Advertisement

ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಇನ್ನು ವಾಹನ ಎನ್‌ಒಸಿ

02:17 AM Oct 25, 2021 | Team Udayavani |

ಹೊಸದಿಲ್ಲಿ: ಸೆಕೆಂಡ್‌ ಹ್ಯಾಂಡ್‌ ವಾಹನಗಳ ಮಾರಾಟಕ್ಕೆ ನಿರಾಕ್ಷೇಪಣ ಪತ್ರ (ಎನ್‌ಒಸಿ) ನೀಡುವ ಅಧಿಕಾರವನ್ನು ತನಗೆ ನೀಡಲಾಗಿದೆ ಎಂದು ಸರಕಾರಿ ಸರಕಾರಿ ಪ್ರವರ್ಧಿತ ಸಿಎಸ್‌ಸಿ-ಇ ಗವರ್ನೆನ್ಸ್‌ ಇಂಡಿಯಾ ಲಿ. (ಸಿಎಸ್‌ಸಿ ಎಸ್‌ಪಿವಿ) ರವಿವಾರ ಪ್ರಕಟಿಸಿದೆ.

Advertisement

ದೇಶಾದ್ಯಂತ ಈ ಸೇವೆ ಒದ ಗಿಸುವುದಕ್ಕಾಗಿ ಸಿಎಸ್‌ಸಿ ಅಥವಾ ಸಾಮಾನ್ಯ ಸೇವಾ ಕೇಂದ್ರವು ರಾಷ್ಟ್ರೀಯ ಅಪ  ರಾಧ ದಾಖಲೆ ಬ್ಯೂರೊ (ಎನ್‌ಸಿಆರ್‌ಬಿ) ಜತೆಗೆ ಕೈಜೋಡಿಸಿದೆ.

ಎನ್‌ಒಸಿಯಿಂದ ದ್ವಿತೀಯ ವಾಹನ ಖರೀದಿಗೆ ಮುನ್ನ ಆಯಾ ವಾಹನ ವಾಹನ ಯಾವುದೇ ಅಪರಾಧ ಕಾರಣಕ್ಕಾಗಿ ಪೊಲೀಸ್‌ ದಾಖಲೆಗಳಲ್ಲಿ ದೆಯೇ ಎಂಬುದು ತಿಳಿಯಲಿದೆ.

ಇದನ್ನೂ ಓದಿ:ಕನ್ನಡದಲ್ಲೇ ಸಹಿ ಮಾಡುವ ಅಭ್ಯಾಸ ಬೆಳೆಸಿ ಕೊಳ್ಳೋಣ: ಸಚಿವ ಸುನಿಲ್‌ ಕುಮಾರ್‌

ವಾಹನ ಮಾಲಕತ್ವ ವರ್ಗಾವಣೆಗೆ ಮುನ್ನ ಆರ್‌ಟಿಒಗೆ ಈ ದಾಖಲೆ ನೀಡುವುದು ಕಡ್ಡಾಯ.

Advertisement
Advertisement

Udayavani is now on Telegram. Click here to join our channel and stay updated with the latest news.

Next