Advertisement

ಮುನಿರತ್ನ ಕುರುಕ್ಷೇತ್ರಕ್ಕೆ ಅದ್ಧೂರಿ ಚಾಲನೆ

10:25 AM Aug 07, 2017 | |

ಕನ್ನಡ ಚಿತ್ರರಂಗದಲ್ಲಿ ಮತ್ತೂಂದು ದಾಖಲೆ ಸಿನಿಮಾ ಅಂತಾನೇ ಹೇಳಲಾಗುತ್ತಿರುವ “ಮುನಿರತ್ನ ಕುರುಕ್ಷೇತ್ರ’ ಚಿತ್ರಕ್ಕೆ ಭಾನುವಾರ ಸಂಜೆ ಅದ್ಧೂರಿಯಾಗಿ ಮುಹೂರ್ತ ಕಂಡಿದೆ. ಅದ್ಧೂರಿ ವೆಚ್ಚದಲ್ಲಿ ತಯಾರಾಗುತ್ತಿರುವ ಚಿತ್ರಕ್ಕೆ ದರ್ಶನ್‌ ಮುಖ್ಯ ಆಕರ್ಷಣೆ. ದುರ್ಯೋಧನರಾಗಿ ಅವರಿಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇದು ಅವರ 50 ನೇ ಸಿನಿಮಾ ಅನ್ನೋದು ವಿಶೇಷ. ನಾಗಣ್ಣ ನಿರ್ದೇಶಿಸುತ್ತಿರುವ ಈ ಚಿತ್ರದ ಯೋಜನಾ ನಿರ್ದೇಶಕರು ಜಯಶ್ರೀದೇವಿ.

Advertisement

ಚಿತ್ರದಲ್ಲಿ ಅಂಬರೀಷ್‌, ರವಿಚಂದ್ರನ್‌, ಶಶಿಕುಮಾರ್‌, ಲಕ್ಷ್ಮೀ, ಸಾಯಿಕುಮಾರ್‌, ನಿಖೀಲ್‌ಕುಮಾರ್‌, ಅರ್ಜುನ್‌ ಸರ್ಜಾ, ರವಿಶಂಕರ್‌, ಶ್ರೀನಿವಾಸಮೂರ್ತಿ, ಶ್ರೀನಾಥ್‌ ಸೇರಿದಂತೆ ಚಿತ್ರರಂಗದ ಅನೇಕ ಕಲಾವಿದರು ನಟಿಸುತ್ತಿದ್ದಾರೆ. ಅಂದಹಾಗೆ, ಭಾನುವಾರ ಪ್ರಭಾಕರ್‌ ಕೋರೆ ಕನ್ವೆಂಷನ್‌ ಸೆಂಟರ್‌ನಲ್ಲಿ ಚಿತ್ರರಂಗದ ಗಣ್ಯರು, ರಾಜಕಾರಣಿಗಳು, ಉದ್ಯಮಿಗಳು ಸೇರಿದಂತೆ ಸಾವಿರಕ್ಕೂ ಹೆಚ್ಚು ಮಂದಿ “ಮುನಿರತ್ನ ಕುರುಕ್ಷೇತ್ರ’ಕ್ಕೆ ಸಾಕ್ಷಿಯಾದರು.

ಕುರುಕ್ಷೇತ್ರ ಹೈಲೈಟ್ಸ್‌
– “ಮುನಿರತ್ನ ಕುರುಕ್ಷೇತ್ರ’ ಚಿತ್ರದ ಸಂಪೂರ್ಣ ಚಿತ್ರೀಕರಣ ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆಯಲಿದೆ.

– ಈ ಚಿತ್ರಕ್ಕಾಗಿ 16  ವಿಭಿನ್ನ ಸೆಟ್‌ಗಳನ್ನು ನಿರ್ಮಿಸಲಾಗಿದೆ

– ಯುದ್ಧದ ಸನ್ನಿವೇಶಗಳನ್ನು ಅಲ್ಲೇ ಚಿತ್ರೀಕರಿಸಲಾಗುತ್ತದೆ. 

Advertisement

– ಚಿತ್ರದ ಚಿತ್ರೀಕರಣ ಆಗಸ್ಟ್‌ 9ರಿಂದ ಶುರುವಾಗಲಿದ್ದು, ಮೊದಲಿಗೆ ದರ್ಶನ್‌ ಮತ್ತು ಹರಿಪ್ರಿಯಾ ನಟನೆಯಲ್ಲಿ ಒಂದು ಹಾಡನ್ನು ಚಿತ್ರೀಕರಿ ಸಲಾಗು ತ್ತಿದೆ. 

– ಯಾವುದೇ ಬ್ರೇಕ್‌ ಇಲ್ಲದೆಯೇ ಒಂದೇ ಹಂತದಲ್ಲಿ ಚಿತ್ರೀಕರಣ ಮುಗಿ ಸುವುದಕ್ಕೆ ಚಿತ್ರತಂಡ ಯೋಚಿಸಿದ್ದು,100ಕ್ಕೂ ಹೆಚ್ಚು ದಿನಗಳ ಕಾಲ ಚಿತ್ರೀ ಕರಣ ನಡೆಯಲಿದೆ. 

– ಈಗಾಗಲೇ ಚಿತ್ರಕ್ಕೆ ಬೇಕಾದ ಕಂಪ್ಯೂಟರ್‌ ಗ್ರಾಫಿಕ್ಸ್‌ ಕೆಲಸ ನಡೆಯುತ್ತಿದೆ.

– ಚಿತ್ರದಲ್ಲಿ ದರ್ಶನ್‌ ಅವರು ದುರ್ಯೋಧನನ ಪಾತ್ರ ನಿರ್ವಹಿಸಿದರೆ, ನಟ ರವಿ ಚೇತನ್‌ ಅವರು ದುಶ್ಯಾಸನನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. 

– ಚಿತ್ರತಂಡಕ್ಕೆ ಅನಂತ್‌ನಾಗ್‌ ಅವರು ಸಹ ಸೇರ್ಪಡೆಯಾಗಿದ್ದು, ಅವರು ಗಾಂಧರ್ವ ರಾಜನ ಪಾತ್ರ ಮಾಡುತ್ತಿದ್ದಾರೆ. 

– ಇನ್ನು ನಕುಲ- ಸಹದೇವರಾಗಿ ಯಶಸ್‌ ಮತ್ತು ಚಂದನ್‌ ಅಭಿನಯಿಸುತ್ತಿದ್ದಾರೆ. 

– ಈ ಚಿತ್ರ ಸಂಪೂರ್ಣ ಥ್ರಿಡಿಯಲ್ಲಿ ನಿರ್ಮಾಣವಾಗುತ್ತಿದೆ. ಭಾರತದಲ್ಲಿ ಪೌರಾಣಿಕ ಸಿನಿಮಾವೊಂದು ಥ್ರಿಡಿಯಲ್ಲಿ ಇದುವರೆಗೂ ನಿರ್ಮಾಣವಾಗಿಲ್ಲ ಮತ್ತು ಕನ್ನಡದಲ್ಲೇ ಇಂಥದ್ದೊಂದು ಪ್ರಯತ್ನವಾಗುತ್ತಿರುವುದು ವಿಶೇಷ. 

Advertisement

Udayavani is now on Telegram. Click here to join our channel and stay updated with the latest news.

Next