Advertisement
ವಿ.ವಿ.ಯ ಮಂಗಳಾ ಸಭಾಂಗಣದಲ್ಲಿ ಗುರುವಾರ ಬ್ಯಾರಿ ಅಧ್ಯಯನ ಪೀಠವನ್ನು ದಫ್ ಬಡಿದು ಉದ್ಘಾಟಿಸಿ ಅವರು ಮಾತನಾಡಿದರು.
ಶ್ರಮ ಸಂಸ್ಕೃತಿಯೊಂದಿಗೆ ಬೆಳೆದು ಬಂದಿರುವ ಬ್ಯಾರಿಗಳ ಸಂಸ್ಕೃತಿ ವಿಶಿಷ್ಟವಾದುದು. ಜನರೊಂದಿಗೆ ಬೆರೆತು ಸಮಾಜಕ್ಕೆ ತನ್ನದೇ ಆದ ಕೊಡುಗೆ ನೀಡಿದೆ ಎಂದ ಅವರು ವಿ.ವಿ.ಯಲ್ಲಿ ಈಗಾಗಲೇ ತುಳು ಅಧ್ಯಯನ ಪೀಠ, ಕೊಡವ ಅಧ್ಯಯನ ಪೀಠ, ಕೊಂಕಣಿ ಪೀಠ ಸೇರಿದಂತೆ ಹಲವು ಪೀಠಗಳಿದ್ದು ಬ್ಯಾರಿ ಅಧ್ಯಯನ ಪೀಠ ಕೂಡ ಸ್ಥಾಪನೆಗೊಂಡು ಅಧ್ಯಯನದ ಅವಕಾಶಗಳು ಹೆಚ್ಚಿವೆ. ಮುಂದಿನ ದಿನಗಳಲ್ಲಿ ಎಲ್ಲ ಪೀಠಗಳು ಒಂದೇ ಸೂರಿನಡಿ ಬಂದು, ಒಂದೇ ರೀತಿಯ ಅನುದಾನ ಸಿಗುವಂತಾಗಲು ಈ ನಿಟ್ಟಿನಲ್ಲಿ ಪ್ರಯತ್ನಿಸೋಣ ಎಂದರು. ವಿಶ್ವವಿದ್ಯಾನಿಲಯದ ಪ್ರಭಾರ ಕುಲಪತಿ ಪ್ರೊ| ಕಿಶೋರಿ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಬ್ಯಾರಿ ಸಾಹಿತ್ಯ ಅಕಾಡೆಮಿಯ ಕರಂಬಾರು ಮಹಮ್ಮದ್, ವಿಶ್ರಾಂತ ಪ್ರಾಧ್ಯಾಪಕ ಡಾ| ಸುರೇಂದ್ರ ರಾವ್, ಕರ್ನಾಟಕ ತುಳು ಮತ್ತು ಬ್ಯಾರಿ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಬಿ. ಚಂದ್ರಹಾಸ್ ರೈ, ಮಂಗಳೂರು ತಾ.ಪಂ. ಅಧ್ಯಕ್ಷ ಮಹಮ್ಮದ್ ಮೋನು, ಸಲಹಾ ಸಮಿತಿ ಸದಸ್ಯ ಇಬ್ರಾಹಿಂ ಕೋಡಿಜಾಲ್, ಕೊಣಾಜೆ ಗ್ರಾ.ಪಂ. ಅಧ್ಯಕ್ಷ ನಝರ್ ಷಾ ಪಟ್ಟೋರಿ, ಬ್ಯಾರಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಬಿ.ಎ. ಮಹಮ್ಮದ್ ಹನೀಫ್, ಪೀಠಗಳ ಸಂಯೋಜಕ ಪ್ರಭಾಕರ ನೀರುಮಾರ್ಗ ಉಪಸ್ಥಿತರಿದ್ದರು.
Related Articles
Advertisement