Advertisement

ಐಪಿಎಲ್ ಗೆ ವಿದಾಯ ಹೇಳಿದ ಚೆನ್ನೈ ಆಟಗಾರ ಅಂಬಾಟಿ ರಾಯುಡು; ಕೆಲ ಕ್ಷಣದಲ್ಲೇ ಟ್ವೀಟ್ ಡಿಲೀಟ್!

02:13 PM May 14, 2022 | Team Udayavani |

ಮುಂಬೈ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಹಿರಿಯ ಆಟಗಾರ ಅಂಬಾಟಿ ರಾಯುಡು ಅವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಗೆ ವಿದಾಯ ಹೇಳಿದ್ದಾರೆ. ಸದ್ಯ ನಡೆಯುತ್ತಿರುವ ಕೂಟವೇ ತನ್ನ ಕೊನೆಯ ಆವೃತ್ತಿ ಎಂದು ಹೈದರಾಬಾದ್ ಮೂಲದ ಬಲಗೈ ದಾಂಡಿಗ ಹೇಳಿದ್ದಾರೆ. ಆದರೆ ಕೆಲವೇ ನಿಮಿಷಗಳಲ್ಲಿ ತನ್ನ ಟ್ವೀಟನ್ನು ಡಿಲೀಟ್ ಮಾಡಿದ್ದಾರೆ.

Advertisement

ಮೊದಲು ಟ್ವೀಟ್ ಮಾಡಿದ ರಾಯುಡು, “ಇದು ನನ್ನ ಕೊನೆಯ ಐಪಿಎಲ್ ಎಂದು ಘೋಷಿಸಲು ಸಂತೋಷಪಡುತ್ತೇನೆ. ನಾನು ಕಳೆದ 13 ವರ್ಷಗಳಿಂದ 2 ಶ್ರೇಷ್ಠ ತಂಡಗಳ ಭಾಗವಾಗಿ ಆಡುವ ಅದ್ಭುತ ಸಮಯ ಕಳೆದಿದ್ದೇನೆ. ಈ ಅದ್ಭುತ ಅನುಭವಕ್ಕಾಗಿ ಮುಂಬೈ ಇಂಡಿಯನ್ಸ್ ಮತ್ತು ಸಿಎಸ್‌ಕೆಗೆ ಪ್ರಾಮಾಣಿಕವಾಗಿ ಧನ್ಯವಾದ ಹೇಳಲು ಇಷ್ಟಪಡುತ್ತೇನೆ” ಎಂದು 36 ವರ್ಷದ ಆಟಗಾರ ಹೇಳಿದ್ದರು.

ಇದನ್ನೂ ಓದಿ:ವರ್ಷಾಂತ್ಯಕ್ಕೆ ‘ಕೆಜಿಎಫ್ 3’ ಶೂಟಿಂಗ್ ಆರಂಭ; ಮಹತ್ವದ ಮಾಹಿತಿ ನೀಡಿದ ವಿಜಯ್ ಕಿರಗಂದೂರು

ವಿದಾಯದ ಟ್ವೀಟ್ ಮಾಡಿದ ಕೆಲವೇ ನಿಮಿಷಗಳಲ್ಲಿ ರಾಯುಡು ತಮ್ಮ ಟ್ವೀಟನ್ನು ಅಳಿಸಿದ್ದಾರೆ. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ.

Advertisement

ಇಲ್ಲಿಯವರೆಗೆ, ರಾಯುಡು ಐಪಿಎಲ್‌ ನಲ್ಲಿ 187 ಪಂದ್ಯಗಳನ್ನು ಆಡಿದ್ದು, 29.28 ಸರಾಸರಿಯಲ್ಲಿ 4,187 ರನ್ ಗಳಿಸಿದ್ದಾರೆ. ಅವರು 127.26 ರ ಬ್ಯಾಟಿಂಗ್ ಸ್ಟ್ರೈಕ್ ರೇಟ್ ಅನ್ನು ಹೊಂದಿದ್ದಾರೆ.

2010ರಿಂದ 2017ರವರೆಗೆ ಮುಂಬೈ ಇಂಡಿಯನ್ಸ್ ತಂಡ ಪ್ರಮುಖ ಭಾಗವಾಗಿದ್ದ ಅಂಬಾಟಿ ರಾಯುಡು, 2018ರಿಂದ ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿ ಆಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next