Advertisement

ಗುಣಮುಖ ಕಮಕನೂರ ಆಸ್ಪತ್ರೆಯಿಂದ ಬಿಡುಗಡೆ

11:52 AM Aug 02, 2020 | Team Udayavani |

ಕಲಬುರಗಿ: ಕೋವಿಡ್ ಸೋಂಕಿತರಾಗಿ ಇಲ್ಲಿನ ಬಸವೇಶ್ವರ ಆಸ್ಪತ್ರೆಗೆ ದಾಖಲಾಗಿದ್ದ ವಿಧಾನ ಪರಿಷತ್‌ ಮಾಜಿ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಗುಣಮುಖರಾಗಿ ಶನಿವಾರ ಆಸ್ಪತ್ರೆಯಿಂದ ಬಿಡುಗಡೆಯಾದರು.

Advertisement

ಉತ್ತಮ ವೈದ್ಯಕೀಯ ಸೇವೆಯಿಂದ ವಾರದಲ್ಲೇ ದಿನದಲ್ಲಿ ಗುಣಮುಖರಾಗಿದ್ದರಿಂದ ಕಮಕನೂರ ಅವರನ್ನು ಆಸ್ಪತ್ರೆಯ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಸನ್ಮಾನಿಸಿ, ಹೂಗುಚ್ಚ ನೀಡಿ ಚಪ್ಪಾಳೆಯೊಂದಿಗೆ ಬೀಳ್ಕೊಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ತಿಪ್ಪಣ್ಣಪ್ಪ ಕಮಕನೂರ, ಬಸವೇಶ್ವರ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳಿಂದ ಹಿಡಿದು ಎಲ್ಲ ಆರೋಗ್ಯ ಸಿಬ್ಬಂದಿ ವರ್ಗದವರು ಹೆಚ್ಚಿನ ಮುತುವರ್ಜಿ ವಹಿಸಿದ್ದರಿಂದ ವಾರದಲ್ಲೇ ಗುಣಮುಖನಾಗಿದ್ದೇನೆ. ಇದಕ್ಕೆ ಬಸವೇಶ್ವರ ಆಸ್ಪತ್ರೆಗೆ ತಾವು ಸದಾ ಚಿರಋಣಿ ಎಂದು ಹೇಳಿದರು.

ಕೋವಿಡ್ ಪಾಸಿಟಿವ್‌ ಬಂದ ನಂತರ ಭಯ ಆಗಿತ್ತು. ಆದರೆ ಎಚ್‌ಕೆಇ ಸಂಸ್ಥೆಯ ಅಧ್ಯಕ್ಷ ಡಾ| ಭೀಮಾಶಂಕರ ಬಿಲಗುಂದಿ, ಡೀನ್‌ ಡಾ| ಉಮೇಶ್ಚಂದ್ರ, ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರೆಲ್ಲರೂ ಹೆಚ್ಚಿನ ನಿಗಾ ವಹಿಸಿದರಲ್ಲದೇ ಸಕಾಲಕ್ಕೆ ಔಷಧಿ, ಊಟ ನೀಡಿ ಶುಶ್ರೂಷೆ ಮಾಡಿದ ಪರಿಣಾಮ ಬೇಗ ಗುಣಮುಖರಾಗಿ ಹೊರ ಬರುವಂತಾಯಿತು ಎಂದು ಕಮಕನೂರ ವಿವರಣೆ ನೀಡಿದರು.

ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ಮಲ್ಲಿಕಾರ್ಜುನ ತೆಗನೂರ, ಸಹಾಯಕ ವೈದ್ಯಕೀಯ ಅಧೀಕ್ಷಕ ಡಾ| ಎಂ.ಆರ್‌. ಪೂಜಾರಿ, ಬಸವೇಶ್ವರ ಆಸ್ಪತ್ರೆಯ ಕೋವಿಡ್‌ ನೋಡಲ್‌ ಅಧಿಕಾರಿ ಡಾ| ಭರತ ಕೋಣಿನ್‌, ಚಿಕಿತ್ಸಾ ತಜ್ಞರಾದ ಡಾ| ಕಿರಣ ದೇಶಮುಖ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next