ಹುಬ್ಬಳ್ಳಿ: ಕೊರೊನಾ ವೈರಸ್ ಎರಡನೇ ಅಲೆತಡೆಗಟ್ಟಲು ರಾಜ್ಯ ಸರಕಾರ ಕರ್ಫ್ಯೂ ಘೋಷಿಸಿದ ಸಂದರ್ಭದಲ್ಲಿ ಸರಕಾರದ ಮಾರ್ಗಸೂಚಿಗಳನ್ನು ಉಲ್ಲಂಘಿಸಿದವರ ವಿರುದ್ಧ ಹು-ಧಾ ಪೊಲೀಸರು ಇದುವರೆಗೆ ಒಟ್ಟು 23,226 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
50,59,50ರೂ.ಗಳ ದಂಡವಿಧಿಸಿದ್ದು, 1,582 ವಾಹನಗಳನ್ನು ಜಪ್ತಿ ಮಾಡಿದ್ದಾರೆ. ನಿಯಮ ಉಲ್ಲಂಘನೆಯ 393 ಪ್ರಕರಣಗಳನ್ನುದಾಖಲಿಸಿದ್ದಾರೆ. ರಾಜ್ಯ ಸರಕಾರ ಏಪ್ರಿಲ್ 26ರಿಂದ ಮೇ 9ರವರೆಗೆಮೇ 10ರಿಂದ 14ದಿನಗಳ ಕಾಲ ಕರ್ಫ್ಯೂ ಘೋಷಿಸಿದೆ.
ಈ ಸಂದರ್ಭದಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸದ,ಸಾಮಾಜಿಕ ಅಂತರ ಕಾಯ್ದುಕೊಳ್ಳದ, ನಿಗದಿಪಡಿಸಿದಸಮಯ ಮೀರಿ ಅನಗತ್ಯವಾಗಿ ಸಂಚರಿಸುತ್ತಿದ್ದಹಾಗೂ ಸಾಮಾಜಿಕ ಅಂತರವಿಲ್ಲದೆ, ಸ್ಯಾನಿಟೈಸರ್‌ಬಳಸದೆ ವಹಿವಾಟು ನಡೆಸುತ್ತಿದ್ದ ಅಂಗಡಿಕಾರರಮೇಲೆ ಸರಕಾರದ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ಆರೋಪದಡಿ ಪೊಲೀಸರು ಪ್ರಕರಣ ದಾಖಲಿಸಿ,ದಂಡ ಹಾಕಿದ್ದಾರೆ.ಹು-ಧಾ ಪೊಲೀಸ್ ಕಮೀಷನರೇಟ್ ಘಟಕದ ಪೊಲೀಸರು ಏ.26ರಿಂದ ಇಲ್ಲಿಯವರೆಗೆ (ಮೇ11ರವರೆಗೆ) ನಿಯಮ ಉಲ್ಲಂಘಿಸಿದವರ ಮೇಲೆ393 ಪ್ರಕರಣ, ಮಾರ್ಗ ಸೂಚಿಗಳನ್ನು ಉಲ್ಲಂಘಿಸಿಓಡಾಡುತ್ತಿದ್ದ ಆಟೋರಿಕ್ಷಾ, ಬೈಕ್, ಕಾರು ಸೇರಿದಂತೆ1,582 ವಾಹನಗಳನ್ನು ಜಪ್ತಿ ಮಾಡಿದ್ದಾರೆ.
ಮಾಸ್ಕ್ಧರಿಸದೆ ತಿರುಗಾಡುತ್ತಿದ್ದವರ ಮೇಲೆ 8,015ಪ್ರಕರಣಗಳನ್ನು ದಾಖಲಿಸಿದ್ದು, 20,03,750ರೂ.ದಂಡ ವಿ ಸಿದ್ದಾರೆ. ಅದೇ ರೀತಿ ಸಾಮಾಜಿಕ ಅಂತರಕಾಯ್ದುಕೊಳ್ಳದವರ ವಿರುದ್ಧ 15,211 ಪ್ರಕರಣದಾಖಲಿಸಿಕೊಂಡು, 30,55,900ರೂ. ದಂಡಹಾಕಿದ್ದಾರೆ. ಇದರಲ್ಲಿ ಜನತಾ ಕರ್ಫ್ಯೂ ವೇಳೆನಿಯಮ ಉಲ್ಲಂಘಿಸಿದವರ ಮೇಲೆ 139 ಪ್ರಕರಣದಾಖಲಿಸಿದ್ದು, 926 ವಾಹನಗಳನ್ನು ಜಪ್ತಿ ಮಾಡಿದ್ದಾರೆ.
ಮಾಸ್ಕ್ ಹಾಕಿಕೊಳ್ಳದವರ ವಿರುದ್ಧ 7,740 ಪ್ರಕರಣದಾಖಲಿಸಿದ್ದು, 19.35ಲಕ್ಷ ರೂ. ದಂಡ ಹಾಕಿದ್ದಾರೆ.ಸಾಮಾಜಿಕ ಅಂತರ ಕಾಯ್ದುಕೊಳ್ಳದವರ ಮೇಲೆ14,667 ಪ್ರಕರಣ ದಾಖಲಿಸಿ, 29,33,400ರೂ.ದಂಡ ವಿ ಧಿಸಿದ್ದಾರೆ. ಜನತಾ ಕರ್ಫ್ಯೂ ಸಂದರ್ಭದಲ್ಲಿಎರಡು ದಿನಗಳಲ್ಲಿ ಮಾರ್ಗಸೂಚಿಗಳನ್ನು ಉಲ್ಲಂಘಿಸಿದವರ ಮೇಲೆ 254 ಪ್ರಕರಣ ದಾಖಸಿದ್ದಾರೆ.656 ವಾಹನಗಳನ್ನು ಜಪ್ತಿ ಮಾಡಿದ್ದಾರೆ.
ಮಾಸ್ಕ್ಹಾಕಿಕೊಳ್ಳದವರ ಮೇಲೆ 275 ಪ್ರಕರಣದಾಖಲಿಸಿಕೊಂಡು 68,750 ರೂ. ದಂಡ ವಿ ಧಿಸಿದ್ದಾರೆ.ಸಾಮಾಜಿಕ ಅಂತರ ಕಾಯ್ದುಕೊಳ್ಳದವರ ವಿರುದ್ಧ544 ಪ್ರಕರಣ ದಾಖಲಿಸಿದ್ದು, 1,22,700ರೂ. ದಂಡಹಾಕಿದ್ದಾರೆ.
ಶಿವಶಂಕರ ಕಂಠಿ