಯಾಪ್ತಿಗೊಳಪಟ್ಟ ನೀರಿನ ಬಿಲ್‌ಗಳಿಗೆ ಮಾತ್ರ ಲಭ್ಯವಿದೆ. ಸಾರ್ವಜನಿಕರು ಮನೆಯ ನೀರಿನ ಬಿಲ್ 1,000 ರೂ. ದೊಳಗೆ ಬಂದಿದ್ದರೆ ಜಿಎಸ್‌ಟಿ ಒಳಗೊಂಡ ಸೇರಿ ಸೇವಾ ಶುಲ್ಕ ಸೇರಿ 6 ರೂ. ಹೆಚ್ಚುವರಿ ಪಾವತಿ ಮಾಡಬೇಕು. ಇನ್ನು, 1,001 ರೂ.ನಿಂದ 2,500 ರೂ.ವರೆಗೆ 12 ರೂ., 2,501 ರೂ.ನಿಂದ 5,000 ರೂ. ವರೆಗೆ 18 ರೂ., 5,000 ರೂ.ಗಿಂತ ಮೇಲ್ಪಟ್ಟು 24 ರೂ. ಸೇವಾ ಶುಲ್ಕವನ್ನು ನಿಗದಿಪಡಿಸಲಾಗಿದೆ.
Related Articles
Advertisement
ಸಾರ್ವಜನಿಕ ಸ್ನೇಹಿ ಸೇವೆ ನೀಡಲು ಅಂಚೆ ಇಲಾಖೆ ಬದ್ಧವಾಗಿದೆ. ಇದೇ ಕಾರಣಕ್ಕೆ ಪಾಲಿಕೆ ವ್ಯಾಪ್ತಿಯಲ್ಲಿ ಅಂಚೆ ಇಲಾಖೆಯಲ್ಲಿಯೂ ನೀರಿನ ಬಿಲ್ ಪಾವತಿಗೆ ಅವಕಾಶ ನೀಡಲಾಗಿದೆ. ಸದ್ಯ ಪ್ರತೀ ದಿನ ನೂರಕ್ಕೂ ಹೆಚ್ಚು ಮಂದಿ ನೀರಿನ ಬಿಲ್ ಪಾವತಿ ಮಾಡುತ್ತಿದ್ದಾರೆ. ಕೈಗಾರಿಕಾ ವಲಯಕ್ಕಿಂತಲೂ ಹೆಚ್ಚಾಗಿ ಮನೆಗಳಲ್ಲಿನ ನೀರಿನ ಬಿಲ್ ಪಾವತಿ ಆಗುತ್ತಿದೆ. ಮಂಗಳೂರಿನ ಬಹುತೇಕ ಅಂಚೆ ಕಚೇರಿಯಲ್ಲಿ ಈ ಸೇವೆ ಲಭ್ಯವಿದ್ದು, ಸಾರ್ವಜನಿಕರು ಪ್ರಯೋಜನಪಡೆಯಬಹುದು. -ಶ್ರೀಹರ್ಷ, ಹಿರಿಯ ಅಂಚೆ ಅಧೀಕ್ಷಕ, ಮಂಗಳೂರು ವಿಭಾಗ