Advertisement

ಅಕ್ಷರದ ಜತೆ ಸಾಂಸ್ಕೃತಿಕ ಶಿಕ್ಷಣ: ಲಿಂಗದೇವರು ಕರೆ

12:30 AM Feb 10, 2019 | Team Udayavani |

ಉಡುಪಿ: ಅಕ್ಷರದ ಜತೆ ಸಾಂಸ್ಕೃತಿಕ ಶ್ರೀಮಂತಿಕೆ ಮೂಡಿಸುವ ಕೆಲಸ ನಡೆಯಬೇಕಾಗಿದೆ ಎಂದು ಚಲನಚಿತ್ರ ನಿರ್ದೇಶಕ ಬಿ.ಎಸ್‌.ಲಿಂಗದೇವರು ಹೇಳಿದ್ದಾರೆ.

Advertisement

ಎಂಜಿಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಶುಕ್ರವಾರ ರವೀಂದ್ರ ಮಂಟಪದಲ್ಲಿ ಆಯೋಜಿಸಿದ ಕ್ಲ್ಯಾಪ್‌ಬೋರ್ಡ್‌ ಆ್ಯಂಡ್‌ ಬಿಯಾಂಡ್‌ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಪರೀಕ್ಷೆ ಅವಲಂಬಿತ ಶಿಕ್ಷಣ ಕ್ರಮ ಬದಲಾಗಬೇಕಾಗಿದೆ ಎಂದು ಅಧ್ಯಕ್ಷತೆ ವಹಿಸಿದ್ದ ಮಣಿಪಾಲ ಅಕಾಡೆಮಿ ಕಾರ್ಯದರ್ಶಿ ಡಾ|ಎಚ್.ಶಾಂತಾರಾಮ್‌ ಹೇಳಿದರು.

ಬಹುಮಾನ ವಿತರಣೆ
ಪತ್ರಿಕೋದ್ಯಮ ವಿಭಾಗವು ಬಿಳಿಕಲ್ಲು ಪ್ರಕಾಶನ ಹಾಗೂ ಫೋಕಸ್‌ ಸ್ಟುಡಿಯೋ ಸಹಯೋಗದಲ್ಲಿ ಹಮ್ಮಿಕೊಂಡ ಎ. ಈಶ್ವರಯ್ಯ ಸ್ಮರಣಾರ್ಥ ರಾಜ್ಯ ಮಟ್ಟದ ಛಾಯಾಚಿತ್ರ ಸ್ಪರ್ಧೆ ‘ನೆಲದ ನೆಲೆ – ಗ್ರಾಮೀಣ ಸೊಬಗಿನ ನೈಜ ಚಿತ್ರಣ’ ಇದರ ಪ್ರಥಮ ಬಹುಮಾನ ಪಡೆದ ಕೊಪ್ಪಳದ ಭರತ್‌ ಕಂದಕೂರ್‌, ದ್ವಿತೀಯ ಬಹುಮಾನದ ಸುರತ್ಕಲ್‌ನ ಕಾರ್ತಿಕ್‌ ಎಂ.ಡಿ., ತೃತೀಯ ಬಹುಮಾನದ ಮಂಗಳೂರಿನ ದೀಕ್ಷಿತ್‌ ಆರ್‌. ಪೈ ಅವರಿಗೆ ಬಹುಮಾನ ವಿತರಿಸಲಾಯಿತು. ಆಯ್ದ ಛಾಯಾಚಿತ್ರಗಳ ಪ್ರದರ್ಶನ ನಡೆಯಿತು.

ಬಹುಮಾನ ವಿತರಿಸಿದ ಹಿರಿಯ ಛಾಯಾಚಿತ್ರ ಕಲಾವಿದ ಗುರುದತ್‌ ಕಾಮತ್‌ ಅವರು, ಎ. ಈಶ್ವರಯ್ಯನವರು ಅವಿಭಜಿತ ದ.ಕ. ಜಿಲ್ಲೆಯ ಮೊದಲ ಫೋಟೋಗ್ರಫಿ ಗುರು. ಅಲ್ಲಿಯವರೆಗೆ ಯಾರೂ ಇದರ ಗುಟ್ಟನ್ನು ಹೇಳಿಕೊಡುತ್ತಿರಲಿಲ್ಲ ಎಂದರು. ಛಾಯಾಚಿತ್ರಗ್ರಾಹಕ ಫೋಕಸ್‌ ರಾಘು ಶುಭ ಕೋರಿದರು.

Advertisement

ಹಣಕ್ಕಾಗಿ ಸಿನೆಮಾ ತಯಾರಿಸಬಾರದು
ನಟ, ನಿರ್ದೇಶಕ ರಾಜ್‌ ಬಿ. ಶೆಟ್ಟಿಯವರು ಮಾತನಾಡಿ, ಹಣಕ್ಕಾಗಿ ಸಿನೆಮಾ ತಯಾರಿಸಬಾರದು. ಒಳ್ಳೆಯ ಸಂದೇಶ ಕೊಡುವ ಸಿನೆಮಾ ಕೊಡುವ ಗುರಿ ಇರಬೇಕು. ಸಣ್ಣಪುಟ್ಟ ಘಟನೆಗಳನ್ನು ಆಧರಿಸಿಯೂ ಸಿನೆಮಾವನ್ನು ಹೊರತರಬಹುದು ಎಂದರು.

ಪ್ರಾಂಶುಪಾಲ ಡಾ|ಎಂ.ಜಿ.ವಿಜಯ ಉಪಸ್ಥಿತರಿದ್ದರು. ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಸುಚಿತ್‌ ಕೋಟ್ಯಾನ್‌ ಸ್ವಾಗತಿಸಿಮುಖ್ಯಸ್ಥ ಮಂಜುನಾಥ ಕಾಮತ್‌ ವಂದಿಸಿದರು. ವಿದ್ಯಾರ್ಥಿಗಳಾದ ನಿತೀಶ್‌ ನಿರ್ವಹಿಸಿ ಗೌತಮ್‌ ಪರಿಚಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next