Advertisement

ಔಷಧೀಯವಾಗಿಯೂ ಅತ್ಯಂತ ಉಪಯುಕ್ತ; ಕದಳಿ ಎಂಬ ಕಲ್ಪವೃಕ್ಷ

12:34 PM Aug 27, 2021 | Team Udayavani |

ಬಾಳೆ ಹಣ್ಣು ಸಾಂಪ್ರದಾಯಿಕ ಆಚರಣೆಗಳು, ಪೂಜೆ ಪುರಸ್ಕಾರ, ಆಹಾರ ಪದ್ಧತಿಗಳಲ್ಲಿ, ಔಷಧವಾಗಿಯೂ ಅತ್ಯಂತ ಪ್ರಮುಖವಾಗಿ ಬಳಕೆಯಾಗುವ ಹಣ್ಣು. ಕದಳೀ ಫಲ ಎಂಬ ಸಂಸ್ಕತ ಹೆಸರನ್ನು ಹೊಂದಿರುವ, ಮ್ಯುಸಾ ಪ್ಯಾರಾಡಿಸಿಯಾಕಾ ಎಂಬ ವೈಜ್ಞಾನಿಕ ಹೆಸರುಳ್ಳುಕದಳಿ ಬಾಳೆಹಣ್ಣು ಎಲ್ಲ ಕಾಲಗಳಲ್ಲೂ ದೊರೆಯುವ ಹಣ್ಣು. ಇದು ಆಹಾರ ರೂಪದಲ್ಲಿ ಮಾತ್ರವಲ್ಲದೆ ಔಷಧೀಯವಾಗಿಯೂ ಅತ್ಯಂತ ಉಪಯುಕ್ತ.

Advertisement

ಸಸಾರಜನಕ, ಸಿ ಜೀವಸತ್ವ ಹಾಗೂ ಪೊಟ್ಯಾಶಿಯಂಗಳನ್ನು ವಿಪುಲವಾಗಿ ಹೊಂದಿರುವುದರಿಂದ ಔಷಧಕ್ರಮದಲ್ಲೂ ವ್ಯಾಪಕವಾಗಿ ಬಳಕೆಯಾಗಿ ಯಶಸ್ಸುಗೊಂಡ, ಆಧುನಿಕ ವಿಜ್ಞಾನ ಸಂಶೋಧನೆಯಲ್ಲೂ ಸಾಬೀತಾದ ವಿಶೇಷ ತಳಿ.

ಎಡೆಬೆಳೆ
ಕರಾವಳಿ ಭಾಗದಲ್ಲಿ ಕದಳಿ ಬಾಳೆಕೃಷಿ ನೇಂದ್ರ, ಕ್ಯಾವಂಡಿಶ್‌ಗಳಂತೆ ಮುಖ್ಯ ಬೆಳೆಯಾಗಿ ಬೆಳೆಯದೆ ಎಡೆಬೆಳೆಯಾಗಿ ಅಥವಾ ಉಪಬೆಳೆಯಾಗಿ ರೈತರಿಗೆ ಸಹಾಯಕವಾಗಿತ್ತು. ಆದರೆ ವಾಣಿಜ್ಯ ಬೆಳೆಯಾಗಿ ಬೆಳೆಸುವ ಬಾಳೆ ತಳಿಗಳ ಮಧ್ಯೆಕದಳಿ ಬಾಳೆಯನ್ನು ಬೆಳೆಸುವವರು ವಿರಳವಾಗಿದ್ದಾರೆ.

ಕದಳಿಯಲ್ಲೂ ಉಪತಳಿ
ಕದಳಿ ಬಾಳೆಯಲ್ಲೂ ನೈಕದಳಿ,ಕಾವಿರಕದಳಿ, ಏಲಕ್ಕಿಕದಳಿ ಮೊದಲಾದ ಉಪ ತಳಿಗಳಿವೆ. ಸಂಪೂರ್ಣವಾಗಿ ಉಪಯೋಗಕಾರಿಯಾಗಿರುವ ತೆಂಗಿನ ಮರಕ್ಕೆ ಹೇಗೆಕಲ್ಪವೃಕ್ಷ ಎಂಬ ಹೆಸರಿದೆಯೋಕದಳಿ ಬಾಳೆ ಗಿಡಕ್ಕೂ ಈ ಹೆಗ್ಗಳಿಕೆ ಇದೆ. ಕದಳಿ ಬಾಳೆ ಹಣ್ಣು ಆಚರಣೆ -ಅನುಸರಣೆಯಲ್ಲಿ ಮುಖ್ಯವಾಗಿರುವಂತೆ ಸಂಪೂರ್ಣ ಕದಳಿ ಬಾಳೆ ಗಿಡವೇ ಉಪಯುಕ್ತವಾಗಿ ಗುರುತಿಸಿಕೊಂಡಿದೆ.ಕದಳಿ ಬಾಳೆ ಗಿಡಗಳಿದ್ದರೆ ರೋಗ ದೂರ ಎಂಬುದು ಹಿರಿಯರಿಂದಲೇ ಬಂದ ಮಾತು.

Advertisement

ಕದಳಿ ಬಾಳೆಗಿಡದ ನಾರು ಹಗ್ಗವಾಗಿ ಬಳಸಲು ಅತ್ಯಂತ ಸೂಕ್ತ. ಇದರ ದಂಡು (ತಿರುಳು), ಬಾಳೆ ಹೂ (ಪೂಂಬೆ) ಪದಾರ್ಥಕ್ಕೆ ಬಳಕೆಯಾಗುತ್ತದೆ. ದಂಡಿನಿಂದ ಮಾಡಿದ ಔಷಧವನ್ನು ಹೊಟ್ಟೆಯಲ್ಲಿರುವ ಕಲ್ಮಶ ಹೊರಹಾಕಲು, ಸಕ್ಕರೆ ಕಾಯಿಲೆಗೆ ಔಷಧವಾಗಿ ಬಳಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next