Advertisement
1.ಕರಿಬೇವಿನ ಗಿಡದ ಬುಡಕ್ಕೆ ಹುಳಿ ಮಜ್ಜಿಗೆ ಹಾಕಿದರೆ ಸಸಿ ಚೆನ್ನಾಗಿ ಬೆಳೆಯುತ್ತದೆ. 2.ಕರಿಬೇವಿನ ಎಸಳುಗಳನ್ನು ತೊಳೆದು, ತೆಳುವಾದ ಬಟ್ಟೆಯ ಮೇಲೆ ಆರಲು ಹಾಕಿ, ನಂತರ ಸ್ಟೀಲ್ ಅಥವಾ ಪ್ಲಾಸ್ಟಿಕ್ ಡಬ್ಬಿಯಲ್ಲಿ ಹಾಕಿಟ್ಟರೆ ಹೆಚ್ಚು ದಿನ ತಾಜಾ ಆಗಿರುತ್ತದೆ.
3. ಕರಿಬೇವಿನ ಎಸಳುಗಳಲ್ಲಿ ಹುಳ ಇರುವುದು ಸಾಮಾನ್ಯ. ಒಂದು ಚಿಟಿಕೆ ಅಕ್ಕಿ ಹಿಟ್ಟನ್ನು ಎಸಳುಗಳ ಮೇಲೆ ಸಿಂಪಡಿಸಿದರೆ, ಸಣ್ಣ ಹುಳುಗಳು ಎಲೆಯಿಂದ ಉದುರುತ್ತವೆ.
4. ಸೊಪ್ಪನ್ನು ಬಿಸಿಲಿನಲ್ಲಿ ಒಣಗಿಸಿ ಪುಡಿ ಮಾಡಿ, ಅದನ್ನು ಸೀಗೆ ಪುಡಿ ಜೊತೆ ಬೆರೆಸಿ ಶೇಖರಿಸಿ ಇಡಬಹುದು. ಈ ಮಿಶ್ರಣವನ್ನು ಶ್ಯಾಂಪೂವಿನ ಬದಲು ಬಳಸಿದರೆ, ಕೂದಲು ಕಪ್ಪಾಗಿ ಸೊಂಪಾಗಿ ಬೆಳೆಯುತ್ತದೆ.
5. ಕರಿಬೇವನ್ನು ತೊಳೆದು, ಒಣಗಿಸಿ ಶೇಖರಿಸಿಟ್ಟರೆ, ಅದನ್ನು ತಾಜಾ ಎಲೆಗಳ ಬದಲಿಗೆ ಒಗ್ಗರಣೆಗೆ ಹಾಕಬಹುದು.
6.ಹುರಿಗಡಲೆ ಜೊತೆ, ಒಣಗಿದ ಕರಿಬೇವಿನ ಎಸಳು ಸೇರಿಸಿ ಚಟ್ನಿ ಪುಡಿ ತಯಾರಿಸಬಹುದು.
7.ಹೀರೇ ಕಾಯಿ ಸಿಪ್ಪೆ ಅಥವಾ ಸೀಮೆ ಬದನೆ ಕಾಯಿ ಸಿಪ್ಪೆಯನ್ನು ಎಸೆಯುವ ಬದಲು, ಅದರ ಜೊತೆಗೆ ಕರಿಬೇವು ಸೇರಿಸಿ ಗಟ್ಟಿ ಚಟ್ನಿ ಮಾಡಿ ಸವಿಯಬಹುದು.
8. ಕರಿಬೇವಿನಲ್ಲಿ ಎ ಜೀವಸತ್ವ ಅಧಿಕವಾಗಿರುವುದರಿಂದ, ಮಂಡಕ್ಕಿ, ಅವಲಕ್ಕಿ, ಕಡಲೆಪುರಿಯಂಥ ಸ್ನ್ಯಾಕ್ಸ್‌ಗಳ ಜೊತೆ ಸೇರಿಸಿದರೆ, ಆರೋಗ್ಯಕ್ಕೆ ಒಳ್ಳೆಯದು.