Advertisement
ಪ್ರತಿ ವರ್ಷ ತಾಳಿಕೋಟೆ ಪಟ್ಟಣದ ಆರಾದ್ಯ ದೈವ ಸಾಂಭ ಪ್ರಭು ಶರಣಮುತ್ಯಾರ ಜಾತ್ರೋತ್ಸವ ಅಂಗವಾಗಿ ಜರುಗುತ್ತ ಬರುತ್ತಿರುವ ಜಾನುವಾರುಗಳ ಜಾತ್ರೆಯಲ್ಲಿ ಈ ಮೊದಲು ಸುಮಾರು 5 ಸಾವಿರಕ್ಕೂ ಅಧಿಕ ಜಾನುವಾರು ಬರುತ್ತಿದ್ದವು.
ಕಮಿಟಿ ಹಾಗೂ ತಾಳಿಕೋಟೆಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ನೇತೃತ್ವದಲ್ಲಿ ಎಪಿಎಂಸಿ ಮಾರುಕಟ್ಟೆ ಸಮಿತಿ ಆವರಣದಲ್ಲಿ ನಡೆದ ಜಾನುವಾರು ಜಾತ್ರೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್ ವ್ಯವಸ್ಥೆ ಳಗೊಂಡಂತೆ ಎಲ್ಲ ರೀತಿಯಿಂದಲೂ ವ್ಯವಸ್ಥೆ ಕಲ್ಪಿಸಲಾಗಿದೆ. ಜಾತ್ರೆಯಲ್ಲಿ ಪಾಲ್ಗೊಳ್ಳುವ ಜಾನುವಾರುಗಳಲ್ಲಿ ಆಯ್ಕೆ ಮಾಡಲಾದ ಉತ್ತಮ ತಳಿ ಜಾನುವಾರುಗಳಿಗೆ ಎಪಿಎಂಸಿ ವತಿಯಿಂದ ಹಾಗೂ ಸಹಕಾರಿ ಬ್ಯಾಂಕ್ ವತಿಯಿಂದ ಬಹುಮಾನ ನೀಡಲು ನಿರ್ಧರಿಸಲಾಗಿದೆ.
Related Articles
Advertisement
ಜಾತ್ರೆಯಲ್ಲಿ ಗೆಜ್ಜಿ, ಗುಮಟೆ, ಹಗ್ಗ ಒಳಗೊಂಡಂತೆ ಇನ್ನಿತರ ಸಲಕರಣೆಗಳ ಮಾರಾಟ ಕುಂಠಿತಗೊಂಡಿದೆ. ಸಲಕರಣೆಗಳಬೆಲೆಯಲ್ಲಿಯೂ ವರ್ಷಕ್ಕಿಂತ ಈ ವರ್ಷ ಹೆಚ್ಚಳ ಕಂಡು ಬಂದಿದೆ. ಜಾನುವಾರುಗಳನ್ನು ಕೊಂಡುಕೊಳ್ಳುವವರಿಗಿಂತ ಮಾರಾಟ ಮಾಡಲು ಬಂದ ರೈತರೇ ಹೆಚ್ಚಾಗಿದ್ದು ವಹಿವಾಟು ಕುಂಠಿತಗೊಂಡಿದೆ.
ಮುರಿಗೆಪ್ಪ ಜಮ್ಮಲದಿನ್ನಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ ಜಾನುವಾರುಗಳ ಜಾತ್ರೆಯಲ್ಲಿ ಪಾಲ್ಗೊಳ್ಳುವ ಜಾನುವಾರುಗಳಿಗೆ ಪ್ರತಿ ವರ್ಷದಂತೆ ಈ ಸಲವೂ ಕೂಡಾ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ವಿದ್ಯುತ್ ಹಾಗೂ ಇನ್ನಿತ ವ್ಯವಸ್ಥೆಗಳನ್ನು ಮಾಡಿಕೊಡಲಾಗಿದೆ.
ಬಸವರಾಜ ಜುಮನಾಳ ಎಪಿಎಂಸಿ ಕಾರ್ಯದರ್ಶಿ ಮಳೆ ಇರಲಾರದ್ದಕ್ಕ ಬಾಳ ತ್ರಾಸ ಆಗೈತ್ರಿ. ದನಗೊಳಗೆ ತಿನ್ನಾಕ ಹಾಕಾಕ ಮೇವಿನ ಸಮಸ್ಯೆ ಆಗೈತ್ರಿ. ಹಿಂಗಾಗಿ ಅವಗಳ ಗೋಳ ನೋಡಾಕಾಲಾರ್ದಕ ಮಾರಾಕ ಬಂದೀನ್ರಿ. ಆದ್ರಾ ದನಗೋಳನ ಅಡ್ಡಾ ದುಡ್ಡಿಗ ಕೇಳ್ತಾರೀ ನೋಡಬೇಕು ಏನಾಗತೈತಿ.
ಶಿವಪ್ಪ ಯಂಕಂಚಿ, ರೈತ ಜಿ.ಟಿ. ಘೋರ್ಪಡೆ