Advertisement
ಪ್ರತಿ ವರ್ಷ ವಿಶ್ವ ಪರಿಸರ ದಿನ ಬರುತ್ತಿದ್ದಂತೆಯೇ ಪರಿಸರ ಸಂರಕ್ಷಣೆಗಾಗಿ ಕಠಿನ ಕಾನೂನು ರಚನೆಯಾಗಬೇಕೆಂಬ ಕೂಗು ಕೇಳಿಬರುತ್ತದೆ. ಜತೆಗೆ ನಿಯಮಾವಳಿಗಳ ಕುರಿತು ಚರ್ಚೆಯಾಗುತ್ತದೆ. ಕಾನೂನುಗಳು ಮಹತ್ವಪೂರ್ಣವೇ ಆದರೂ ಪರಿಸರದ ಸುಸ್ಥಿರತೆ ಖಾತ್ರಿಗೆ ಅವು ಮಾತ್ರವೇ ಸಾಕಾಗುವುದಿಲ್ಲ. ನಾವೂ ಪರಿಸರವನ್ನು ನಮ್ಮ ವ್ಯವಸ್ಥೆಯ ಭಾಗವನ್ನಾಗಿ ಮಾಡುವ ಅಗತ್ಯವಿದೆ. ಇಂದಿನ ದಿನದಲ್ಲಿನ ಕ್ಷಿಪ್ರ ಪ್ರಗತಿಯ ತಂತ್ರಜ್ಞಾನ ಮತ್ತು ವಿಜ್ಞಾನದ ಬೆಳವಣಿಗೆಗೆ ಅವಕಾಶ ನೀಡುವುದರ ಜತೆಗೆ ಪರಿಸರ ಜತೆಗಿನ ಸಾಮರಸ್ಯವನ್ನು ಕಾಪಾಡುವುದು ಸವಾಲಾಗಿ ಪರಿಣಮಿಸಿದೆ.
Related Articles
Advertisement
ಭೂಮಿ ತಾಯಿಯ ಮೇಲೆ ಅವಿರತವಾಗಿ ದೌರ್ಜನ್ಯ ನಡೆಯುತ್ತಲೇ ಇದೆ. ಇದರಿಂದಾಗಿ ಯಾಂತ್ರೀಕೃತ ಬದುಕಿ ನಲ್ಲಿ ಜನರು ಉಸಿರಾಡಲೂ ಕಷ್ಟವಾಗುವ ಪರಿಸ್ಥಿತಿ ಬಂದೊದಗಿದೆ. ಮನುಷ್ಯ ತನ್ನ ದುರಾಸೆ ತ್ಯಜಿಸಿ, ಕ್ಷಣಿಕ ಸುಖದ ಆಸೆಗೆ ತಿಲಾಂಜಲಿ ಇಟ್ಟು, ತಾನು ಬದುಕುವ ನೆಲ ಜಲಕ್ಕೆ ಗೌರವ ನೀಡಿದಲ್ಲಿ ಮಾತ್ರ ಮುಂದಿನ ಜನಾಂಗಕ್ಕೂ ಬದುಕಲು ಎಡೆಯಾಗಬಹುದು. ಇಲ್ಲವಾದಲ್ಲಿ ನೈಸರ್ಗಿಕ ಸಂಪನ್ಮೂಲಗಳು ಬರಿದಾಗಿ, ಭೂಮಿ ಬರಡಾಗಿ, ಉಸಿರಾಡುವ ಗಾಳಿಗೆ, ಕುಡಿಯುವ ನೀರಿಗೆ ಮತ್ತು ತಿನ್ನುವ ಅನ್ನಕ್ಕೂ ತತ್ವಾರ ಬರುವ ದಿನಗಳು ದೂರವಿಲ್ಲ. ತ್ಯಾಜ್ಯವನ್ನು ಪ್ರಕೃತಿಯ ಒಡಲಿಗೆ ಎಸೆಯುವ ಅಭ್ಯಾಸವನ್ನು ಬಿಟ್ಟು ಮರುಬಳಕೆ ಮಾಡುವ ಬಗ್ಗೆ ಚಿಂತನೆ ನಡೆಸಬೇಕು. ಪ್ಲಾಸ್ಟಿಕ್ ನಂತಹ ವಸ್ತುಗಳನ್ನು ಪ್ರಕೃತಿಯ ಮಡಿಲಿಗೆ ಸೇರಿಸದೆ ಪುನರ್ಬಳಕೆ ಮಾಡಿಕೊಳ್ಳುವುದನ್ನು, ಸೂಕ್ತವಾಗಿ ನಿರ್ವಹಣೆ ಮಾಡುವುದನ್ನು ತಿಳಿಯಬೇಕು. ಪ್ಲಾಸ್ಟಿಕ್ ಪ್ರಕೃತಿಗೆ ಅಂಟಿರುವ ದೊಡ್ಡ ಶಾಪ. ಸಾಧ್ಯವಾದಷ್ಟು ಮಟ್ಟಿಗೆ ಪ್ಲಾಸ್ಟಿಕ್ ಬಳಕೆಯಿಂದ ದೂರವಿರಲು ದೃಢ ಮನಸ್ಸು ಮಾಡಬೇಕು.
ಪ್ರಕೃತಿ ಕಸದ ತೊಟ್ಟಿಯಲ್ಲ ಎಂಬುದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು. ವಿಪರ್ಯಾಸವೆಂದರೆ, ನಮ್ಮ ಜನರ ಪರಿಸರ ಕಾಳಜಿ ಯಾರೋ ಒಬ್ಬ ಫೇಸ್‌ಬುಕ್‌ನಲ್ಲಿ ಗಿಡನೆಟ್ಟ ಚಿತ್ರ ಬಂದಲ್ಲಿ ಲೈಕ್ ಮಾಡುವುದಕ್ಕೆ ಮಾತ್ರ ಸೀಮಿತವಾಗಿಬಿಟ್ಟಿದೆ. ಆಧುನಿಕ ಜೀವನ ಶೈಲಿಯ ಅವಶ್ಯಕತೆಗಳನ್ನು ಪೂರೈಸಲು ಪೂರಕವಾಗಿ ಬೆಳೆಯುತ್ತಿರುವ ಆಧುನಿಕರಣ, ವ್ಯಾಪಾರೀಕರಣ, ಕೈಗಾರಿಕೀಕರಣ, ಗಣಿಗಾರಿಕೆ ಇತ್ಯಾದಿಗಳಿಂದ ಪರಿಸರ ಕಂಗಾಲಾಗಿದೆ. ಪರಿಸರದ ಅವನತಿಯು ತಂತ್ರಜ್ಞಾನ ಮತ್ತು ಅಭಿವೃದ್ಧಿಯ ಅನಿವಾರ್ಯ ಉಪ-ಉತ್ಪನ್ನವಾಗಬೇಕಾದ ಅನಿವಾರ್ಯತೆ ಯೇನೂ ಇಲ್ಲ. ತಂತ್ರಜ್ಞಾನ ಮತ್ತು ವಿಜ್ಞಾನ ಅಪಾಯಗಳನ್ನು ತಂದೊಡ್ಡುವುದಿಲ್ಲ, ಆದರೆ ತಂತ್ರಜ್ಞಾನ ಮತ್ತು ವೈಜ್ಞಾನಿಕ ಪ್ರಕ್ರಿಯೆಯ ವೇಳೆಯಲ್ಲಿ ಉತ್ಪಾದನೆಯಾಗುವ ತ್ಯಾಜ್ಯವಸ್ತು ಅಪಾಯವನ್ನು ತಂದೊಡ್ಡುತ್ತದೆ. ಆದ್ದರಿಂದ ತ್ಯಾಜ್ಯ ಬಳಕೆಯವಿಧಾನಗಳನ್ನು ಕಂಡು ಹಿಡಿಯುವ ಮತ್ತು ಮಾಲಿನ್ಯವಾಗ ದಂತಹ ಸೌರ ಇಂಧನದ ಬಳಕೆ ಅಥವಾ ನೈಸರ್ಗಿಕ ಕೃಷಿಯಂತಹ ಕಾರ್ಯ ವಿಧಾನಗಳನ್ನು ನಾವು ಬಳಸುವ ಅಗತ್ಯ ಇದೆ. ಜಾಗೃತಿಗೆ ಮೊದಲು ಪರಿಸರ ಬಗ್ಗೆ ತಿಳಿದುಕೊಳ್ಳಿ
ವನಮಹೋತ್ಸವ, ಪರಿಸರ ದಿನಾಚರಣೆ, ಜಾಗೃತಿ ಎಂದೆಲ್ಲಾ ನೂರಾರು ಕಾರ್ಯಕ್ರಮಗಳು ಪರಿಸರ ದಿನಾಚರಣೆಯಂಗವಾಗಿ ನಡೆಯುತ್ತವೆ. ಇವೆಲ್ಲ ಜೂನ್‌ಗೆ ಮಾತ್ರ ಸೀಮಿತವಾಗುತ್ತಿರುವುದು ದುರದೃಷ್ಟಕರ. ಅನಂತರ ನೆಟ್ಟ ಗಿಡ ಸತ್ತಿದೆಯೋ ಬದುಕಿದೆಯೋ ಎಂದು ನೋಡುವವರಿರುವುದಿಲ್ಲ. ನವಂಬರ್ ಕನ್ನಡದಂತೆ ಜೂನ್ ಪರಿಸರವಾದಿಗಳು ನಾವು. ಮತ್ತೆ ಮುಂದಿನ ವರ್ಷ ಪರಿಸರ ದಿನ ಎದುರಾದಾಗಲೇ ನಮ್ಮಲ್ಲಿ ಪರಿಸರ ಜಾಗೃತಿ ಉಂಟಾಗುವುದು. ಆಧುನಿಕ ಶತಮಾನದ ಬಹುದೊಡ್ಡ ಆಪತ್ತು ಪ್ಲಾಸ್ಟಿಕ್. ಪರಿಸರ ಮಾಲಿನ್ಯಕ್ಕೆ ಪ್ಲಾಸ್ಟಿಕ್‌ನ ಕೊಡುಗೆ ಬಹು ದೊಡ್ಡದು. ಪ್ರತಿ ದಿನ ಟನ್‌ಗಟ್ಟಲೆ ಪ್ಲಾಸ್ಟಿಕ್ ಭೂಮಿಯ ಒಡಲು ಸೇರುತ್ತಿದೆ. ಹಾರ್ದಿಕ್ ಪಾಂಡ್ಯ ಒಂದು ಓವರ್ ಎಸೆಯುವಷ್ಟು ಹೊತ್ತಿನಲ್ಲಿ 4 ಟ್ರಕ್‌ನಷ್ಟು ತ್ಯಾಜ್ಯ ಸಮುದ್ರ ಗರ್ಭ ಸೇರಿರುತ್ತದೆ ಎನ್ನುವ ಅಂಶವೇ ಎಷ್ಟು ಕ್ಷಿಪ್ರವಾಗಿ ನಾವು ಪರಿಸರವನ್ನು ಕೆಡಿಸುತ್ತಿದ್ದೇವೆ ಎನ್ನುವುದನ್ನು ತಿಳಿಸುತ್ತದೆ. ಹಾಗೆಂದು ಪ್ಲಾಸ್ಟಿಕ್ ಇಲ್ಲದ ಬದುಕನ್ನು ಕಲ್ಪಿಸುವುದು ಕೂಡಾ ಅಸಾಧ್ಯ. ಮಾಲ್‌ಗಳಲ್ಲಿ, ಹಾಲ್‌ಗಳಲ್ಲಿ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಬಳಕೆ ಎಗ್ಗಿಲ್ಲದೇ ನಡೆಯುತ್ತಿದೆ. ನಾವು ಕುಡಿಯುವ ನೀರು, ತಿನ್ನುವ ಚಾಟ್ ಎಲ್ಲದಕ್ಕೂ ಪ್ಲಾಸ್ಟಿಕ್ ಅನಿವಾರ್ಯ. ಪ್ಲಾಸ್ಟಿಕ್‌ನಲ್ಲಿರುವ ಡೈಯಾಕ್ಸಿನ್ ಎಂಬ ರಾಸಾಯನಿಕ ಕ್ಯಾನ್ಸರ್‌ನಂತ ಮಾರಕ ರೋಗಕ್ಕೆ ಕಾರಣವಾಗ ಬಹುದು. ಅಂದಾಜಿನ ಪ್ರಕಾರ ಒಂದು ಪ್ಲಾಸ್ಟಿಕ್ ಬ್ಯಾಗ್ ಕೊಳೆ ಯಲು ಸರಾಸರಿ ನೂರು ವರ್ಷ ಹಿಡಿಯುತ್ತದೆ. ಪುನರ್ ಬಳಕೆ ಕಲಿಸಿರಿ
ವಸ್ತುಗಳ ಪುನರ್ ಬಳಕೆ ಮಾಡುವ ವಿಧಾನವನ್ನು ಜನರಿಗೆ ತಿಳಿಸುವಂಥ ಕಾರ್ಯ ಅಗತ್ಯವಾಗಿದೆ ಆ ಮೂಲಕ ಪರಿಸರ ನಾಶಕ್ಕೆ ಕಾರಣವಾದ ಇ-ತ್ಯಾಜ್ಯ ಮತ್ತು ಪ್ಲಾಸ್ಟಿಕ್ ಮಾಲಿನ್ಯವನ್ನು ತಡೆಹಿಡಿ ಯಲು ಸಾಧ್ಯ. ಈ ನಿಟ್ಟಿನಲ್ಲಿ ಸರಕಾರ, ಸರಕಾರೇತರ ಸಂಸ್ಥೆಗಳು ಒಂದಿಷ್ಟು ಪ್ರಯತ್ನಗಳನ್ನು ಮಾಡುತ್ತಿದ್ದರೂ ಪ್ಲಾಸ್ಟಿಕ್ ಬಳಕೆಯ ಪ್ರಮಾಣದ ಎದುರು ಇದು ಏನೇನೂ ಸಾಲದು. ಬರೀ ಗಿಡ ನೆಡುವುದಷ್ಟೇ ಪರಿಸರ ದಿನಾಚರಣೆಯಲ್ಲ. ಪರಿಸರವನ್ನು ಉಳಿಸುವ ನಿಟ್ಟಿನಲ್ಲಿ ಯಾವೆಲ್ಲ ಕ್ರಮಗಳನ್ನು ಕೈಗೊಳ್ಳಬಹುದು ಎನ್ನುವ ಚಿಂತನಮಂಥನವೂ ಪರಿಸರ ಉಳಿಸಲು ನಾವು ನೀಡುವ ಯೋಗದಾನವಾಗುತ್ತದೆ. ಪ್ಲಾಸ್ಟಿಕ್ ಬಳಕೆಯನ್ನು ನಿಯಂತ್ರಿಸಲೇಬೇಕು. ಪರಿಸರ ಮಾಲಿ ನ್ಯಕ್ಕೆ ಕಾರಣವಾಗುವ ತೈಲ ಮತ್ತು ಕಲ್ಲಿದ್ದಲ್ಲಿನ ಬಳಕೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕೆಲವು ಗುಣಾತ್ಮಕ ನಿರ್ಧಾರಗಳನ್ನು ಕೈಗೊಳ್ಳು ವುದು ಇಂದಿನ ಅಗತ್ಯ. ಸೌರಶಕ್ತಿ ಬಳಕೆಗೆ ಉತ್ತೇಜನ ನೀಡುವುದು, ಕೈಗಾರಿಕೆಗಳ ಮಾಲಿನ್ಯ ವನ್ನು ತಡೆಯಲು ಕಟ್ಟುನಿಟ್ಟಿನ ಕಾನೂನು ರಚಿಸು ವಂತಹ ನಿರ್ಧಾರಗಳನ್ನು ಕೈಗೊಳ್ಳಬೇಕಿದೆ. ಕೈಗಾರಿಕೀಕರಣ ಮತ್ತು ಆಧುನಿಕತೆಯ ನೆಪದಲ್ಲಿ ಸಸ್ಯ ಸಂಪತ್ತು ನಾಶ ಮಾಡಿ ಕಾಂಕ್ರೀಟ್ ಕಾಡು ಬೆಳೆಸಿದಲ್ಲಿ ನಾವು ಉಸಿರಾಡುವ ಗಾಳಿ, ಕುಡಿಯುವ ನೀರು ಕಲುಷಿತವಾಗಿ ಬದುಕಲು ಅಸಾಧ್ಯ ವಾದ ಪರಿಸ್ಥಿತಿ ಉಂಟಾಗಬಹುದು. ಕಾಡು ಬೆಳೆಸಿ ನಾಡು ಉಳಿಸಿ ಕೇವಲ ಘೋಷ ವಾಕ್ಯಕ್ಕೆ ಸೀಮಿತವಾಗದೆ, ಕಡ್ಡಾಯವಾಗಿ ಆಚರಣೆಗೆ ತರಬೇಕು. ಅರಣ್ಯ ಸಂಪತ್ತು ದೇಶದ ಬಹುದೊಡ್ಡ ಆಸ್ತಿ. ಇದು ಹಲವಾರು ಜಾತಿಯ ಜೀವ ಸಂಕುಲಗಳಿಗೆ ಆಶ್ರಯ ನೀಡುತ್ತವೆ. ವಾಯುಮಾಲಿನ್ಯ ಮತ್ತು ಜಲಮಾಲಿನ್ಯ ತಡೆಗಟ್ಟಲು ಅರಣ್ಯ ಸಂಪತ್ತಿನ ಯೋಗ್ಯ ನಿರ್ವಹಣೆ ಅತೀ ಅವಶ್ಯಕ. ವಿಶ್ವದ ಶೇ. 20 ಹಸಿರು ಮನೆ ಅನಿಲ ಉಗುಳುವಿಕೆಗೆ ಪ್ರಮುಖ ಕಾರಣ ಅರಣ್ಯ ಸಂಪತ್ತಿನ ನಾಶ. ಜಗತ್ತಿನ ಶೇ.70 ವಾಯುಮಾಲಿನ್ಯಕ್ಕೆ ಮುಖ್ಯ ಕಾರಣ ವಾಹನಗಳು ಬಿಡುವ ಹೊಗೆ. ಕಡಿಮೆ ವಾಹನ ಬಳಕೆ ಮಾಡಲು ಪ್ರೋತ್ಸಾಹ ನೀಡುವ ಮೂಲಕ ವಾಹನಗಳಿಂದಾಗುವ ಮಾಲಿನ್ಯ ವನ್ನು ಪರಿಣಾಮ ಕಾರಿಯಾಗಿ ನಿಯಂತ್ರಿಸಬಹುದು.ಪರಿಸರ ಮಾಲಿನ್ಯದಿಂದಾಗಿ ವಾತಾವರಣದ ಓಝೊàನ್ ವಲಯ ಛಿದ್ರವಾಗುತ್ತಿದೆ. ಅಂತ ರ್ಜಲ ಬತ್ತಿ ಕೆರೆ ಬಾವಿಗಳು ಬರಡಾಗುತ್ತಿವೆ. ಇರುವ ನದಿ ಕೆರೆ ಸಾಗರಗಳೂ ಮಲಿನಗೊಳ್ಳುತ್ತಿವೆ. ಜಾಗತಿಕ ತಾಪಮಾನ ಏರಿಕೆಯಿಂದಾಗಿ ಜೀವ ಸಂಕುಲಗಳ ಸಮತೋಲನಕ್ಕೆ ಧಕ್ಕೆ ಬಂದಿದೆ. ವಿಶ್ವಪರಿಸರ ದಿನಾಚರಣೆಯು ಅರ್ಥಪೂರ್ಣವಾಗ ಬೇಕಾ ದರೆ ಸರಕಾರದ ಜೊತೆಗೆ ಸರಕಾರೇತರ ಸಂಘಸಂಸ್ಥೆಗಳ ಮುಖಾಂತರ ಪರಿಸರ ವಿಜ್ಞಾನಿಗಳು, ಪರಿಸರ ಸಂರಕ್ಷಣಾ ಕಾರ್ಯಕರ್ತರು, ಪರಿಸರ ವಿಚಾರವಾದಿಗಳು ಮತ್ತು ಜನ ಸಾಮಾನ್ಯರಲ್ಲೂ ನಿಜವಾದ ಬದಲಾವಣೆ ಉಂಟಾಗಬೇಕಾಗಿದೆ. ಇಲ್ಲವಾದಲ್ಲಿ ಈ ವಿಶ್ವ ಪರಿಸರ ದಿನವು ಮತ್ತೂಂದು ಘೋಷಣಾ ದಿನವಾಗಿ ಮಾತ್ರ ಉಳಿಯಬಹುದು. ಹಾಗೆಂದು ಸಂಪೂರ್ಣ ನಿರಾಸೆಯ ಚಿತ್ರಣ ನಮ್ಮ ಮುಂದೆ ಇದೆ ಎಂದಲ್ಲ. ಭಾರತ ವೊಂದರಲ್ಲೇ ಕಳೆದೊಂದು ದಶಕದಲ್ಲಿ ಸುಮಾರು 6000 ಹೆಕ್ಟೇರ್ ನಷ್ಟು ಅರಣ್ಯ ಪ್ರದೇಶ ಹೆಚ್ಚಳವಾಗಿದೆ. ಇದೇ ರೀತಿ ಇತರ ದೇಶಗಳೂ ಅರಣ್ಯ ಬೆಳೆಸುವುದನ್ನು ಆದ್ಯತೆಯ ಕಾರ್ಯಕ್ರಮವಾಗಿ ಪರಿಗಣಿಸಿವೆ. ಇಂತಹ ಕಾರ್ಯಕ್ರಮಗಳಲ್ಲಿ ಜನರ ಸಹಭಾಗಿತ್ವವೂ ಇರುವುದು ತೀರಾ ಅಗತ್ಯ. ಆದರೆ ನಾವು ನಾಶ ಮಾಡಿದ ಪ್ರಮಾಣಕ್ಕೆ ಹೋಲಿಸಿದರೆ ಬೆಳೆದ ಪ್ರಮಾಣ ಕಡಿಮೆ ಎಂದೇ ಹೇಳಬಹುದು. ಹೀಗಾಗಿ ಇಂತಹ ಕಾರ್ಯಕ್ರಮಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಿಸುವ ಅಗತ್ಯವಿದೆ. *ಅಭಿಲಾಷ್ ಬಿ. ಸಿ.