Advertisement
ಕ್ರಿಪ್ಟೋ ಕರೆನ್ಸಿ ಕ್ಷೇತ್ರದ ವಹಿವಾಟಿನಲ್ಲಿ ಅದು ಪ್ರಧಾನ ಪಾತ್ರ ವಹಿಸುತ್ತಿತ್ತು. ವಹಿವಾಟಿನ ಅಂತ್ಯದಲ್ಲಿ ಕ್ರಿಪ್ಟೋ ಎಕ್ಸ್‌ಚೇಂಜ್ “ಕಾಯಿನ್ ಬೇಸ್’ ಬ್ಯಾಂಕ್‌ನಲ್ಲಿ 240 ಮಿಲಿಯನ್ ಡಾಲರ್ ಠೇವಣಿ ಹೊಂದಿತ್ತು.
Related Articles
Advertisement
99.52 ರೂ.ಗೆ ಎಸ್‌ವಿಬಿ ಖರೀದಿ!ಬ್ಯಾಂಕ್ ಖರೀದಿ ಎಂದರೆ ಸಾವಿರಾರು ಕೋಟಿ ವಹಿವಾಟಿನ ಡೀಲ್. ಆದರೆ, ಸದ್ಯ ಬಾಗಿಲು ಮುಚ್ಚಿರುವ ಎಸ್‌ವಿಬಿಯ ಇಂಗ್ಲೆಂಡ ಸಹವರ್ತಿಯನ್ನು ಎಚ್‌ಎಸ್‌ಬಿಸಿ ಬ್ಯಾಂಕ್, ಸಾಂಕೇತಿಕವಾಗಿ 99.52 ರೂ. ನೀಡಿ ಖರೀದಿಸಿದೆ! ಬ್ರಿಟನ್‌ನ ತಾಂತ್ರಿಕ ಸ್ಟಾರ್ಟಪ್ ಗಳಿಗಾಗಿ ಪ್ರಮುಖ ಬ್ಯಾಂಕನ್ನು ಉಳಿಸುವುದು, ಬ್ಯಾಂಕ್ ಭಾರೀ ಕುಸಿತ ತಡೆಯಲು ಸಹಾಯ ಮಾಡುವುದು ಇದರ ಉದ್ದೇಶ. ಬ್ರಿಟನ್ ಸರ್ಕಾರ ಕೂಡ ಕ್ಯಾಲಿಫೋರ್ನಿಯದಲ್ಲಿ ಪ್ರಧಾನ ಕಚೇರಿ ಹೊಂದಿರುವ ಸಿಲಿಕಾನ್ ವ್ಯಾಲಿ ಬ್ಯಾಂಕ್‌ನ ಇಂಗ್ಲೆಂಡ್ ಶಾಖೆಯನ್ನು ಖರೀದಿ ಮಾಡುವವರಿಗಾಗಿ ಶೋಧ ನಡೆಸುತ್ತಿತ್ತು. ಚಿಲ್ಲರೆ ಕ್ಷೇತ್ರದ ಹಣದುಬ್ಬರ ಇಳಿಕೆ
ದೇಶದಲ್ಲಿ ಪ್ರಸಕ್ತ ವರ್ಷ ಫೆಬ್ರವರಿಗೆ ಸಂಬಂಧಿಸಿದಂತೆ ಚಿಲ್ಲರೆ ಹಣದುಬ್ಬರ ದರ ಶೇ.6.44 ಇಳಿಕೆಯಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಸೋಮವಾರ ಬಿಡುಗಡೆ ಮಾಡಿದ ದತ್ತಾಂಶಗಳಲ್ಲಿ ಉಲ್ಲೇಖಿಸಲಾಗಿದೆ. ಜನವರಿಯಲ್ಲಿ ಅದರ ಪ್ರಮಾಣ, ಶೇ.6.52 ಆಗಿತ್ತು. ಗ್ರಾಮೀಣ ಪ್ರದೇಶಗಳಲ್ಲಿ ಹಣದುಬ್ಬರ ಪ್ರಮಾಣ ಶೇ.6.7 ಆಗಿದ್ದರೆ, ನಗರ ಪ್ರದೇಶಗಳಲ್ಲಿ ಶೇ.6.1 ಎಂದು ಸರ್ಕಾರ ತಿಳಿಸಿದೆ. ಆಹಾರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹಣದುಬ್ಬರ ಕೂಡ ಜನವರಿಯಲ್ಲಿ ಶೇ.6 ಇದ್ದದ್ದು ಕಳೆದ ತಿಂಗಳಿಗೆ ಶೇ.5.95ಕ್ಕೆ ಇಳಿಕೆಯಾಗಿದೆ. 2022 ನವೆಂಬರ್ ಮತ್ತು ಡಿಸೆಂಬರ್ ಅನ್ನು ಹೊರತುಪಡಿಸಿ, ಹಣದುಬ್ಬರ ಪ್ರಮಾಣ ಆರ್‌ಬಿಐ ನಿಗದಿಪಡಿಸಿದ ಪ್ರಮಾಣಕ್ಕಿಂತ ಹೆಚ್ಚಾಗಿಯೇ ಮುಂದುವರಿದಿತ್ತು.