Advertisement
ಇತ್ತೀಚೆಗೆ ಈ ಪ್ರಖ್ಯಾತ ಹೂಗಳ ಜಗತ್ತಿಗೆ ಭೇಟಿ ನೀಡಿದಾಗ ಅದು ಮುಗಿಯಲು ಕೆಲವೇ ದಿನಗಳು ಉಳಿದಿದ್ದವು. ಆದರೆ, ದೈನಂದಿನ ವ್ಯವಸ್ಥೆ-ನಿರ್ವಹಣೆ ಆರಂಭಕ್ಕಿರುವಂತೆಯೇ ಇತ್ತು.
ಕಣ್ಣು ಹಾಯಿಸಿದ ಕಡೆಗಳಿಗೆ ನಮಗೆ ಕಾಣಸಿಗುವುದು ಲಕ್ಷ ಲಕ್ಷ ಬಗೆಬಗೆಯ ಹೂಗಳು ಕಣ್ತುಂಬುವ ಹಸಿರು ಸೌಂದರ್ಯ, ವಿವಿಧ ರೀತಿಯ ಉದ್ಯಾನಗಳ ಸಾಲು.
Related Articles
Advertisement
ಹಾಲೆಂಡ್‌ನ ಪುಟಾಣಿ ದೇಶವಾದರೂ ಇಲ್ಲಿರುವ ಆಕರ್ಷಣೆಗಳು ಹತ್ತುಹಲವು. ಅವುಗಳಲ್ಲಿ ಬಹು ಪ್ರಸಿದ್ಧವಾದುದು ಹೂಗಳ ಉತ್ಸವ. ಇದು ನೀಡುವ ಅನುಭವಗಳು ಒಂದೆರಡಲ್ಲ. ಕಣ್ಮನ ಸೆಳೆಯುವ ಥರಾವರಿ ಬಣ್ಣಗಳ ಹೂಗಳ ಜೊತೆ ಜೊತೆಗೆ ಮನಸ್ಸು ಮುದಗೊಳಿಸುವ ಸಂಗೀತಸುಧೆ ನಿಮ್ಮ ಕಿವಿಗಳಿಗೆ ತಲುಪುತ್ತಿರುತ್ತವೆ.
ಟುಲಿಪ್ ಹೂಗಳದ್ದೇ ಮೇಲುಗೈಈಗ ವಿಶ್ವವಿಖ್ಯಾತವಾಗಿರುವ ಕ್ಯೂಕೆನ್ ಹಾಫ್ ಸುಂದರ ಭೂರಮೆ ರೂಪುಗೊಳ್ಳಲು ಹಿಡಿದಿದ್ದು ಬರೋಬರಿ ಒಂದೂವರೆ ಶತಮಾನಕ್ಕೂ ಅಧಿಕ. 1857ರಲ್ಲಿ ಜೋಚರ್ ಎಂಬಾತ ಇಲ್ಲಿ ಸಿದ್ಧಪಡಿಸಿದ್ದು ಇಂಗ್ಲಿಷ್ ಭೂವಿನ್ಯಾಸದ ಉದ್ಯಾನ. ಆರಂಭದಲ್ಲಿ ಬೇರೆ ಬೇರೆ ಹೂಗಳ ಜೊತೆಗೆ ಟುಲಿಫ್ ಬಲ್ಬ್ ಹೂಗಳೂ ಇರುತ್ತಿದ್ದವು. ಕಳೆದ ಆರೇಳು ದಶಕಗಳಿಂದ ಇಲ್ಲಿ ಟುಲಿಪ್‌ಗ್ಳದ್ದೇ ಮೇಲುಗೈ. ಪ್ರತಿ ಋತುವಿನಲ್ಲೂ ವಿನ್ಯಾಸ ಬದಲಿಸುವ ರಿವಾಜು ಇರುವ ಕ್ಯೂಕೆನ್ ಹಾಫ್ ಉದ್ಯಾನದಲ್ಲಿ 40ಕ್ಕೂ ಹೆಚ್ಚು ಬೆಳೆಗಾರರು ಟುಲಿಪ್‌ಗ್ಳನ್ನು ಬೆಳೆಯಲು ಭೂಮಿಯನ್ನು ಕಾದಿರಿಸುತ್ತಾರೆ! ವರ್ಷವರ್ಷವೂ ಹೊಸ ನೋಟಗಳನ್ನು ಸಿದ್ಧಗೊಳಿಸುವುದೇ ಇದರ ಹಿಂದಿನ ರಹಸ್ಯ. ಹಾಲೆಂಡ್‌ಗೆ ಜಾಗತಿಕ ಮಟ್ಟದಲ್ಲಿ ಹೆಸರು ತಂದುಕೊಟ್ಟಿರುವ ಪುಷ್ಪ ಟುಲಿಪ್. ಅದರ ಈ ದೇಶಕ್ಕೆ ಬಂದ ಚಾರಿತ್ರಿಕ ಹಿನ್ನೆಲೆಯನ್ನು ನಿರೂಪಿಸುವ ಉದ್ಯಾನವೂ ಇಲ್ಲಿತ್ತು. ವಿಶೇಷ ಅನುಭೂತಿಯನ್ನು ತಂದುಕೊಡುವ ಹೂ ಉತ್ಸವ ಸ್ಫೂರ್ತಿ ತುಂಬುವ ಅನೇಕ ಉದ್ಯಾನಗಳನ್ನು ವೀಕ್ಷಕರಿಗೆ ಕೊಡುವ ಉತ್ಸವದ ಉದ್ದೇಶ. ಇದರೊಂದಿಗೆ ಉತ್ಸವದಲ್ಲಿ ಮಕ್ಕಳಿಗಾಗಿ ಆಸಕ್ತಿ ತರುವ ಚಟುವಟಿಕೆ, ಹೂಮಾರುಕಟ್ಟೆ , ತಿಂಡಿತಿನಿಸು, ಸಂಗೀತ ಕಾರ್ಯಕ್ರಮ ಇವೆಲ್ಲ ಇದ್ದರೂ ಕಾಲಮಿತಿಯಿಂದ ಇದನ್ನೆಲ್ಲ ತಪ್ಪಿಸಿಕೊಳ್ಳಬೇಕಾಯಿತು. ಇದರಲ್ಲಿ ಪುಷ್ಪಗಳ ಪಥಸಂಚಲನವೂ ಇತ್ತು. ಹಾಲೆಂಡ್‌ನ ಹೆಸರಾಂತ ಕಲಾವಿದರು ಕ್ಯೂಕೆನ್ ಹಾಫ್ ಪ್ರತಿವರ್ಷ ರೂಪಿಸುವುದು ರೂಢಿ. ಇಲ್ಲಿ ಹೀಗಾಗಿ ಚಿತ್ರಕಲಾ ಪುಷೊ³àದ್ಯಾನ. ಶಿಲ್ಪ ಹೂ ಅಂಗಳ, ಮರದ ಬೂಡ್ಸ್‌ಗಳಲ್ಲಿ ಹೂ ಜೋಡಿಸುವುದು, ಇವೆಲ್ಲದರ ಜೊತೆಗೆ ಪುಷ್ಪ ಅಲಂಕೃತ ದೋಣಿಗಳಲ್ಲಿ ಸಾಗಿ ಟುಲಿಪ್ ವೈಭವ ವೀಕ್ಷಣೆ ವೀಕ್ಷಕರಿಗೆ ವಿಶಿಷ್ಟ ಅನುಭವ. ವರ್ಷವರ್ಷವೂ ಹೊಸ ವಿನ್ಯಾಸ
ವರ್ಷಂಪ್ರತಿ ಇಡೀ ಉತ್ಸವದ ವಿನ್ಯಾಸ ಬದಲಾಗುತ್ತದೆ. ಈ ವರ್ಷ “ಡಚ್ ವಿನ್ಯಾಸ’ವಿತ್ತು. ಡಚ್ ಜನರ ಹೂಬೆಳೆಯ ಆಸಕ್ತಿ-ಪ್ರೇರಣೆಗಳಿಗೆ ಅನುಸಾರವಾಗಿ ನಡೆದಿದ್ದು ಎಲ್ಲರ ಆಕರ್ಷಣೆಯ ಕೇಂದ್ರಬಿಂದು. ಕ್ಯೂಕೆನ್ ಹಾಫ್ನ ಮುಖ್ಯಗುರಿ ಹಾಲೆಂಡ್‌ನ ಹೂ ಉದ್ಯಮದ ಇಂದು-ಮುಂದುಗಳ ಪ್ರಸ್ತುತಿ. ಇದು ಅಂತಾರಾಷ್ಟ್ರೀಯ ಹಾಗೂ ಸ್ವತಂತ್ರ ಚಟುವಟಿಕೆಯಾಗಿರಬೇಕೆಂಬುದು ಇನ್ನೊಂದು ಆಶಯ. ವಿದ್ಯುತ್ ಬಲ್ಬ್ಗಳನ್ನೇ ಹೋಲುವ ಟುಲಿಪ್‌ಗ್ಳ ಭವಿಷ್ಯದ ಹಾದಿಯನ್ನು ಸದೃಢವಾಗಿ ಮುನ್ನಡೆಸುವುದಕ್ಕೆ ಪ್ರವಾಸಿ ಮತ್ತು ವ್ಯವಹಾರ ಎರಡನ್ನು ಬೆಸುಗೆ ಮಾಡಿಕೊಂಡಿರುವುದು ಪ್ರತಿ ಹಂತದಲ್ಲೂ ಇದೆ. ನೀರೆತ್ತಲು, ಗೋಧಿಹಿಟ್ಟು ಮಾಡಲು ಗಾಳಿಯಂತ್ರಗಳನ್ನು ನೂರಾರು ವರ್ಷಗಳಿಂದ ಉಪಯೋಗಿಸುತ್ತಿರುವ ದೇಶ ಹಾಲೆಂಡ್. ಗಾಳಿಯಂತ್ರ ಈ ದೇಶದ ಪ್ರಮುಖ ಸಂಕೇತ. ಇದನ್ನೇ ಮರದಿಂದ ನಿರ್ಮಿಸಿ ಉತ್ಸವದಲ್ಲಿ ಸ್ಥಾಪಿಸಿರುವುದು ಬಹುಮುಖ್ಯ ಆಕರ್ಷಣೆ. ಈ ಉತ್ಸವ ಪ್ರಮುಖವಾಗಿ ಪ್ರವಾಸಿಗಳನ್ನು ಸೆಳೆಯಲು ಏರ್ಪಡಿಸುವಂತೆ ಕಂಡರೂ ವ್ಯಾಪಾರ-ವಹಿವಾಟು, ವಲಯಗಳಿಗೆ ಇಲ್ಲಿದೆ ಒತ್ತು. ಹತ್ತು ಲಕ್ಷ ಪ್ರವಾಸಿಗರ ಭೇಟಿ ನೀಡುವ ಕ್ಯೂಕೆನ್ ಹಾಫ್ಗೆ ನೂರಕ್ಕೂ ಹೆಚ್ಚು ದೇಶಗಳ ಮಂದಿ ಬರುವರು. ಚಿತ್ರ, ಬರಹ: ಎನ್. ಜಗನ್ನಾಥ ಪ್ರಕಾಶ್