Advertisement
1. ಪನೀರ್ ಬಟರ್ ಮಸಾಲಬೇಕಾಗುವ ಸಾಮಗ್ರಿ: ಬೆಣ್ಣೆ – 3 ಚಮಚ, ಪನೀರ್- 100 ಗ್ರಾಂ, ಟೊಮೇಟೊ -3, ಈರುಳ್ಳಿ- 2, ಚಕ್ಕೆ- 1 ಇಂಚು, ಜೀರಿಗೆ- 1 ಚಮಚ, ಶುಂಠಿ- 1 ಇಂಚು, ಹಸಿಮೆಣಸಿನಕಾಯಿ- 3, ಒಣಮೆಣಸಿನಪುಡಿ- 1 ಚಮಚ, ಅರಿಶಿನ- ಅರ್ಧ ಚಮಚ, ಧನಿಯಾ ಪುಡಿ- 1 ಚಮಚ, ಗೋಡಂಬಿ- 15, ಗರಂ ಮಸಾಲ- ಅರ್ಧ ಚಮಚ, ಕಸೂರಿ ಮೇಥಿ- ಅರ್ಧ ಚಮಚ, ರುಚಿಗೆ ಉಪ್ಪು, ಏಲಕ್ಕಿ.
ಬೇಕಾಗುವ ಸಾಮಗ್ರಿ: ಬೇಬಿ ಕಾರ್ನ್- 10, ಪಲಾವ್ ಎಲೆ-1, ಈರುಳ್ಳಿ- 1, ಟೊಮೇಟೊ-2, ಜೀರಿಗೆ- 1 ಚಮಚ, ಏಲಕ್ಕಿ, ಶುಂಠಿ- ಬೆಳ್ಳುಳ್ಳಿ ಪೇಸ್ಟ್- 1 ಚಮಚ, ಅರಿಶಿನ-ಧನಿಯ ಪುಡಿ- ಒಣಮೆಣಸಿನಪುಡಿ-ಜೀರಿಗೆ ಪುಡಿ-ಗರಂ ಮಸಾಲ- ತಲಾ ಅರ್ಧ ಚಮಚ, ಗೋಡಂಬಿ ಪೇಸ್ಟ್- ಅರ್ಧಕಪ್, ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು.
Related Articles
Advertisement
3. ಟೊಮೇಟೊ ಕುರ್ಮಬೇಕಾಗುವ ಸಾಮಗ್ರಿ: ಟೊಮೇಟೊ -3, ಈರುಳ್ಳಿ- 2, ಹುರಿಗಡಲೆ- ಒಂದು ಹಿಡಿ, ಕೊತ್ತಂಬರಿ ಸೊಪ್ಪು- ಅರ್ಧ ಕಂತೆ, ಕರಿಬೇವು, ಗೋಡಂಬಿ, ಸೋಂಪು- 2 ಚಮಚ, ಧನಿಯ- 1 ಚಮಚ, ಹಸಿಮೆಣಸು- 2, ತೆಂಗಿನ ತುರಿ- 1 ಕಪ್, ಸಾಸಿವೆ-ಜೀರಿಗೆ- 1 ಚಮಚ, ಚಕ್ಕೆ- 1 ಇಂಚು, ಉದ್ದಿನಬೇಳೆ- ಅರ್ಧ ಚಮಚ, ಅರಿಶಿನ-ಚಿಟಿಕೆ, ಒಣಮೆಣಸಿನಪುಡಿ- ಅರ್ಧ ಚಮಚ, ರುಚಿಗೆ ತಕ್ಕಷ್ಟು ಉಪ್ಪು. ಮಾಡುವ ವಿಧಾನ: ತೆಂಗಿನತುರಿ, ಹುರಿಗಡಲೆ, ಗೋಡಂಬಿ, ಧನಿಯ, ಸೋಂಪಿನ ಕಾಳು, ಹಸಿಮೆಣಸಿನಕಾಯಿಯನ್ನು ಸ್ವಲ್ಪ ನೀರಿನೊಂದಿಗೆ ನುಣ್ಣಗೆ ರುಬ್ಬಿಕೊಳ್ಳಿ. ಒಂದು ಬಾಣಲೆಗೆ 2 ಚಮಚ ಎಣ್ಣೆ ಹಾಕಿ, ಜೀರಿಗೆ- ಸಾಸಿವೆ, ಚಕ್ಕೆ, ಉದ್ದಿನಬೇಳೆ ಹಾಕಿ ಒಗ್ಗರಣೆ ಮಾಡಿ, ಹೆಚ್ಚಿದ ಈರುಳ್ಳಿ ಹಾಕಿ ಫ್ರೈ ಮಾಡಿ. ಈಗ ಹೆಚ್ಚಿದ ಟೊಮೇಟೊ ಹಾಕಿ ಮೆತ್ತಗಾಗುವವರೆಗೂ ಫ್ರೈ ಮಾಡಿ. ಅರಿಶಿನ, ಒಣಮೆಣಸಿನಪುಡಿ, ಉಪ್ಪು ಹಾಕಿ ಬೆರೆಸಿ. ಈಗ ರುಬ್ಬಿಕೊಂಡ ಮಿಶ್ರಣವನ್ನು ಬೆರೆಸಿ ಸ್ವಲ್ಪ ನೀರು ಹಾಕಿ, ಸಣ್ಣಗೆ ಹೆಚ್ಚಿದ ಕೊತ್ತಂಬರಿ, ಕರಿಬೇವು ಹಾಕಿ ಐದು ನಿಮಿಷ ಕುದಿಸಿ. 4. ತರಕಾರಿ ಸಾಗು
ಬೇಕಾಗುವ ಸಾಮಗ್ರಿ: ಕ್ಯಾರೆಟ್-ಬೀನ್ಸ್- ಹಸಿಬಟಾಣಿ -ಆಲೂಗಡ್ಡೆ- ತಲಾ ಒಂದು ಕಪ್, ಹುರಿಗಡಲೆ- ಅರ್ಧ ಕಪ್, ಕಾಯಿತುರಿ- 1 ಕಪ್, ಕೊತ್ತಂಬರಿ ಸೊಪ್ಪು – 1 ಸಣ್ಣಕಂತೆ, ಹಸಿಮೆಣಸಿನಕಾಯಿ- 5, ಶುಂಠಿ- ಅರ್ಧ ಇಂಚು, ಕರಿಮೆಣಸು, ಚಕ್ಕೆ-ಲವಂಗ, ಕರಿಬೇವು- ಒಂದು ಹಿಡಿ, ಅರಿಶಿನ-ಚಿಟಿಕೆ, ಜೀರಿಗೆ- ಸಾಸಿವೆ- ತಲಾ ಅರ್ಧ ಚಮಚ, ರುಚಿಗೆ ಉಪ್ಪು, ಎಣ್ಣೆ-ಸ್ವಲ್ಪ. ಮಾಡುವ ವಿಧಾನ: ಮೊದಲು ಕಾಯಿತುರಿ, ಹುರಿಗಡಲೆ, ಶುಂಠಿ, ಲವಂಗ, ಚಕ್ಕೆ, ಮೆಣಸು, ಕೊತ್ತಂಬರಿ ಸೊಪ್ಪು, ಕರಿಬೇವನ್ನು ಸ್ವಲ್ಪ ನೀರು ಹಾಕಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ. ನಂತರ, ಬಾಣಲೆಗೆ 2 ಚಮಚ ಎಣ್ಣೆ ಹಾಕಿ, ಸಾಸಿವೆ-ಜೀರಿಗೆ ಹಾಕಿ ಒಗ್ಗರಣೆ ಮಾಡಿ. ಇದಕ್ಕೆ, ತೊಳೆದು ಸಣ್ಣದಾಗಿ ಹೆಚ್ಚಿಕೊಂಡ ತರಕಾರಿಗಳನ್ನು ಹಾಕಿ, ಉಪ್ಪು- ನೀರು ಸೇರಿಸಿ ಬೇಯಿಸಿ. ತರಕಾರಿ ಬೆಂದ ನಂತರ, ರುಬ್ಬಿಕೊಂಡ ಮಿಶ್ರಣವನ್ನು ಸೇರಿಸಿ 5 ನಿಮಿಷ ಕುದಿಸಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ರುಚಿಕರ ತರಕಾರಿ ಸಾಗು ರೆಡಿ. – ಶ್ರುತಿ ಕೆ.ಎಸ್., ತುರುವೇಕೆರೆ