Advertisement
ಜಿಲ್ಲಾಧಿಕಾರಿ ಕಚೇರಿ: ಗಣರಾಜ್ಯೋತ್ಸವ ನಿಮಿತ್ತ ಕೊಪ್ಪಳ ಜಿಲ್ಲಾಡಳಿತ ಭವನದ ಆವರಣದಲ್ಲಿ ಡಿಸಿ ಪಿ. ಸುನೀಲಕುಮಾರ ಅವರು ರಾಷ್ಟ್ರ ಧ್ವಜಾರೋಹಣ ನೆರೆವೇರಿಸಿದರು. ಜಿಪಂ ಸಿಇಒ ಆರ್.ಎಸ್. ಪೆದ್ದಪ್ಪಯ್ಯ, ಎಡಿಸಿ ಸಿ.ಡಿ. ಗೀತಾ ಸೇರಿದಂತೆ ಜಿಲ್ಲಾಧಿಕಾರಿ ಕಚೇರಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.
Related Articles
Advertisement
ಕಿಮ್ಸ್: ನಗರದ ಮೆಡಿಕಲ್ ಕಾಲೇಜಿನಲ್ಲಿ ಗಣರಾಜ್ಯೊತ್ಸವ ಆಚರಿಸಲಾಯಿತು. ಕಿಮ್ಸ್ ನಿರ್ದೇಶಕ ಡಾ| ಡಿ.ಡಿ. ಬಂಟ್ ಧ್ವಜಾರೋಹಣ ನೆರವೇರಿಸಿದರು. ಪ್ರಾಚಾರ್ಯ ಡಾ| ವಿಜಯನಾಥ ಇಟಗಿ, ಕಿಮ್ಸ್ ಆಡಳಿತಾಧಿಕಾರಿ ಸಂತೋಷಕುಮಾರ ಎಸ್., ಪ್ರಾಧ್ಯಾಪಕ ಡಾ| ಉಮೆಶ ರಾಜೂರ, ಡಾ| ವೇಣುಗೋಪಾಲ, ಡಾ| ಗುರುರಾಜ, ಡಾ| ಮಲ್ಲಿಕಾರ್ಜುನ ಸ್ವಾಮಿ ಪಾಲ್ಗೊಂಡಿದ್ದರು.
ಜ್ಞಾನ ಬಂಧು ಶಾಲೆ: ಭಾಗ್ಯನಗರದ ಜ್ಞಾನ ಬಂಧು ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಶನಿವಾರ ಗಣರಾಜ್ಯೋತ್ಸವ ದಿನಾಚರಣೆ ಆಚರಿಸಲಾಯಿತು. ಸಂಸ್ಥೆ ಅಧ್ಯಕ್ಷ ದಾನಪ್ಪ ಕವಲೂರ, ಪ್ರಾಂಶುಪಾಲ ಕೆ. ರೋಜ್ ಮೇರಿ, ಮುಖ್ಯೋಪಾಧ್ಯಾಯಿನಿ ಜ್ಯೋತಿ ಎಸ್.ಎಸ್., ಶಾಲಾ ಶಿಕ್ಷಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ಶಿಕ್ಷಕ ಶಿವರಾಜ ಏಣಿ ಕಾರ್ಯಕ್ರಮ ನಿರೂಪಿಸಿದರು. ಮಲ್ಲಿಕಾರ್ಜುನ ವಂದಿಸಿದರು.
ಪದವಿ ಕಾಲೇಜು: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗಣರಾಜೋತ್ಸವ ದಿನ ಆಚರಿಲಾಯಿತು. ಪ್ರಾಂಶುಪಾಲ ಡಾ| ಸಿ.ಬಿ. ಚಿಲ್ಕರಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಡಾ| ಪ್ರಭುರಾಜ ನಾಯಕ, ದೈಹಿಕ ನಿದೇರ್ಶಕ ಶೋಭಾ ಕೆ.ಎಸ್., ಪ್ರಾಧ್ಯಾಪಕ ಡಾ| ಭಾಗ್ಯಜ್ಯೋತಿ, ನಂದಾ, ಸಂತೋಷಿಕುಮಾರಿ, ವ್ಯವಸ್ಥಾಪಕ ರಾಜಶೇಖರ, ಬಸವರಾಜ ಬೇವಿನಕಟ್ಟಿ ಪಾಲ್ಗೊಂಡಿದ್ದರು.
ಎಸ್‌ಎಫ್‌ಎಸ್: ಕೊಪ್ಪಳದ ಎಸ್.ಎಫ್.ಎಸ್ ಶಾಲೆಯಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು. ಶಾಲೆ ಪ್ರಾಂಶುಪಾಲ ಬಿನೊಯ್ ಕುರಾಕಲಾಯಿಲ್, ಕೃಷಿ ವಿಸ್ತರಣಾ ಕೇಂದ್ರದ ಕೀಟ ತಜ್ಞ ಡಾ| ಬದರಿಪ್ರಸಾದ, ಉದ್ಯಮಿಗಳಾದ ವಿ.ಎಸ್. ಶೆಟ್ಟರ ಭಾಗವಹಿಸಿದ್ದರು.
ಗೃಹರಕ್ಷಕ ದಳ: ನಗರದ ಜಿಲ್ಲಾ ಹೋಮ್ ಗಾರ್ಡ್ಸ್ ಸಮಾದೇಷ್ಟರ ಕಚೇರಿಯಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು. ಪತ್ರಕರ್ತ ಮಂಜುನಾಥ ಗೊಂಡಬಾಳ ಮಾತನಾಡಿದರು. ಜಿಲ್ಲಾ ಹೋಮ್ ಗಾರ್ಡ್ಸ್ ಸಮಾದೇಷ್ಟ ಎಂ. ಎ. ಹನುಮಂತರಾವ್, ಘಟಕಾಧಿಕಾರಿ ರುದ್ರಪ್ಪ ಪತ್ತಾರ, ನರಸಣ್ಣನವರ, ಅಸ್ಲಾಂ, ಸಂಜೀವ್, ಶರಣಪ್ಪ, ಗೃಹ ರಕ್ಷಕರು ಇದ್ದರು.
ಕಾಂಗ್ರೆಸ್ ಕಚೇರಿ: ನಗರದ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಖಾತೆ ಸಚಿವ ರಹೀಂಖಾನ್ ಧ್ವಜಾರೋಹಣ ನೆರವೇರಿಸಿದರು. ಶಾಸಕ ಕೆ. ರಾಘವೇಂದ್ರ ಹಿಟ್ನಾಳ, ಮಾಜಿ ಶಾಸಕ ಕೆ. ಬಸವರಾಜ ಹಿಟ್ನಾಳ, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಶಾಂತಣ್ಣ ಮುದಗಲ್, ಜಿಲ್ಲಾ ಮಹಿಳಾ ಕಾಂಗ್ರೆಸ್
ಅಧ್ಯಕ್ಷೆ ಇಂದಿರಾ ಭಾವಿಕಟ್ಟಿ, ಮುಖಂಡರಾದ ಅಕ್ಬರ್ ಪಾಶಾ, ರತ್ನಮ್ಮ ಭರಮಪ್ಪ ನಗರ, ಭರಮಪ್ಪ ನಗರ, ಕಾಟನ್ ಪಾಶಾ, ಹನುಮರಡ್ಡಿ ಹಂಗನಕಟ್ಟಿ, ರವಿ ಕುರಗೋಡ, ಗವಿಸಿದಪ್ಪ ಚಿನ್ನೂರ, ಗವಿಸಿದ್ದಪ್ಪ ಮುದಗಲ್, ಕೃಷ್ಣಾ ಇಟ್ಟಂಗಿ, ಮಂಜುನಾಥ ಜಿ. ಗೊಂಡಬಾಳ, ರಮೇಶ ಹೂಗಾರ ಇತರರು ಇದ್ದರು.