Advertisement
ಹೆಚ್ಚುತ್ತಿರುವ ಡೆಂಗ್ಯೂ ಪ್ರಕರಣಗಳ ಜತೆಗೆ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸುವಂತೆ ಬಿಜೆಪಿ ಆಗ್ರಹಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಸಭೆಯಲ್ಲಿ ಈ ವಿಷಯ ಪ್ರಸ್ತಾವಿಸಿದ ಸಿಎಂ ಸಿದ್ದರಾಮಯ್ಯ, ಕಾರ್ಯಪಡೆ ರಚಿಸುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್‌ಗೆ ಸೂಚಿಸಿದ್ದಾರೆ. ಸೊಳ್ಳೆ ಕಾಟ ಇರುವ ಕೊಳೆಗೇರಿಗಳಲ್ಲಿ ಉಚಿತ ಸೊಳ್ಳೆಪರದೆ ಒದಗಿಸುವಂತೆಯೂ ಸೂಚನೆ ನೀಡಲಾಗಿದೆ ಎಂದು ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿವರ ನೀಡಿದರು.
Related Articles
ಶಿಕ್ಷಣ ಇಲಾಖೆಗೆ ಸಂಬಂಧಪಟ್ಟಂತೆ ವಿಸ್ತೃತ ಚರ್ಚೆ ನಡೆಸಲಾಗಿದ್ದು, ಈ ವರ್ಷ ಮೂರು ಪೂರಕ ಎಸೆಸೆಲ್ಸಿ ಪರೀಕ್ಷೆ ನಡೆಸುವಂತೆ ಸೂಚನೆ ನೀಡಿದ್ದೇನೆ. ಕಾಪಿ ಹೊಡೆಯುವುದನ್ನು ತಡೆಗಟ್ಟಿದ ಕಾರಣಕ್ಕೆ ಫಲಿತಾಂಶ ಕಡಿಮೆಯಾಗಿದೆ ಎಂಬ ವಾದ ಕೇಳಿ ಬಂದಿದೆ. ಆದರೆ ನನಗೆ ಸಮಾಧಾನವಿಲ್ಲ. ಪರಿಸ್ಥಿತಿ ಸುಧಾರಿಸಲು ಕ್ರಮ ತೆಗೆದುಕೊಳ್ಳ ಬೇಕು. ಇಲ್ಲವಾದರೆ ಸಿಇಒ, ಡಿಡಿಪಿಐ, ಬಿಇಒಗಳ ವಿರುದ್ಧ ಕ್ರಮ ತೆಗೆದು ಕೊಳ್ಳಲಾಗು ವುದು. ಪಿಯು ಸಹಿತ ಬಾಕಿ ಇರುವ 9,800 ಶಾಲಾ ಕಟ್ಟಡಗಳನ್ನು ಡಿಸೆಂಬರ್ ಒಳಗೆ ಪೂರ್ಣಗೊಳಿಸಬೇಕೆಂದು ಸೂಚನೆ ನೀಡಿದರು.
Advertisement
ಭೂನಿಧಿಇಡೀ ರಾಜ್ಯದಲ್ಲಿ ಎಷ್ಟು ಸರಕಾರಿ ಭೂಮಿ ಇದೆ ಎಂಬ ಮಾಹಿತಿ ಸಂಗ್ರಹಿಸುವಂತೆ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಲಾ
ಗಿದೆ. ತಹಶೀಲ್ದಾರ್ ಕಚೇರಿ ಯಲ್ಲಿ ಈ ಬಗ್ಗೆ ಮಾಹಿತಿ ಇರಬೇಕು. ಸರ್ವೆ ಕಾರ್ಯ ಚುರುಕು ಗೊಳಿಸುವುದಕ್ಕಾಗಿ ಸದ್ಯದಲ್ಲೇ 750 ಸರ್ವೇಯರ್‌ಗಳನ್ನು ನೇಮಕ ಮಾಡಿ ಕೊಳ್ಳಲಾಗುವುದು. ಡಿಸಿ ಕೋರ್ಟ್‌ಗಳಲ್ಲಿ ಒಂದು ವರ್ಷಕ್ಕಿಂತ ಜಾಸ್ತಿ ಇರುವ ಪ್ರಕರಣಗಳ ಶೀಘ್ರ ವಿಲೇ ವಾರಿಗೆ ಸೂಚಿಸಲಾಗಿದೆ ಎಂದರು. ಕಳೆದ ಬಾರಿ ತಾನು ನಡೆಸಿದ ಜನಸಂಪರ್ಕ ಸಭೆಗೆ 20 ಸಾವಿರ ಅರ್ಜಿಗಳು ಬಂದಿದ್ದು, 278 ಮಾತ್ರ ವಿಲೇ ವಾರಿಗೆ ಬಾಕಿ ಇವೆ. ಶೇ. 80ರಷ್ಟು ಗುಣಮಟ್ಟದ ವಿಲೇವಾರಿಯಾಗಿವೆ ಎಂದರು. ಮೂರು ತಿಂಗಳಿಗೊಮ್ಮೆ ಸಭೆ
ಇನ್ನು ಮುಂದೆ ಪ್ರತೀ ಮೂರು ತಿಂಗಳಿಗೊಮ್ಮೆ ಅಧಿಕಾರಿಗಳ ಜತೆಗೆ ಇಂಥ ಸಭೆ ನಡೆಸಲಾಗುವುದು. ಸೆಪ್ಟಂಬರ್‌ನಲ್ಲಿ ಈ ಹಿಂದೆ ಸಭೆ ಸೇರಲಾಗಿತ್ತು. ಲೋಕಸಭಾ ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸಭೆ ಮಾಡುವುದಕ್ಕೆ ಸಾಧ್ಯವಾಗಿರಲಿಲ್ಲ ಎಂದರು. ಮತ್ತೆ ಜಾತಿ ಗಣತಿ ಪ್ರಸ್ತಾವ
ಆರ್ಥಿಕ ಹಾಗೂ ಸಾಮಾಜಿಕ ಗಣತಿ ವರದಿಯನ್ನು ಸರಕಾರ ಸ್ವೀಕರಿಸಿದೆ. ವರದಿಯನ್ನು ಇನ್ನೂ ಅಧ್ಯಯನ ಮಾಡದೆ ಇರುವುದರಿಂದ ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ನಕಲಿ ಬಿಪಿಎಲ್ ಕಾರ್ಡ್ ಪತ್ತೆ ಹಚ್ಚುವುದಕ್ಕೆ ಆರ್ಥಿಕ ಹಾಗೂ ಸಾಮಾಜಿಕ ಗಣತಿ ವರದಿ ಅಧ್ಯಯನದಿಂದ ಅನುಕೂಲವಾಗುವುದಿಲ್ಲವೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ನಾನು ಇನ್ನೂ ವರದಿಯನ್ನು ಓದಿಲ್ಲ. ಓದದೆ ಹೇಗೆ ಹೇಳುವುದಕ್ಕೆ ಸಾಧ್ಯ? ಸಚಿವ ಸಂಪುಟ ಸಭೆಯಲ್ಲಿ ವರದಿ ಅಂಗೀಕಾರವಾಗಬೇಕು ಎಂದರು. ವರ್ಷಾಂತ್ಯದೊಳಗೆ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ನೇಮಿಸಿ
ಬೆಂಗಳೂರು: ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿ ಯರ ನೇಮಕಾತಿ ಪ್ರಕ್ರಿಯೆ ಯನ್ನು ವರ್ಷಾಂತ್ಯದೊಳಗೆ ಪೂರ್ಣ ಗೊಳಿಸುವಂತೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರ 4,180 ಹುದ್ದೆ ಗಳು ಹಾಗೂ ಸಹಾಯಕಿಯರ 9,411 ಹುದ್ದೆಗಳು ಖಾಲಿಯಿದ್ದು, ನೇಮಕಾತಿ ಪ್ರಕ್ರಿಯೆ ಯನ್ನು ಡಿಸೆಂಬರ್ ಅಂತ್ಯದ ಒಳ ಗಾಗಿ ಪೂರ್ಣ ಗೊಳಿಸಬೇಕು. ನಗರ ಪ್ರದೇಶ ದಲ್ಲಿ ಸಹಾ ಯಕಿಯರ ಹುದ್ದೆ ಯ ಗೌರವಧನ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿ ಎಂದರು. ಡೆಂಗ್ಯೂ ನಿಯಂತ್ರಣಕ್ಕೆ ಸಿಎಂ ಸಿಎಂ ಸೂಚನೆಗಳು
-ಸೊಳ್ಳೆಕಾಟ ಇರುವ ಕೊಳೆಗೇರಿ ಗಳಲ್ಲಿ ಉಚಿತ ಸೊಳ್ಳೆಪರದೆ ವಿತರಣೆ ಮಾಡಬೇಕು.
-ಡಿಸಿ, ಸಿಇಒ, ಡಿಎಚ್‌ಒ ಪ್ರತಿನಿತ್ಯ ಸಮನ್ವಯ ಸಮಿತಿ ಸಭೆ ನಡೆಸಬೇಕು.
-ಪ್ರತೀ ಜಿಲ್ಲಾಸ್ಪತ್ರೆಯಲ್ಲಿ ಕನಿಷ್ಠ 10 ಹಾಸಿಗೆ ಡೆಂಗ್ಯೂ ಪೀಡಿತರ ಚಿಕಿತ್ಸೆಗೆ ಮೀಸಲಿಡಬೇಕು.
-ಮಳೆಗಾಲ ಮುಗಿಯುವವರೆಗೆ ಅಧಿ ಕಾರಿಗಳು ಪ್ರತಿದಿನ ಸಭೆ ನಡೆಸಿ ಪರಿಸ್ಥಿತಿ ಅವಲೋಕಿಸ ಬೇಕು. ಹೊಸ ಪ್ರವಾಸೋದ್ಯಮ
ನೀತಿ ರಚನೆ: ಸಿಎಂ
ಬೆಂಗಳೂರು: ಅನೇಕ ರಾಜ್ಯಗಳಿಗೆ ಪ್ರವಾಸೋದ್ಯಮವೇ ಪ್ರಮುಖ ಆದಾಯ. ಕರ್ನಾಟಕ ದಲ್ಲೂ ಪ್ರವಾಸೋದ್ಯಮಕ್ಕೆ ಹೆಚ್ಚು ಅವಕಾಶ ಇದೆ. ಆದರೆ ನೆರೆಯ ಕೇರಳದಷ್ಟು ಕೂಡ ನಮ್ಮಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಆಗಿಲ್ಲ. ಇದಕ್ಕಾಗಿ ಸಮಗ್ರ ನೀಲನಕ್ಷೆ ಸಿದ್ಧಪಡಿಸಬೇಕು ಎಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದರು. ಸ್ಮಾರಕಗಳ ಮಹತ್ವ ಅರಿತ
ಗೈಡ್‌ಗಳ ನೇಮಕಕ್ಕೆ ಸಚಿವ ಪಾಟೀಲ್ ಸೂಚನೆ
ಬೆಂಗಳೂರು: ರಾಜ್ಯದಲ್ಲಿ 25 ಸಾವಿರ ಸ್ಮಾರಕಗಳಿವೆ. ಇವುಗಳ ಪೈಕಿ ಸುಮಾರು 23 ಸಾವಿರ ಸ್ಮಾರಕಗಳು ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಸ್ಮಾರಕಗಳ ಮಹತ್ವ ಅರಿತ ಗೈಡ್‌ಗಳನ್ನು ನೇಮಿಸುವ ಬಗ್ಗೆ ಚಿಂತನೆ ನಡೆದಿದೆ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ಹೇಳಿದರು. ಪ್ರವಾಸಿ ತಾಣಗಳ ಸಮೀಕ್ಷೆ, ಸಂರಕ್ಷಣೆ ಇತ್ಯಾದಿಗಳ ಕುರಿತ ಜಿಲ್ಲಾವಾರು ಮಾಸ್ಟರ್ ಪ್ಲ್ರಾನ್ ಸಿದ್ಧಪಡಿಸಬೇಕು. ಮೂರು ತಿಂಗಳ ಒಳಗಾಗಿ ಈ ಕಾರ್ಯವನ್ನು ಪೂರ್ಣಗೊಳಿಸಬೇಕು ಎಂದು ಹೇಳಿದರು.