Advertisement
ಬದಲಾವಣೆಗೆ ಏನು ಕಾರಣ?
Related Articles
Advertisement
“ಎ’ ಮತ್ತು “ಎಸ್’ ರೇಟಿಂಗ್‌ನ ಚಲನಚಿತ್ರಗಳನ್ನು ದೂರದರ್ಶನದಲ್ಲಿ ಪ್ರಸಾರ ಮಾಡುವಾಗ ಬೇರೆಯದ್ದೇ ಮಾರ್ಗಸೂಚಿಗಳಿವೆ. ಅಂದರೆ ಈ ಚಲನಚಿತ್ರಗಳನ್ನು ಪ್ರಸಾರ ಮಾಡುವ ಮುನ್ನ, ಕೆಲವೊಂದು ದೃಶ್ಯಾವಳಿಗಳಿಗೆ ಕತ್ತರಿ ಹಾಕಿ ಪ್ರಸಾರ ಮಾಡಬೇಕಾಗುತ್ತದೆ. ಒಮ್ಮೆ ಚಲನಚಿತ್ರಕ್ಕೆ ನೀಡಲಾದ ಪ್ರಮಾಣಪತ್ರವು 10 ವರ್ಷಗಳ ವರೆಗೆ ಜಾರಿಯಲ್ಲಿರುತ್ತದೆ. ಅಲ್ಲದೆ ಪ್ರಮಾಣ ಪತ್ರ ವಿಚಾರದಲ್ಲಿ ಸೆನ್ಸಾರ್ ಮಂಡಳಿ ಕಾರ್ಯವಿಧಾನ ಮತ್ತು ಕೇಂದ್ರ ಸರಕಾರದ ಅಧಿಕಾರದ ಬಗ್ಗೆಯೂ ಕೆಲವೊಂದು ಬದಲಾವಣೆಗಳನ್ನು ತರಲಾಗಿದೆ.
ಪೈರಸಿ ನಿಯಂತ್ರಣ
ಈ ತಿದ್ದುಪಡಿ ಕಾಯ್ದೆಯ ಪ್ರಮುಖ ಉದ್ದೇಶವೇ ಪೈರಸಿ ನಿಯಂತ್ರಣ ತರುವಂಥದ್ದಾಗಿದೆ. ಅಂದರೆ ಅಕ್ರಮವಾಗಿ ಸಿನೆಮಾವನ್ನು ರೆಕಾರ್ಡಿಂಗ್ ಮಾಡುವುದು ಅಥವಾ ಅಕ್ರಮವಾಗಿ ಪ್ರಸಾರ ಮಾಡುವುದನ್ನು ನಿರ್ಬಂಧಿಸಿದೆ. ಅಂದರೆ ಅಕ್ರಮವಾಗಿ ಚಲನಚಿತ್ರವೊಂದನ್ನು ರೆಕಾರ್ಡಿಂಗ್ ಮಾಡುವುದು ಅಪರಾಧ. ಅಲ್ಲದೆ ಮಾಲಕರ ಒಪ್ಪಿಗೆ ಇಲ್ಲದೇ ಸಿನೆಮಾದ ನಕಲು ಕಾಪಿಯನ್ನು ಪ್ರಸಾರ ಮಾಡುವುದೂ ಅಪರಾಧ. ಈ ಕೆಲಸಗಳಿಗೆ ಕಾಪಿರೈಟ್ ಕಾಯ್ದೆಯನ್ನು ಬಳಸಿಕೊಂಡು ಶಿಕ್ಷೆ ಪ್ರಮಾಣ ನಿರ್ಧಾರ ಮಾಡಲಾಗಿದೆ. ಹೀಗಾಗಿ ರೆಕಾರ್ಡಿಂಗ್ ಮಾಡಿದವರು ಅಥವಾ ಅಕ್ರಮವಾಗಿ ಚಿತ್ರವನ್ನು ಪ್ರಸಾರ ಮಾಡಿದಲ್ಲಿ 3 ವರ್ಷಗಳ ವರೆಗೆ ಜೈಲು ಶಿಕ್ಷೆ ಅಥವಾ 10 ಲಕ್ಷ ರೂ.ಗಳವರೆಗೆ ದಂಡ ವಿಧಿಸಬಹುದಾಗಿದೆ. ಕೆಲವೊಮ್ಮೆ ದಂಡದ ಜತೆಗೆ ಜೈಲು ಶಿಕ್ಷೆ ವಿಧಿಸಲೂ ಅವಕಾಶ ನೀಡಲಾಗಿದೆ. ಶಿಕ್ಷೆಗೆ ಮಿತಿಯನ್ನೂ ನೀಡಲಾಗಿದೆ. ಕನಿಷ್ಠ 3 ತಿಂಗಳು ಮತ್ತು ಕನಿಷ್ಠ 3 ಲಕ್ಷ ರೂ.ವರೆಗೆ ದಂಡ ವಿಧಿಸಬಹುದು. ಕೆಲವು ಪ್ರಸಂಗಗಳಲ್ಲಿ ಸಿನೆಮಾದ ನಿರ್ಮಾಣಕ್ಕೆ ಆಗಿರುವ ವೆಚ್ಚದ ಶೇ.5ರಷ್ಟನ್ನು ದಂಡವಾಗಿ ಪಡೆಯಬಹುದಾಗಿದೆ.
ಭಾರತದಲ್ಲಿ ಪೈರಸಿ ಪಿಡುಗು
ಭಾರತದಲ್ಲಿ ಈಗಲೂ ಪೈರಸಿ ಪಿಡುಗು ಚಿತ್ರರಂಗವನ್ನು ಕಾಡುತ್ತಿದೆ. ಹೊಸದಾಗಿ ಬಿಡುಗಡೆಯಾದ ಚಲನಚಿತ್ರಗಳೇ ಕೆಲವು ವೆಬ್‌ಸೈಟ್‌ಗಳು ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾಗುತ್ತವೆ. ಕೆಲವೊಂದು ವೆಬ್‌ಸೈಟ್‌ಗಳು ಚಲನಚಿತ್ರಗಳನ್ನು ಆನ್‌ಲೈನ್ ಮೂಲಕವೂ ಸ್ಟ್ರೀಮಿಂಗ್ ಮಾಡುತ್ತಿದ್ದಾರೆ. 2
022ರ ದತ್ತಾಂಶಗಳ ಪ್ರಕಾರ, ಇಡೀ ಜಗತ್ತಿನಲ್ಲಿ ಪೈರಸಿ ವೆಬ್‌ಸೈಟ್‌ಗಳಿಗೆ ಭೇಟಿ ನೀಡುವವರಲ್ಲಿ ಭಾರತೀಯರಿಗೆ ಮೂರನೇ ಸ್ಥಾನ. ಅಂದರೆ 7 ಶತಕೋಟಿ ಬಾರಿ ಇಂಥ ವೆಬ್‌ಸೈಟ್‌ಗಳಿಗೆ ಭಾರತೀಯರು ಭೇಟಿ ನೀಡಿದ್ದಾರೆ. ಅಲ್ಲದೆ ವಾಟ್‌ಆ್ಯಪ್ ಮತ್ತು ಟೆಲಿಗ್ರಾಂನಂಥ ಸಾಮಾಜಿಕ ಜಾಲತಾಣಗಳಲ್ಲೂ ಸಿನೆಮಾಗಳು ಸಿಗುತ್ತಿವೆ. ವರದಿಯೊಂದರ ಪ್ರಕಾರ ಅಕ್ರಮವಾಗಿ ಆನ್‌ಲೈನ್‌ನಲ್ಲಿ ವೀಕ್ಷಣೆ ಮಾಡುವುದರಲ್ಲಿ ಟಿವಿ ಕಂಟೆಂಟ್‌ಗಳು ಮೊದಲ ಸ್ಥಾನ ಪಡೆದಿವೆ. ಇವೇ ಶೇ.46.6ರಷ್ಟು ಸ್ಥಾನ ಪಡೆದಿವೆ. ಎರಡನೇ ಸ್ಥಾನ ಪುಸ್ತಕಗಳ ಡೌನ್‌ಲೋಡ್. ಶೇ.27.8ರಷ್ಟು ಮಂದಿ ಪುಸ್ತಕಗಳನ್ನು ಡೌನ್‌ಲೋಡ್ ಮಾಡಿಕೊಳ್ಳುತ್ತಾರೆ.
ಚಲನಚಿತ್ರಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವವರ ಸಂಖ್ಯೆ ಶೇ.12.4. ಸಂಗೀತವನ್ನು ಡೌನ್‌ಲೋಡ್ ಮಾಡಿಕೊಳ್ಳುವವರು ಶೇ.7 ಮತ್ತು ಸಾಫ್ಟ್ವೇರ್ ಡೌನ್‌ಲೋಡ್ ಮಾಡಿಕೊಳ್ಳುವವರು ಶೇ.6ರಷ್ಟಿದ್ದಾರೆ. ಭಾರತದಲ್ಲಿ ಅತೀ ಹೆಚ್ಚು ಬಾರಿ ಡೌನ್‌ಲೋಡ್ ಆದ ಹಾಲಿವುಡ್ ಸಿನೆಮಾ ಸ್ಪೈಡರ್ ಮ್ಯಾನ್-ನೋ ವೇಟು ಹೋಮ್. ಭಾರತೀಯ ಸಿನೆಮಾಗಳೆಂದರೆ ಕೆಜಿಎಫ್-2 ಮತ್ತು ಆರ್‌ಆರ್‌ಆರ್.
ರೇಟಿಂಗ್ ಬದಲಾವಣೆ
ಒಮ್ಮೆ ಈ ಕಾಯ್ದೆ ಕಾನೂನಾಗಿ ಬಂದ ಬಳಿಕ ಸಿನೆಮಾಗಳ ರೇಟಿಂಗ್ ಕೂಡ ಬದಲಾಗಲಿದೆ. ಅಂದರೆ ಸದ್ಯ “ಎ’, “ಯು’ ಮತ್ತು “ಯುಎ’ ಎಂಬ ವರ್ಗಗಳಿವೆ. ಇದಕ್ಕೆ ವಯೋಮಿತಿಯನ್ನೂ ನಿಗದಿ ಮಾಡಲಾಗಿದೆ.
“ಯು” ಯಾವುದೇ ನಿರ್ಬಂಧ ಇಲ್ಲದೇ ಇರುವುದು
“ಯುಎ'(12 ವರ್ಷ ಮೇಲ್ಪಟ್ಟು)- ನಿರ್ಬಂಧ ಇಲ್ಲದಿರುವುದರ ಜತೆಗೆ ಪೋಷಕರ ಸಲಹೆ ಮೇರೆಗೆ ನೋಡಬಹುದಾದ್ದು.
“ಎ'(18 ವರ್ಷಕ್ಕಿಂತ ಮೇಲ್ಪಟ್ಟು)- ಕೇವಲ ವಯಸ್ಕರಷ್ಟೇ ನೋಡಬಹುದಾದದ್ದು.
“ಎಸ್’- ನಿಗದಿತ ವರ್ಗ ಅಥವಾ ವೃತ್ತಿಪರರು ನೋಡಬಹುದಾಗಿರುವಂಥದ್ದು.
ಈ ವಿಧೇಯಕದಲ್ಲಿ “ಯುಎ’ನೊಳಗೆ ಉಪ ವರ್ಗಗಳನ್ನು ಮಾಡಲಾಗಿದೆ. ಅವುಗಳೆಂದರೆ, “ಯುಎ'(7+) l “ಯುಎ'(13+)l “ಯುಎ'(16+) – ಈ ಗುಂಪಿಗೆ ಸೇರಿದ ಚಲನಚಿತ್ರಗಳನ್ನು ಕೇವಲ ಪೋಷಕರ ಮಾರ್ಗದರ್ಶನದಂತೆಯೇ ನೋಡಬೇಕಾಗಿದೆ. ಪೋಷಕರ ಹೊರತಾಗಿದೆ ಬೇರೆಯವರ ಮಾರ್ಗದರ್ಶನ ತೆಗೆದುಕೊಳ್ಳುವಂತಿಲ್ಲ.