Advertisement

ಮಾನವೀಯ ಮೌಲ್ಯ ಬೆಳೆಸಿಕೊಳ್ಳಿ

03:44 PM Dec 25, 2019 | Team Udayavani |

ಕೆ.ಆರ್‌.ಪೇಟೆ: ವಿದ್ಯಾರ್ಥಿಗಳು ಬಾಲ್ಯದಿಂದಲೇ ಸಂಸ್ಕಾರ, ಶಿಸ್ತು, ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಚಲನಚಿತ್ರ ನಟ ಅರವಿಂದ್‌ ರಾವ್‌ ಹೇಳಿದರು.

Advertisement

ಪಟ್ಟಣದ ಆಚಾರ್ಯ ಪ್ರೋಕ್ಯಾಂಪಸ್‌ ಶಾಲೆ ವಿದ್ಯಾರ್ಥಿಗಳಿಂದ ಮೌಡ್ಯದ ವಿರುದ್ಧ ಹಾಗೂ ಸುಸ್ಥಿರ ಸಮಾಜಕ್ಕಾಗಿ ಹಮ್ಮಿಕೊಂಡಿದ್ದ ಜಾಗೃತಿ ಜಾಥಾ ಉದ್ಘಾಟಿಸಿ ಮಾತನಾಡಿ, ಇಂದಿನ ಮಕ್ಕಳೇ ನಾಳಿನ ಪ್ರಜೆಗಳಾದ್ದರಿಂದ ಬಾಲ್ಯದಿಂದಲೇ ಶಿಸ್ತು, ಸೇವಾಗುಣ ಹಾಗೂ ಮಾನವೀಯ ಮೌಲ್ಯ ಬೆಳೆಸಿಕೊಂಡು ಸಮಾಜಮುಖೀ ಹೆಜ್ಜೆ ಹಾಕಬೇಕು ಎಂದರು.

ಪರಿಸರ ಕಾಪಾಡಿ: ಪರಿಸರದ ಮೇಲೆ ನಿರಂತರ ದೌರ್ಜನ್ಯದಿಂದಾಗಿ ಜಾಗತಿಕ ತಾಪಮಾನದಲ್ಲಿ ವ್ಯತ್ಯಯ ಉಂಟಾಗಿ ಪ್ರಕೃತಿ ವಿಕೋಪಗಳು ಸಂಭವಿಸುತ್ತಿವೆ. ಆದ್ದರಿಂದ ಗಿಡಮರ ನೆಟ್ಟು ಬೆಳೆಸುವ ಕಾಳಜಿ ವಿದ್ಯಾರ್ಥಿಗಳು ಬೆಳೆಸಿಕೊಳ್ಳ  ಬೇಕು. ಪರಿಸರಕ್ಕೆ ಹಾನಿಕಾರಕ ಪ್ಲಾಸ್ಟಿಕ್‌ ಉತ್ಪನ್ನಗಳು ತ್ಯಜಿಸಿ ಬಟ್ಟೆ ಬ್ಯಾಗ್‌ಗಳನ್ನೇ ಬಳಸಬೇಕು ಎಂದು ತಿಳಿಸಿದರು. ಪುರಸಭಾ ಮಾಜಿ ಸದಸ್ಯ ಕೆ.ಆರ್‌.  ನೀಲಕಂಠ ಮಾತನಾಡಿ, ಜಗತ್ತಿನಲ್ಲಿ ಮಾನವ ಧರ್ಮಕ್ಕಿಂತ ಮಿಗಿಲಾದ ಧರ್ಮ ಯಾವುದೂ ಇಲ್ಲ. ನಾವು ಮಾನವ ರಾಗಿ ಪರಸ್ಪರ ಕಷ್ಟಸುಖ ಹಂಚಿಕೊಂಡು ಕೂಡಿ ಬಾಳಬೇಕು. ಸಮಾಜದಲ್ಲಿ ಶೋಷಿತರು ಹಾಗೂ ತುಳಿತ ಕ್ಕೊಳಗಾದವರಿಗೆ ಕೈಲಾದ ಸಹಾಯ ಮಾಡಬೇಕು ಎಂದರು. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ವಿದ್ಯಾರ್ಥಿ ಗಳು ವಿವಿಧ ಘೋಷಣೆಗಳಿರುವ ಭಿತ್ತಿ ಪತ್ರ ಹಿಡಿದು ಘೋಷಣೆ ಕೂಗಿ ಜಾಗೃತಿ ಜಾಥಾ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next