Advertisement
ನಗರದಲ್ಲಿ ಮಾತಾನಾಡಿದ ಅವರು, ಸಿದ್ದರಾಮಯ್ಯ ಅವರ ಕಾರ್ಯಕ್ರಮಕ್ಕೆ ರಾಷ್ಟ್ರೀಯ ನಾಯಕರೆಲ್ಲಾ ಬಂದಿದ್ದಾರೆ. ಸಂಕಷ್ಟದಲ್ಲಿದ್ದಾಗ ಹಾಡಿ-ಹೊಗಳುವುದು ಮಾನವೀಯತೆ ಇರುವವರಿಗೆ ಶೋಭೆ ತರುವುದಲ್ಲ. ಬಿಜೆಪಿ ಸರ್ಕಾರವೂ 3 ವರ್ಷದ ತುಂಬಿದ್ದಕ್ಕೆ ಜನೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಕಾರ್ಯಕರ್ತ ಪ್ರವೀಣ್ ಸಾವನ್ನಪ್ಪಿದ್ದಕ್ಕೆ ಎಲ್ಲರೂ ಒಮ್ಮತದ ನಿರ್ಧಾರ ಮಾಡಿ ರದ್ದು ಮಾಡಿದ್ವಿ. ಅಂದು ನಮಗೆ ಪ್ರಶ್ನಿಸಿದರು, ಇಂದು ಸೂತಕದ ಮನೆಯಲ್ಲಿ ಸಂಭ್ರಮ ಅಂತ ಕೆಲವರಿಗಾದರೂ ಅನ್ನಿಸಬೇಕಿತ್ತು ಎಂದು ವಾಗ್ದಾಳಿ ನಡೆಸಿದರು.
Related Articles
Advertisement
ಪಿ.ಎಫ್.ಐ. ಎಸ್.ಡಿ.ಪಿ.ಐನ ಬಿಜೆಪಿ ಬೆಳೆಸಿದರೆ, ನೀವ್ಯಾಕೆ 2500 ಜನರ ಕೇಸ್ ಹಿಂಪಡೆದ್ರಿ . ನಿಮಗೂ ಪಿ.ಎಫ್.ಐಗೂ ಇರುವ ನೆಂಟಸ್ಥನ ಏನು, ಕೇಸ್ ಏಕೆ ವಾಪಸ್ ಪಡೆದ್ದೀರಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯರಿಗೆ ಸಿ.ಟಿ.ರವಿ ಪ್ರಶ್ನಿಸಿದರು.
ಪಿ.ಎಫ್.ಐ. ಕೇಸ್ ಹಿಂಪಡೆಯಿರಿ ಎಂದು ನಾವೇನು ನಿಮಗೆ ಅರ್ಜಿ ಕೊಟ್ಟಿರಲಿಲ್ಲ.ಬಜರಂಗದಳ, ರೈತಸಂಘ, ಕನ್ನಡಪರ ಸಂಘಟನೆಗಳ ಮೇಲಿನ ಕೇಸ್ ಹಿಂಪಡೆಯಿರಿ ಎಂದು ಅರ್ಜಿ ಹಾಕಿದ್ದು. ಪಿ.ಎಫ್.ಐ. ಕ್ರಿಮಿನಲ್ ಎಂದು ಸಿಎಂ ಆದ ನಿಮಗೆ ಗೊತ್ತಿರಲಿಲ್ಲವಾ…? ಹೇಳಿ, ನಿಮ್ಮ ಹಾಗೂ ಪಿ.ಎಫ್.ಐ ಹಾಗೂ ಎಸ್.ಡಿ.ಪಿ.ಐ ಎನ್ ನೆಂಟಸ್ತನ ಅಂತ ಜಗತ್ತಿಗೆ ಗೊತ್ತಾಗುತ್ತದೆ ಎಂದು ಗುಡುಗಿದರು.
ಪಿ.ಎಫ್.ಐ. ಟಾರ್ಗೆಟ್ ಮಾಡುತ್ತಾ ಇರುವುದು ಬಜರಂಗದಳ, ಆರ್.ಎಸ್.ಎಸ್. ರಾಷ್ಟ್ರೀಯವಾದಿ ಸಂಘಟನೆಗಳನ್ನು. ಇಬ್ಬರ ಉದ್ದೇಶ ಆರ್.ಎಸ್.ಎಸ್. ಟಾರ್ಗೆಟ್ ಮಾಡುವುದು, ನೆಂಟಸ್ತನ ಇದ್ರೆ ನಿಮ್ಮಿಬ್ಬರಿಗೆ ಇರುವುದು. ರಾಜ್ಯದಲ್ಲಿ ಕೋಮು ಗಲಭೆ ಹೆಚ್ಚಾಗಿದ್ರೆ, ವೈಚಾರಿಕ ಕಾರಣಕ್ಕೆ ಹತ್ಯೆಯಾಗಿದ್ರೆ ಸಿದ್ದರಾಮಯ್ಯ ಸರ್ಕಾರ ಕಾರಣ ಎಂದು ವಾಗ್ದಾಳಿ ನಡೆಸಿದರು.