ಬಳ್ಳಾರಿ: ಗಣಿನಾಡು ಬಳ್ಳಾರಿ/ವಿಜಯನಗರ ಜಿಲ್ಲೆಗಳಲ್ಲಿ ಶುಕ್ರವಾರವೂ 1052 ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಬಳ್ಳಾರಿ ತಾಲೂಕು 485, ಸಂಡೂರು 161, ಸಿರುಗುಪ್ಪ 19, ಕೂಡ್ಲಿಗಿ 99, ಹಡಗಲಿ 53, ಹೊಸಪೇಟೆ 119, ಹ.ಬೊ.ಹಳ್ಳಿ 40, ಹರಪನಹಳ್ಳಿ 76 ಸೇರಿ ಒಟ್ಟು 1052 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಮನೆಗೆ ತೆರಳಿದ್ದಾರೆ. ಈ ಮೂಲಕ ನಿಧಾನವಾಗಿ ಸೋಂಕು ನಿಯಂತ್ರಣಕ್ಕೆ ಬರುತ್ತಿರುವುದು ಜಿಲ್ಲೆಯ ಜನರು ನಿಟ್ಟಿಸಿರು ಬಿಟ್ಟಿದ್ದಾರೆ.
ಇನ್ನು ಉಭಯ ಜಿಲ್ಲೆಗಳಲ್ಲಿ ಪ್ರತಿದಿನ ಪತ್ತೆಯಾಗುತ್ತಿರುವ ಸೋಂಕಿತರ ಸಂಖ್ಯೆಯೂ ಇಳಿಕೆಯಾಗುತ್ತಿದೆ. ಬಳ್ಳಾರಿ ತಾಲೂಕು 72 (2225 ಸಕ್ರಿಯ ಪ್ರಕರಣ), ಸಂಡೂರು 48 (386), ಸಿರುಗುಪ್ಪ 14 (453), ಕೂಡ್ಲಿಗಿ 43 (505), ಹಡಗಲಿ 60 (527), ಹೊಸಪೇಟೆ 86 (1104), ಹ.ಬೊ.ಹಳ್ಳಿ 37 (611), ಹರಪನಹಳ್ಳಿ 59 (578), ಇತರೆ ರಾಜ್ಯ 0 (32), ಇತರೆ ಜಿಲ್ಲೆ 4 (57) ಸೇರಿ ಒಟ್ಟು 423 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 6478ಕ್ಕೆ ಇಳಿಕೆಯಾಗಿದೆ. ಇನ್ನು ಅವಳಿ ಜಿಲ್ಲೆಗಳಲ್ಲಿ ಸೋಂಕಿಗೆ 8 ಜನರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 1395ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.
ಜಿಲ್ಲೆಯಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿರುವುದನ್ನು ನಿಯಂತ್ರಿಸಲು ಮುಂದಾಗಿರುವ ಆರೋಗ್ಯ ಇಲಾಖೆ ಅಷ್ಟೇ ಪ್ರಮಾಣದಲ್ಲಿ ತಪಾಸಣೆ ನಡೆಸಿ ಸೋಂಕಿತರನ್ನು ಪತ್ತೆಹಚ್ಚುತ್ತಿದೆ. ಜೂ. 3ರಂದು 866 ರ್ಯಾಪಿಡ್ ಆಂಟಿಜೆನ್, 2260 ಆರ್‌ಟಿ ಪಿಸಿಆರ್ ಸೇರಿ ಒಟ್ಟು 3126 ಜನರನ್ನುಕೋವಿಡ್ ತಪಾಸಣೆಗೆ ಒಳಪಡಿಸಲಾಗಿದೆ.ಅದೇ ರೀತಿ ಈವರೆಗೆ 2,60,208 ರ್ಯಾಪಿಡ್ ಆಂಟಿಜೆನ್, 5,74,683 ಆರ್‌ಟಿಪಿಸಿಆರ್‌ಸೇರಿ ಒಟ್ಟು ಈವರೆಗೆ 8,34,891 ಜನರಿಗೆ ಕೋವಿಡ್ ಪರೀಕ್ಷೆ ಮಾಡಲಾಗಿದೆ.