Advertisement
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಬಂದ ಬಳಿಕ 67 ವರ್ಷಗಳಲ್ಲಿ 2014ರವರೆಗೆ 65 ವಿಮಾನನಿಲ್ದಾಣಗಳಿದ್ದವು. ಕಳೆದ 7 ವರ್ಷದಲ್ಲಿ ಹೊಸ 35 ಹೆಚ್ಚುವರಿ ವಿಮಾನನಿಲ್ದಾಣಗಳು ಸೇರಿವೆ. ಸರಾಸರಿ ಲೆಕ್ಕ ಹಾಕಿದರೆ ಕೇವಲ 7 ವರ್ಷಗಳಲ್ಲಿ ಬಿಜೆಪಿ ನರೇಂದ್ರ ಮೋದಿ ಅವರ ಆಡಳಿತಾವಧಿಯಲ್ಲಿ ಶೇ 50ಕ್ಕೂ ಹೆಚ್ಚು ವಿಮಾನನಿಲ್ದಾಣಗಳನ್ನು ಸ್ಥಾಪನೆ ಮಾಡಲಾಗಿದೆ ಎಂದು ವಿವರ ನೀಡಿದರು.
Related Articles
Advertisement
ಕಾಂಗ್ರೆಸ್ ಆಡಳಿತಾವಧಿಯಲ್ಲಿ ಸಾಲುಸಾಲು ಭ್ರಷ್ಟಾಚಾರದ ಕೀರ್ತಿ ಅದೇ ಪಕ್ಷಕ್ಕೆ ಸಲ್ಲುತ್ತದೆ. ಎ ಯಿಂದ ಝಡ್ ವರೆಗೆ ಭ್ರಷ್ಟಾಚಾರ ನಡೆದಿದೆ. ಅವರು ಜಾಣಮರೆವು ಪ್ರದರ್ಶಿಸಿದ್ದಾರೆ. ಕುಟುಂಬ ರಾಜಕಾರಣ ಬೆಳೆಸಿ ಪದಾಧಿಕಾರಿಗಳನ್ನು ತುಳಿದ ಕೀರ್ತಿಯೂ ಅವರಿಗೇ ಸೇರುತ್ತದೆ. ಜಾತ್ಯತೀತತೆ ಪರಿಭಾಷೆಗೆ ಓಲೈಕೆಯನ್ನು ಸೇರಿಸಿದ್ದೂ ಕಾಂಗ್ರೆಸ್ ಪಕ್ಷವೇ ಆಗಿದೆ. ತುಷ್ಟೀಕರಣ ರಾಜಕೀಯ ನೀತಿ ಸ್ಥಾಪನೆ ಮತ್ತು ವಿಸ್ತರಣೆಯೂ ಅವರ ಕಾಲಘಟ್ಟದಲ್ಲೇ ಆಗಿದೆ ಎಂದು ತಿಳಿಸಿದರು.
ಸ್ವಜನಪಕ್ಷಪಾತ, ಭ್ರಷ್ಟಾಚಾರ, ಜಾತೀಯತೆ, ತುಷ್ಟೀಕರಣ ರಾಜಕೀಯ, ಭಯೋತ್ಪಾದಕರ ಜೊತೆ ರಾಜಕೀಯ ಮಾಡಬಹುದು ಎಂಬುದನ್ನೂ ಕಾಂಗ್ರೆಸ್ ತೋರಿಸಿಕೊಟ್ಟಿದೆ. ಭಯೋತ್ಪಾದಕರು ಪ್ರಧಾನಿಯವರ ಜೊತೆ ಕೈಕುಲುಕುವ, ಫೋಟೋ ಶೂಟ್ ಮಾಡುವ ಸ್ಥಿತಿ ಬಂದಿತ್ತು ಎಂದು ತಿಳಿಸಿದರು.
ಹಲಾಲ್‌ಗೆ ಸರ್ಟಿಫಿಕೇಟ್ ಕೊಟ್ಟವರು ಯಾರು : ಸಿ.ಟಿ. ರವಿ. :
ಬೆಂಗಳೂರು: ಹಲಾಲ್ ಯಾರು, ಎಲ್ಲಿ ಪ್ರಾರಂಭ ಮಾಡಿದರು? ಅದರ ಉದ್ದೇಶ ಏನು ಎಂಬ ಚರ್ಚೆ ಆಗಲಿ, ಯಾವುದಾದರೂ ಉತ್ಪನ್ನಕ್ಕೆ ಐಎಸ್‌ಐ ಸರ್ಟಿಫಿಕೇಟ್ ಕೊಡುವುದಿದೆ. ಆದರೆ, ಹಲಾಲ್‌ಗೆ ಯಾರು ಸಟಿಫಿಕೇಟ್ ಕೊಡುತ್ತಾರೆ ಎಂದು ಸಿ.ಟಿ.ರವಿ ಪ್ರಶ್ನಿಸಿದ್ದಾರೆ.
ಜಾತ್ಯತೀತ ಎನಿಸಲು ಹಲಾಲ್ ಸರ್ಟಿಫಿಕೇಟ್ ಅನಿವಾರ್ಯವೇ ಎಂಬ ಪ್ರಶ್ನೆಗೂ ಸಮಾಜದಿಂದ ಉತ್ತರ ಬೇಕಿದೆ. ಹಲಾಲ್ ಕುರಿತ ಪ್ರಶ್ನೆಗಳಿಗೆ ಪ್ರಗತಿಪರರು, ಬುದ್ಧಿಜೀವಿಗಳು, ಮುಸ್ಲಿಂ ವಿದ್ವಾಂಸರು ಇದರ ಮೇಲೆ ಬೆಳಕು ಚೆಲ್ಲಬೇಕಿದೆ ಎಂದರು.
ಜಿಹಾದ್ ಹಲವು ಮುಖಗಳಲ್ಲಿ ನಡೆಯುತ್ತದೆ. ಅದರ ವಿರುದ್ಧ ಹೋರಾಟವೂ ಅನಿವಾರ್ಯ. ಹಲಾಲ್ ಮತೀಯ ಉದ್ದೇಶದ್ದು ಅಲ್ಲದಿದ್ದರೆ ಎಲ್ಲರೂ ಅದನ್ನು ಸ್ವೀಕರಿಸೋಣ. ಹಲಾಲ್ ಮತ್ತು ಜಾತ್ಯತೀತತೆ ನಡುವಿನದು ಎಣ್ಣೆ, ಸೀಗೆಕಾಯಿ ಸಂಬಂಧವಾಗಿದ್ದು, ಇವೆರಡು ಒಟ್ಟಿಗೆ ಇರಲು ಅಸಾಧ್ಯ ಎಂದು ಅವರು ವಿಶ್ಲೇಷಿಸಿದರು.
ದೇಶದಲ್ಲಿ ಸಂವಿಧಾನ ಇರಬೇಕೇ ಅಥವಾ ಶರೀಯತ್ ಇರಬೇಕೇ? ಎಂದು ಪ್ರಶ್ನಿಸಿದರು. ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಹೇಳಿಕೆ ಜೊತೆ ಯೋಜನೆಗಳನ್ನು ಜಾರಿಗೊಳಿಸಿದ ಮೋದಿ ಯಾರಿಗೂ ಅಭಿವೃದ್ಧಿ ಯೋಜನೆಯಲ್ಲಿ ಧೋಖಾ ಮಾಡಿಲ್ಲ. ಎಲ್ಲರಿಗೂ ಮನೆಮನೆಗೆ ರೇಷನ್ ಕೊಟ್ಟಿದ್ದಾರೆ. ಶೌಚಾಲಯ, ಮನೆಮನೆಗೆ ಅಭಿವೃದ್ಧಿ ಕಾರ್ಯ ತಲುಪಿಸಿದ್ದರೂ ಕೆಲವರು ಬಿಜೆಪಿಗೆ ಮತ ಹಾಕಿಲ್ಲ. ಮತ ಹಾಕದಿರಲು ಮತೀಯ ಕಾರಣವಿದ್ದರೆ ಅದು ತಪ್ಪಲ್ಲವೇ ಎಂದು ಕೇಳಿದರು. ಸೆಕ್ಯುಲರ್ ಪಾಠ ಹಿಂದೂಗಳಿಗೆ ಮಾತ್ರ ಇರಬೇಕೇ ಎಂದೂ ಪ್ರಶ್ನಿಸಿದರು.
ದಾರುಲ್ ಅರಬ್, ದಾರುಲ್ ಇಸ್ಲಾಂ ಎಂದರೇನು ಎಂಬುದು ಚರ್ಚೆಗೆ ಒಳಪಡಲಿ. ಆಗ ಕಮ್ಯುನಲ್ ಯಾರು, ಲಿಬರಲ್ ಯಾರೆಂಬುದು ಗೊತ್ತಾಗುತ್ತದೆ. ಹಲಾಲ್ ಮನೆಯಲ್ಲಿರಲಿ. ಮಾರ್ಕೆಟ್‌ನಲ್ಲಿ ಯಾಕೆ? ಮಾರ್ಕೆಟ್‌ನಲ್ಲಿ ಹಲಾಲ್ ಸೀಲ್ ಹಾಕಿ ಕಳುಹಿಸುವುದು ಮತೀಯವಾದದ ಪ್ರತೀಕ ಆಗುವುದಿಲ್ಲವೇ? ನಾವು ಗಾಳಿ, ಸಮಾಜವನ್ನು ವಿಭಜಿಸಲು ಆಗುವುದಿಲ್ಲ. ಹಲಾಲ್‌ನಂಥ ಕಾರಣಕ್ಕೆ ಸಮಾಜ ವಿಭಜನೆ ಆಗುವುದಿದ್ದರೆ ಅದು ಸರಿಯೇ ಎಂದು ಕೇಳಿದರು.