Advertisement
ಏಕೆ ಈ ನಿರ್ಧಾರ?ಕೆಲ ದಿನಗಳ ಹಿಂದೆ, ಕೇಂದ್ರ ಸರ್ಕಾರ ಎಲ್ಲಾ ರೀತಿಯ ವಿಕೇಂದ್ರೀಕೃತ ಕ್ರಿಪ್ಟೋ ಕರೆನ್ಸಿಗಳ ವ್ಯವಹಾರವನ್ನು ರದ್ದುಗೊಳಿಸುವುದಾಗಿ ಪ್ರಕಟಿಸಿತ್ತಲ್ಲದೆ, ಅದಕ್ಕೆ ಬೇಕಾದ ಮಸೂದೆಯನ್ನೂ ಸಿದ್ಧಪಡಿಸಿಟ್ಟುಕೊಂಡಿತ್ತು. ಆದರೆ, ಕ್ರಿಪ್ಟೋ ಕರೆನ್ಸಿಯನ್ನು ನಿಷೇಧಿಸುವ ಬದಲು ಅದರ ಮೇಲೆ ಒಂದು ನಿಯಂತ್ರಣವನ್ನಿಟ್ಟುಕೊಂಡು ಭಾರತದಲ್ಲಿ ಅದರ ಚಲಾವಣೆಗೆ ಅನುವು ಮಾಡಿದರೆ ಅದರಿಂದ ಸರ್ಕಾರಕ್ಕೆ, ಜನರಿಗೆ – ಇಬ್ಬರಿಗೂ ಲಾಭವಿದೆ ಎಂಬು ವಿತ್ತೀಯ ಕ್ಷೇತ್ರದ ಕೆಲವು ಪರಿಣಿತರು ಕೇಂದ್ರಕ್ಕೆ ಸಲಹೆ ನೀಡಿದ್ದಾರೆನ್ನಲಾಗಿದೆ.
– ಇಂದಿನ ಆಧುನಿಕ ತಂತ್ರಜ್ಞಾನಗಳ ಸಹಾಯದಿಂದ ಕ್ರಿಪ್ಟೋಕರೆನ್ಸಿಗಳ ಹರಿದಾಟಗಳ ಮೇಲೆ ನಿಗಾ ವಹಿಸುವ ರೀತಿ.
– ಡಿಜಿಟಲ್ ತಂತ್ರಜ್ಞಾನದ ಸಹಾಯದಿಂದ ಅವುಗಳನ್ನು ನಿಯಂತ್ರಿಸುವ ರೀತಿ.
– ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) “ಡಿಜಿಟಲ್ ರುಪೀ’ ಪರಿಕಲ್ಪನೆಗೆ ಕ್ರಿಪ್ಟೋ ಕರೆನ್ಸಿಯನ್ನು ಒಗ್ಗಿಸುವ ಸಾಧ್ಯತೆಗಳು.