Advertisement

‌ಕೋವಿಡ್‌ ಅಬ್ಬರ : ಗೋವಾದಲ್ಲಿ  ಆಗಸ್ಟ್ 30 ರ ವರೆಗೆ ಕರ್ಫ್ಯೂ ವಿಸ್ತರಣೆ

02:27 PM Aug 23, 2021 | Team Udayavani |

ಪಣಜಿ: ಗೋವಾ ರಾಜ್ಯದಲ್ಲಿ ಜಾರಿಯಲ್ಲಿದ್ದ ಕರ್ಫ್ಯೂ ಕಾಲಾವಧಿಯನ್ನು ಆಗಸ್ಟ್ 30 ರ ವರೆಗೆ ವಿಸ್ತರಣೆ ಮಾಡಲಾಗಿದೆ. ಚಿತ್ರಮಂದಿರಗಳಲ್ಲಿ ಶೇ 50 ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡುವ ಮೂಲಕ ಚಿತ್ರಮಂದಿರ ತೆರೆಯಲು ಅನುಮತಿ ನೀಡಲಾಗಿದೆ.

Advertisement

ಗೋವಾ ರಾಜ್ಯದಲ್ಲಿ ಕೋವಿಡ್‌  ಹರಡುವುದನ್ನು ತಡೆಯಲು ಮಾರ್ಚ್ ತಿಂಗಳಿಂದ ಜಾರಿಗೊಂಡಿದ್ದ ಕರ್ಫ್ಯೂ ವನ್ನು ಹಂತ ಹಂತವಾಗಿ ಅವಧಿ ವಿಸ್ತರಣೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ಜಾರಿಯಲ್ಲಿದ್ದ ಕರ್ಫ್ಯೂ ಸೋಮವಾರ ಮುಕ್ತಾಯಗೊಳ್ಳುವ ಹಿನ್ನೆಲೆಯಲ್ಲಿ ಇನ್ನೂ ಒಂದು ವಾರಗಳ ಕಾಲ ಕರ್ಫ್ಯೂ ವಿಸ್ತರಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಇದನ್ನೂ ಓದಿ:ಹೊಸ ಡಿಜಿಟಲೀಕರಣ ನೀತಿ ಹಾಗೂ ಆರ್ ಆ್ಯಂಡ್ ಡಿ ಪಾಲಿಸಿ ಘೋಷಣೆ ಮಾಡಿದ ಸಿಎಂ ಬೊಮ್ಮಾಯಿ

ಕೇರಳದಿಂದ ಆಗಮಿಸುವ ಪ್ರವಾಸಿಗರಿಗೆ ಗೋವಾ ರಾಜ್ಯ ಪ್ರವೇಶಿಸಲು ಆರ್‍ಟಿಪಿಸಿಆರ್ ನೆಗೆಟಿವ್ ವರದಿ ಖಡ್ಡಾಯಗೊಳಿಸಲಾಗಿದ್ದು, ಇತರ ರಾಜ್ಯಗಳಿಂದ ಗೋವಾಕ್ಕೆ ಆಗಮಿಸುವ ಪ್ರವಾಸಿಗರಿಗೆ ಕೋವಿಡ್ ಎಂಟಿಜನ್ ನೆಗೆಟಿವ್ ವರದಿ ಹೊಂದಿರುವುದು ಖಡ್ಡಾಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next