Advertisement

ಮಾನವೀಯ ಗುಣ ಬೆಳೆಸಿಕೊಳ್ಳಿ

03:46 PM Jul 15, 2019 | Suhan S |

ಗುಂಡ್ಲುಪೇಟೆ: ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ಪದವೀಧರರಾಗುವುದರೊಂದಿಗೆ ಮಾನವೀಯ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಚಾಮರಾಜ ನಗರದ ರಾಮಚಂದ್ರ ಶಿಕ್ಷಕರ ತರಬೇತಿ ಕಾಲೇಜಿನ ಪ್ರಾಚಾರ್ಯರಾದ ಸೋಮಶೇಖರ ಬಿಸಲ್ವಾಡಿ ಹೇಳಿದರು.

Advertisement

ಪಟ್ಟಣದ ಜೆಎಸ್‌ಎಸ್‌ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿ ತರಗತಿ ವಿದ್ಯಾರ್ಥಿಗಳನ್ನು ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇಂದು ಉನ್ನತ ಶಿಕ್ಷಣವೆನ್ನುವುದು ಪದವಿಧರರನ್ನಾಗಿ ಮಾಡುವ ಪ್ರತ್ಯಕ್ಷ ಲಾಭೋದ್ದೇಶಗಳಿಗಿಂತ, ಅವರಲ್ಲಿ ಮಾನವೀ ಯತೆಯ ಗುಣ ಮತ್ತು ನಡವಳಿಕೆಗಳನ್ನು ಬೆಳೆ ಯುವಂತೆ ಮಾಡುವ ಪರೋಕ್ಷ ಲಾಭಗಳಿಗೂ ಆದ್ಯತೆ ನೀಡಬೇಕಿದೆ ಎಂದರು.

ಈ ಹಂತದ ಓದು ಎನ್ನುವುದು ವಿದ್ಯಾರ್ಥಿಗಳು ತಮ್ಮ ಮೇಲೆ ತಾವು ನಿಯಂತ್ರಣವನ್ನು ಸಾಧಿಸಿಕೊಂಡು ತಂದೆ ತಾಯಿಗಳ ಕನಸುಗಳನ್ನು ಸಾಕಾರಗೊಳಿ ಸುವಂತೆ ಸಾಗಬೇಕಿದೆ. ಇಲ್ಲಿ ಶ್ರಮದ ಬೆಲೆ ಅರಿಯುವುದು ಅತ್ಯಗತ್ಯ ಎಂದು ತಿಳಿಸಿದರು.

ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಿ.ಜಿ.ಮಲ್ಲಿಕಾರ್ಜುನ ಮಾತನಾಡಿ, ಕೃಷಿ ಕುಟುಂಬ ಗಳಿಂದ ಬಂದಿರುವ ನಮ್ಮ ವಿದ್ಯಾರ್ಥಿಗಳು ಇಂದು ಓದು ಎನ್ನುವುದು ಕೃಷಿ ವ್ಯವಸ್ಥೆಗೆ ಪೂರಕವಾದ ಕೌಶಲ ಗಳನ್ನು ಕಲಿತುಕೊಂಡು ಜೀವನ ನಿರ್ವಹಿಸುವ ವಿಭಿನ್ನ ಮಾರ್ಗಗಳನ್ನು ಕಲಿಯುವಂತಾಗಬೇಕಿದೆ ಎಂದು ಸಲಹೆ ನೀಡಿದರು. ಕಾಲೇಜಿನ ಪ್ರಾಂಶುಪಾಲ ಡಾ.ಎನ್‌.ಮಹದೇ ವಸ್ವಾಮಿ ಮಾತನಾಡಿ, ಸಾಂಪ್ರದಾಯಿಕ ಶಿಕ್ಷಣದ ಜೊತೆ ಜೊತೆಗೆ ತಾಂತ್ರಿಕ ಮತ್ತು ಸಾಮಾನ್ಯ ಜ್ಞಾನಗಳಿಕೆಗೂ ವಿದ್ಯಾರ್ಥಿಗಳು ಹೆಚ್ಚಿನ ಆದ್ಯತೆ ನೀಡಬೇಕಿದೆ. ಇದು ವಿದ್ಯಾರ್ಥಿಗಳ ಜ್ಞಾನಮಟ್ಟವನ್ನು ಹೆಚ್ಚಿಸುವುದರೊಂದಿಗೆ ಮುಂದಿನ ಭವಿಷ್ಯಕ್ಕೆ ಸಹಾಯಕವಾಗಲಿದೆ ಎಂದು ಅಭಿಪ್ರಾಯಪಟ್ಟರು.

Advertisement

ಪರಿಸರ ತಜ್ಞ ಹಾಗೂ ಕಾಲೇಜಿನ ಹಿರಿಯ ವಿದ್ಯಾರ್ಥಿ ರವಿರಾಜ್‌ ಮಾತನಾಡಿ, ವಿದ್ಯೆಯೆನ್ನುವುದು ನಮ್ಮಲ್ಲಿ ಕೊಂಡು ಕೊಳ್ಳುವ ಪ್ರವೃತ್ತಿಗಳನ್ನು ಬೆಳೆಸುವಂತಾಗ ಬಾರದು, ಬದಲಿಗೆ ಸೃಜನಶೀಲ ಕೌಶಲಗಳ ಬೆಳವಣಿಗೆಗೆ ಪ್ರೇರಣೆ ನೀಡುವಂತಾಗಬೇಕೆಂದು ತಿಳಿಸಿದರು.

ವಿದ್ಯಾರ್ಥಿನಿಯರಾದ ಸಹನ ಮತ್ತು ತಂಡದವರು ಪ್ರಾರ್ಥನೆ ನಡೆಸಿಕೊಟ್ಟರು. ಇಂಗ್ಲಿಷ್‌ ವಿಭಾಗದ ಮುಖ್ಯಸ್ಥ ಪ್ರೊ.ಹೊನ್ನೇಗೌಡ ಪ್ರೊ.ಪರಶಿವ, ಕನ್ನಡ ವಿಭಾಗದ ಮುಖ್ಯಸ್ಥೆ ಜಯಶೀಲಾ, ಐಕ್ಯುಎಸ್‌ಸಿ ಸಂಚಾಲಕ ಪ್ರೊ. ಮರಿಸ್ವಾಮಿ, ವಿವಿಧ ವಿಭಾಗಗಳ ಮುಖ್ಯಸ್ಥರು, ಅಧ್ಯಾಪಕರು, ಅಧ್ಯಾಪಕೇತರರು ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷ ವೀ.ನಾ. ಚಿದಾನಂದಸ್ವಾಮಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next