Advertisement

3,495 ಮಂದಿ ಸೋಂಕಿನಿಂದ ಗುಣಮುಖ 

11:43 AM Sep 15, 2020 | Suhan S |

ಬೆಂಗಳೂರು: ನಗರದಲ್ಲಿ ಕೋವಿಡ್ ಸೋಂಕಿನಿಂದ ಚೇತರಿಸಿಕೊಳ್ಳುತ್ತಿರುವವರ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದೆ. ಸೋಮವಾರ 2,219 ಪುರುಷರು ಮತ್ತು 1,276 ಮಹಿಳೆಯರು ಸೇರಿ 3,495 ಮಂದಿ ಕೋವಿಡ್‌ ಸೋಂಕಿನಿಂದ ಗುಣಮುಖರಾಗಿ ವಿವಿಧ ಆಸ್ಪತ್ರೆ ಮತ್ತು ಆರೈಕೆ ಕೇಂದ್ರಗಳಿಂದ ಬಿಡುಗಡೆ ಆಗಿದ್ದಾರೆ. ಈ ಮೂಲಕ ಸೋಂಕಿನಿಂದ ಗುಣಮುಖರಾಗುವವರ ಸಂಖ್ಯೆ ಈಗ 1,30,627ಕ್ಕೆ ಏರಿಕೆಯಾಗಿದೆ.

Advertisement

ಹಾಗೆಯೇಕಳೆದ24 ಗಂಟೆಗಳಲ್ಲಿ 37 ಮಂದಿ ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ. ಒಟ್ಟಾರೆ ಸೋಂಕಿಗೆ ಬಲಿಯಾಗುತ್ತಿರುವವ ಸಂಖ್ಯೆ 2,473ಕ್ಕೆ ಏರಿಕೆಯಾಗಿದೆ. ಹಾಗೆಯೇ ಹೊಸದಾಗಿ ನಗರದಲ್ಲಿ 2,966 ಸೋಂಕಿತ ಪ್ರಕರಣಗಳು ಕಂಡು ಬಂದಿದ್ದು ಒಟ್ಟಾರೆ ಸೋಂಕಿತರ ಸಂಖ್ಯೆಇದೀಗ 1,73,628ಕ್ಕೆ ಏರಿಕೆಯಾಗಿದೆ. ಜತೆಗೆ 40,527 ಸಕ್ರಿಯ ಪ್ರಕರಣಗಳಿದ್ದು ಅವರೆಲ್ಲ ನಗರದ ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿ ಆರೈಕೆ ಪಡೆಯುತ್ತಿದ್ದಾರೆ. ಅಲ್ಲದೆ 263 ಮಂದಿ ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಿಲಿಕಾನ್‌ ಸಿಟಿಯಲ್ಲಿ ಒಟ್ಟು ಪಾಸಿಟಿವ್‌ ಪ್ರಮಾಣ ಶೇ.14.05ರಷ್ಟು ಇದ್ದು, ಆಕ್ಟೀವ್‌ ಪ್ರಮಾಣ ಶೇ.23.08 ರಷ್ಟಿದೆ. ಸೋಮವಾರ 21,722 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು ಈ ಮೂಲಕ ಇದುವರೆಗೂ 12,35,880 ಮಂದಿಯ ತಪಾಸಣೆ ಮಾಡಲಾಗಿದೆ. ಕೋವಿಡ್‌ ನಿಂದ ಚೇತರಿಸಿಕೊಳ್ಳುವವರ ಪ್ರಮಾಣ 75.23ರಷ್ಟಿದ್ದು, ಮರಣ ಪ್ರಮಾಣಶೇ.1.42 ರಷ್ಟಿದೆ. ಜತೆಗೆ ಕಳೆದ 24 ಗಂಟೆಗಳಲ್ಲಿ ಯಲಹಂಕ ಮತ್ತು ಪಶ್ಚಿಮ ಶೇ.16ರಷ್ಟು, ಪೂರ್ವದಲ್ಲಿಶೇ.15ರಷ್ಟು, ದಕ್ಷಿಣದಲ್ಲಿ ಶೇ.14ರಷ್ಟು, ಬೊಮ್ಮನಹಳ್ಳಿಯಲ್ಲಿ ಶೇ.13ರಷ್ಟು, ಮಹಾದೇವಪುರದಲ್ಲಿ ಶೇ.11ರಷ್ಟು ಮತ್ತು ರಾಜರಾಜೇಶ್ವರ ನಗರದಲ್ಲಿ ಶೇ.11ರಷ್ಟು ಪಾಸಿಟಿವ್‌ ಪ್ರಕರಣಗಳು ಕಂಡು ಬಂದಿವೆ.

Advertisement

Udayavani is now on Telegram. Click here to join our channel and stay updated with the latest news.

Next