Advertisement
ಶಾಂತಿವನ ಟ್ರಸ್ಟ್‌ನ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯಡಿ ಇತ್ತೀಚೆಗೆ ಆಯೋಜಿಸಿದ್ದ 17ನೇ ರಾಜ್ಯ ಮಟ್ಟದ ಅಂಚೆ-ಕುಂಚ ಸ್ಪರ್ಧೆಯ ವಿಜೇತರಿಗೆ ರವಿವಾರ ಧರ್ಮಸ್ಥಳದಲ್ಲಿ ಪುರಸ್ಕಾರ ವಿತರಿಸಿ ಅವರು ಮಾತನಾಡಿದರು.ದೇಶದಲ್ಲಿರುವ ಭಾಷೆಯ ವಿಶೇಷತೆ, ಅವುಗಳಲ್ಲಿ ಅಡಕವಾಗಿರುವ ಸಂಪ್ರದಾಯಗಳು ಜೀವನ ಪದ್ಧತಿಯಲ್ಲಿ ಏಕತೆಯನ್ನು ಕಂಡುಕೊಂಡಿವೆ.
Related Articles
ಅಧ್ಯಕ್ಷತೆ ವಹಿಸಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ಸೃಜನಾತ್ಮಕ ಮತ್ತು ವಾಸ್ತವಿಕ ಕಲೆ ಎಲ್ಲರಲ್ಲೂ ಇರುವಂತಹದು. ಅದನ್ನು ಕಲ್ಪನೆಯಿಂದ ವಿಸ್ತರಿಸುವುದರಿಂದ ಸಾಧಕರಾಗಿ ಗುರುತಿಸಿಕೊಳ್ಳುತ್ತಾರೆ. ಕಲೆಗೆ ಪ್ರಚಂಡ ಶಕ್ತಿಯಿದೆ. ಮಾರಾಟ ಕ್ಕಾಗಿ ಕಲೆಯನ್ನು ಪ್ರೀತಿಸದೆ ಭಾವನೆ ವ್ಯಕ್ತಪಡಿಸಲು, ಆನಂದ ಪ್ರಕಟ ಗೊಳಿಸಲು ಪ್ರೀತಿಸಿ ಎಂದು ಸಲಹೆ ನೀಡಿದರು.
Advertisement
ಶುಭಾಶಂಸನೆ ಮಾಡಿದ ಗಂಜೀಫಾ ರಘುಪತಿ ಭಟ್, ಧರ್ಮಸ್ಥಳವು ಬೇಡಿ ಬಂದವರಿಗೆ ಪರಿಹಾರ ನೀಡುವ ಕ್ಷೇತ್ರವಾಗಿದೆ. ಗಂಜೀಫಾ ಕಲೆಗೆ ಹೆಗ್ಗಡೆಯವರು ನೀಡಿದ ಪ್ರೋತ್ಸಾಹ ಮತ್ತು ಬೆಂಬಲ ನನ್ನನ್ನು ವಿಶ್ವದಾದ್ಯಂತ ಗುರುತಿಸುವಂತೆ ಮಾಡಿದೆ. ವಿದೇಶೀ ಶೈಲಿಯ ಕಲೆಗಳ ವ್ಯಾಮೋಹದಿಂದ ದೇಶೀಯ ಚಿತ್ರಕಲೆ ವಿನಾಶದಂಚಿನಲ್ಲಿದ್ದು, ಅವುಗಳನ್ನು ಸಂರಕ್ಷಿಸುವ ಕೆಲಸ ಯುವ ಕಲಾಸಕ್ತರ ಕೈಯಲ್ಲಿದೆ ಎಂದರು.
ಹೇಮಾವತಿ ವೀ. ಹೆಗ್ಗಡೆ, ಡಿ. ಹಷೇìಂದ್ರ ಕುಮಾರ್, ಶಾಂತಿವನ ಟ್ರಸ್ಟ್‌ನ ಕಾರ್ಯದರ್ಶಿ ಬಿ. ಸೀತಾರಾಮ ತೋಳ್ಪಾಡಿತ್ತಾಯ ಉಪಸ್ಥಿತರಿದ್ದರು.ಯೋಗ ನಿರ್ದೇಶಕ ಡಾ| ಐ. ಶಶಿಕಾಂತ್ ಜೈನ್ ಸ್ವಾಗತಿಸಿದರು. ಮೂಡುಬಿದಿರೆ ಪ್ರಾಂತ ಸರಕಾರಿ ಪ್ರೌಢ ಶಾಲಾ ಶಿಕ್ಷಕ ಬಾಲಕೃಷ್ಣ ವಂದಿಸಿದರು. ಬಂಟ್ವಾಳದ ಸದಾಶಿವ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು. ಅಂಚೆ-ಕುಂಚ ಸ್ಪರ್ಧೆ ವಿಜೇತರು
- ಪ್ರಾಥಮಿಕ ಶಾಲಾ ವಿಭಾಗ: ಪ್ರಥಮ: ಶಶಾಂಕ ಕೋಲ್ಕಾರ್, ರಾಯಚೂರು ಜಾಲಹಳ್ಳಿಯ ಡಾರ್ವಿನ್ ಹಿ.ಪ್ರಾ.ಶಾಲೆ. ದ್ವಿತೀಯ: ಗಗನ್ ಎ.ವಿ., ಪಾಣೆಮಂಗಳೂರು ಎಸ್.ಎಲ್.ಎನ್.ಪಿ. ವಿದ್ಯಾಲಯ. ತೃತೀಯ: ಅನ್ವಿತ್ ಎಚ್., ಮಂಗಳೂರು ಉರ್ವ ಕೆನರಾ ಹಿ.ಪ್ರಾ. ಶಾಲೆ. - ಪ್ರೌಢ ಶಾಲೆ ವಿಭಾಗ: ಪ್ರಥಮ: ಅಖೀಲೇಶ ನಾಗೇಶ ನಾಯ್ಕ, ಕಾರವಾರ ಸೈಂಟ್ ಜೋಸೆಫ್ ಪ್ರೌಢ ಶಾಲೆ. ದ್ವಿತೀಯ: ಆದರ್ಶ್ ನಾರಾಯಣನ್, ಬ್ರಹ್ಮಾವರ ಜಿ.ಎಂ. ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್. ತೃತೀಯ: ಪ್ರತೀಕ್ಷಾ ಮರಕಿಣಿ, ಬೆಂಗಳೂರು ಸದಾಶಿವನಗರ ಪೂರ್ಣಪ್ರಜ್ಞ ಪ್ರೌಢ ಶಾಲೆ, - ಕಾಲೇಜು ವಿಭಾಗ: ಪ್ರಥಮ: ಅನನ್ಯಾ ದೀಪಕ್ ನಾಯ್ಕ, ಕಾರವಾರ ಸ.ಪ.ಪೂ. ಕಾಲೇಜು, ದ್ವಿತೀಯ: ಅವಿನಾಶ್ ಜಿ. ಪೈ., ಬೆಂಗಳೂರು ಸೌತ್ ಕ್ಯಾಂಪಸ್ ಕಾಲೇಜು. ತೃತೀಯ: ರತನ್, ಬೈಂದೂರು ಸ.ಪ.ಪೂ. ಕಾಲೇಜು ಉಪ್ಪುಂದ. - ಸಾರ್ವಜನಿಕ ವಿಭಾಗ: ಪ್ರಥಮ: ದಿನೇಶ ದೇವರಾಯ ಮೇತ್ರಿ, ಅಂಕೋಲಾದ ಆವರ್ಸೆ, ದ್ವಿತೀಯ: ವಿಶ್ವೇಶ್ವರ ಎಂ. ಪಟಗಾರ, ತಲಗೋಡ್-ಊರಕೇರಿ, ಕುಮಟಾ, ತೃತೀಯ: ಬಿ.ಕೆ. ಮಾಧವ ರಾವ್, ಮಂಗಳೂರು ಕೊಂಚಾಡಿ.