Advertisement
ಪ್ರಥಮ ಬಾರಿಗೆ ಕೇಂದ್ರ ಸರಕಾರ ಈ ಯಕ್ಷಗಾನ ಕಲಾವಿದರಿಗೆ ಮನ್ನಣೆ ನೀಡಿ ಎನ್‌ಎಂಪಿಟಿಯ ಮೂಲಕ ಇವರಿಗೆ ಸಾಂಸ್ಕೃತಿಕ ಪ್ರದರ್ಶನ ನೀಡಲು ಅನುಮತಿ ಸಿಕ್ಕಿದೆ. ಇದರ ಜತೆಗೆ ಒಂದಿಷ್ಟು ಗೌರವಧನವೂ ಇವರಿಗೆ ಲಭಿಸುತ್ತದೆ. ಈ ಮೂಲಕ ಯಕ್ಷಗಾನಕ್ಕೂ ವಿದೇಶಿ ಅಭಿಮಾನಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗತೊಡಗಿದೆ.
Related Articles
Advertisement
ಸೂಕ್ಷ್ಮ ವೇಷ ಭೂಷಣ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇಲ್ಲಿಗೆ ಬಂದವರು ಅದರ ಬಗ್ಗೆ ತಿಳಿದುಕೊಳ್ಳಲು ಉತ್ಸುಕರಾಗಿದ್ದೇವೆ ಎಂದು ಹೇಳುತ್ತಾರೆ. ನೃತ್ಯದ ಮೂಲಕ ಸ್ವಾಗತ ಕೋರುವ ತಂಡವನ್ನು ಮುನ್ನಡೆಸುತ್ತಿರುವ ಪಣಂಬೂರು ಯಕ್ಷಗಾನ ತಂಡದ ಶಂಕರನಾರಾಯಣ ಮೈರ್ಪಾಡಿ ಅವರು.
ಎರಡು ಹಡಗುಗಳುಬಹುತೇಕ ಹಡಗುಗಳು ಮುಂಬಯಿ ಮೂಲಕ ಆಗಮಿಸಿ ಮಂಗಳೂರು, ಕೊಚ್ಚಿನ್, ಇಲ್ಲವೇ ಕೊಚ್ಚಿನ್ ಮೂಲಕ ಆಗಮಿಸಿ ಗೋವಾ ಮೂಲಕ ಸಾಗುತ್ತವೆ. ನ. 26, 27ರಂದು ಎರಡು ದಿನ ಎರಡು ಪ್ರತ್ಯೇಕ ಪ್ರವಾಸಿ ಹಡಗು ಆಗಮಿಸಲಿದ್ದು, ಸ್ಥಳೀಯ ಐತಿಹಾಸಿಕ ಪ್ರವಾಸಿ ಸ್ಥಳಗಳನ್ನು ವೀಕ್ಷಿಸಲಿದ್ದಾರೆ. ಸಂಸ್ಕೃತಿ ಪರಿಚಯಿಸುವ ಉದ್ದೇಶ
ಪ್ರವಾಸಿ ಹಡಗು ನವಮಂಗಳೂರಿಗೆ ಬಂದ ಸಂದರ್ಭ ನಮ್ಮ ಜಿಲ್ಲೆಯ ಉತ್ತಮ ಸಂಸ್ಕೃತಿಯನ್ನು ಪ್ರವಾಸಿಗರಿಗೆ ಪರಿಚಯಿಸುವ ಉದ್ದೇಶವಿದೆ. ಈ ಮೂಲಕ ಸಾಂಪ್ರದಾಯಿಕ ಯಕ್ಷಗಾನ ಮತ್ತು ಇತರ ನೃತ್ಯದ ಮೂಲಕ ಸ್ವಾಗತಿಸುವ ವಿಶೇಷ ವ್ಯವಸ್ಥೆಯನ್ನು ಎನ್‌ಎಂಪಿಟಿ ಮಾಡಿದೆ. ಪ್ರವಾಸಿಗರು ಆಕರ್ಷಿತರಾಗಿ ಮಾಹಿತಿ ಪಡೆಯು ವುದನ್ನು ಕಂಡಾಗ ಶ್ರೀಮಂತ ಸಂಸ್ಕೃತಿಯ ಬಗ್ಗೆ ಹೆಮ್ಮೆ ಎನಿಸುತ್ತದೆ.
– ಎ.ವಿ. ರಮಣ್,
ಚೆಯರ್‌ಮನ್ , ಎನ್‌ಎಂಪಿಟಿ