Advertisement

Cuba ನಗದು ಕೊರತೆ: ಎಟಿಎಂ ಮುಂದೆ ಜನರ ಕ್ಯೂ

01:53 AM Apr 28, 2024 | Team Udayavani |

ಹವಾನಾ: ಕ್ಯೂಬಾದಲ್ಲಿ ಭಾರೀ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಿದ್ದು, ನಗದಿನ ಕೊರತೆಯು ಜನರಲ್ಲಿ ಆಕ್ರೋಶಕ್ಕೆ ಕಾರಣವಾಗುತ್ತಿದೆ. ವಿಶೇಷವಾಗಿ ಬ್ಯಾಂಕ್‌ಗಳಲ್ಲಿ ಹಣ ಖಾಲಿಯಾಗಿದ್ದು, ಎಟಿಎಂಗಳ ಮುಂದೆ ಜನರ ಉದ್ದನೆಯ ಸಾಲು ಹವಾನಾ ಸೇರಿದಂತೆ ಬಹುತೇಕ ನಗರಗಳಲ್ಲಿ ಕಂಡು ಬರುತ್ತಿದೆ. ಇಷ್ಟಾಗಿಯೂ ಹಣ ದೊರೆಯುವ ಗ್ಯಾರಂಟಿ ಜನರಲ್ಲಿ ಉಳಿದಿಲ್ಲ.

Advertisement

ಸುಲಭವಾಗಿ ಹಣವನ್ನು ಡ್ರಾ ಮಾಡಲು ಸಾಧ್ಯವಾಗದ ಕಾರಣ ಜನರಿಗೆ ನಿತ್ಯದ ಅಗತ್ಯ ವಸ್ತುಗಳನ್ನು ಖರೀದಿಸುವುದು ದುಸ್ತರವಾಗುತ್ತಿದೆ. ನಗದು ಸಿಗದೇ ಜನ ಒಂದು ಊರಿನ ಎಟಿಎಂನಿಂದ ಮತ್ತೂಂದು ಊರಿಗೆ ಅಲೆದಾಡಬೇಕಾದ ಸ್ಥಿತಿ ಎದುರಾಗಿದೆ.

ವಿತ್ತೀಯ ಕೊರತೆ, ನಗದುರಹಿತ ವ್ಯವಹಾರ, ಉದ್ಯಮಿಗಳು, ಸಣ್ಣ ಮತ್ತು ಮಧ್ಯಮ ಪ್ಯಾಪಾರಸ್ಥರು ಬ್ಯಾಂಕ್‌ಗಳ ಜತೆ ವ್ಯವಹಾರ ಮಾಡದಿರುವುದು ಮುಂತಾದವುಗಳೇ ಹಣದ ಕೊರತೆಗೆ ಕಾರಣ ಎಂದು ಹೇಳಲಾಗುತ್ತಿದೆ. ಕ್ಯೂಬಾದಲ್ಲಿ ಹಣದುಬ್ಬರ ಎಷ್ಟು ಏರಿಕೆಯಾಗಿದೆ ಎಂದರೆ 2019ರಲ್ಲಿ ಒಂದು ಬಾಕ್ಸ್‌ ಮೊಟ್ಟೆಗೆ 300 ಕ್ಯೂಬನ್‌ ಪೆಸೋ(1039 ರೂ.) ಆಗಿದ್ದರೆ, ಈಗ ಇದರ ದರ 3,100 ಕ್ಯೂಬನ್‌ ಪೆಸೋ(10,746 ರೂ.)ಗೆ ತಲುಪಿದೆ.

Advertisement

Udayavani is now on Telegram. Click here to join our channel and stay updated with the latest news.

Next