Advertisement

ಗುಣಮುಖರಾದ ಆರು ಜನರ ಬಿಡುಗಡೆ

08:35 AM Jun 14, 2020 | Team Udayavani |

ಬಳ್ಳಾರಿ: ನಗರದ ಕೋವಿಡ್‌ (ಜಿಲ್ಲಾ) ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದ ಹೊಸಪೇಟೆಯ ಟಿಬಿ ಡ್ಯಾಂ ಠಾಣೆಯ ಸಿಪಿಐ ಸೇರಿ ಗುಣಮುಖರಾದ 6 ಜನರನ್ನು ಶನಿವಾರ ಬಿಡುಗಡೆಗೊಳಿಸಲಾಯಿತು.

Advertisement

ಹೊಸಪೇಟೆಯ ಟಿಬಿಡ್ಯಾಂ ಪೊಲೀಸ್‌ ಠಾಣೆಯ 50 ವರ್ಷದ ಸಿಪಿಐ ಪಿ.5377, ಹೊಸಪೇಟೆಯ 40 ವರ್ಷದ ವ್ಯಕ್ತಿ ಪಿ.3246, ತೋರಣಗಲ್ಲಿನ 42 ವರ್ಷದ ವ್ಯಕ್ತಿ ಪಿ.4350, ಬಳ್ಳಾರಿಯ 45 ವರ್ಷದ ಮಹಿಳೆ ಪಿ.5573, ಕರ್ನೂಲ್‌ ಜಿಲ್ಲೆಯ ಸೋಂಕಿತ 54 ವರ್ಷದ ಪಿ.5574, ಬಳ್ಳಾರಿಯ 35 ವರ್ಷದ ವ್ಯಕ್ತಿ ಪಿ.5379 ಅವರು ಕೋವಿಡ್‌ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿದ್ದ ಹಿನ್ನೆಲೆಯಲ್ಲಿ ಅವರನ್ನು ನಗರದ ಕೋವಿಡ್‌ ಆಸ್ಪತ್ರೆಯಲ್ಲಿ ಹೂವು, ಹಣ್ಣು, ಪಡಿತರ ಧಾನ್ಯಗಳನ್ನು ನೀಡಿ ಚಪ್ಪಾಳೆ ತಟ್ಟುವ ಮೂಲಕ ಅಂಬ್ಯುಲೆನ್ಸ್‌ನಲ್ಲಿ ಅವರ ಮನೆಗಳಿಗೆ ಕಳುಹಿಸಿಕೊಡಲಾಯಿತು.

ಈ ವೇಳೆ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ| ಎನ್‌. ಬಸರೆಡ್ಡಿ ಮಾತನಾಡಿ, ಇವರು ಬಂದಾಗ ಸಾಕಷ್ಟು ಭಯಭೀತರಾಗಿದ್ದರು. ಇವರಿಗೆ ಆಪ್ತ ಸಮಾಲೋಚನೆ ಮಾಡಿ ಅವರಲ್ಲಿದ್ದ ಭಯ ಹೋಗಲಾಡಿಸಿದೆವು. ಆತ್ಮಸ್ಥೈರ್ಯ ತುಂಬಿ ಅವರನ್ನು ಗುಣಮುಖರಾಗಲು ಬಹಳ ಶ್ರಮವಹಿಸಿದೆವು. 6 ಜನರು ಒಂದೇ ಬಾರಿಗೆ ಗುಣಮುಖರಾಗಿರುವುದು ನಮಗೆ ತುಂಬಾ ಸಂತೋಷವಾಗಿದ್ದು, ಇನ್ನು ಉಳಿದವರನ್ನು ಆದಷ್ಟು ಬೇಗ ಗುಣಮುಖರನ್ನಾಗಿ ಮಾಡಿ ಬಳ್ಳಾರಿಯನ್ನು ಕೋವಿಡ್ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಪ್ರಯತ್ನಿಸುತ್ತೇವೆ ಎಂದರು.

ಗುಣಮುಖರಾಗಿ ಹೊರಬಂದವರಲ್ಲಿ ಟಿಬಿ ಡ್ಯಾಂ ಸಿಪಿಐ ಸೇರಿದಂತೆ ಕೆಲವರು ಮಾತನಾಡಿದರು. ಬಳ್ಳಾರಿ ಡಿವೈಎಸ್ಪಿ ಕೆ.ರಾಮರಾವ್‌, ಹೊಸಪೇಟೆ ಡಿವೈಎಸ್ಪಿ ರಘುಕುಮಾರ್‌ ಮಾತನಾಡಿದರು. ಈ ಸಂದರ್ಭದಲ್ಲಿ ಕೋವಿಡ್‌ ನೋಡಲ್‌ ಅ ಧಿಕಾರಿ ಡಾ| ದೈವೀಕ್‌, ಡಾ| ನಿಖೀಲ್‌, ಡಾ| ಶಂಕರ್‌ ನಾಯಕ್‌, ಡಾ| ಪ್ರಕಾಶ್‌, ಡಾ| ಉದಯ್‌ ಶಂಕರ್‌, ಡಾ| ಚಿತ್ರಶೇಖರ ಸೇರಿದಂತೆ ಪೊಲೀಸ್‌ ಇಲಾಖೆಯ ವಿವಿಧ ಹಂತದ ಅಧಿಕಾರಿಗಳು, ಡಾ| ಪ್ರಕಾಶ, ಅಂಜನೇಯ ಹಾಗೂ ಲ್ಯಾಬ್‌ ಟೆಕ್ನಿಷಿಯನ್ಸ್‌, ಎಕ್ಸ್‌-ರೇ, ಡಿ-ಗ್ರೂಪ್‌ ಸಿಬ್ಬಂದಿ ಸೇರಿದಂತೆ ಆಸ್ಪತ್ರೆಯ ಇತರೆ ಸಿಬ್ಬಂದಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next