Advertisement
ಉತ್ತರ ಭಾರತ ಮೂಲದ ಶೀತಲ್ ಬಾಸ್ತ ವುದ್, ಜಬಿವುಲ್ಲಾ ಖಾನ್, ಇಮ್ರಾನ್ ರಿಯಾಜ್, ರೆಹಮತ್ ಉಲ್ಲಾ ಖಾನ್ ಬಂಧಿತ ಆರೋಪಿಗಳು. ಆರೋಪಿ ಗಳಿಂದ 44 ಬ್ಯಾಂಕ್ ಖಾತೆಗಳಲ್ಲಿ ಇಟ್ಟಿದ್ದ 15 ಕೋಟಿ ರೂ. ಫ್ರೀಜ್ ಮಾಡಲಾಗಿದೆ. 1 ಕೆ.ಜಿ. 650 ಗ್ರಾಂ ಚಿನ್ನ, 78 ಲಕ್ಷ ರೂ. ನಗದು, 44 ಡಿಎಸ್‌ಸಿ ಟೋಕನ್‌ಗಳು, 5 ಸೀಲುಗಳನ್ನು ಜಪ್ತಿ ಮಾಡಲಾಗಿದೆ.
Related Articles
Advertisement
ಕಂಪನಿಗಳ ಹೇಳಿಕೆ ಮೇಲೆ ವಿಶ್ವಾಸವಿದ್ದ ಸಾರ್ವಜನಿಕರು ಶೇರ್‌ಹ್ಯಾಶ್ ಮೊಬೈಲ್ ಅಪ್ಲಿಕೇಷನ್ ಅನ್ನು ಡೌನ್‌ಲೋಡ್ ಮಾಡಿಕೊಂಡಿದ್ದರು. ಅಲ್ಲಿ ಖಾತೆ ತೆಗೆದು ಲಾಗಿನ್ ಆಗಿ ತಮ್ಮ ಉಳಿತಾಯ ಬ್ಯಾಂಕ್ ಖಾತೆಗಳಿಂದ ಯುಪಿಐ ಮತ್ತು ನೆಟ್ ಬ್ಯಾಂಕಿಂಗ್‌ಗಳ ಮೂಲಕ ಕೊಟಾಟ ಟೆಕ್ನಾಲಜಿ, ಸಿರಲೀನ್ ಟೆಕ್ ಸಲ್ಯೂಷನ್ ಪ್ರೈ.ಲಿ., ನಿಲೇನ್ ಇನ್ಫೋಟೆಕ್ ಪ್ರೈ.ಲಿ., ಮೋಲ್‌ಟ್ರೇಸ್ ಎಕ್ಸೀಮ್ ಪ್ರೈ..ಲಿ., ಕ್ರಾಂಷಿಂಗ್‌ಟನ್ ಟೆಕ್ನಾಲಜಿ ಪ್ರೈ.ಲಿ.,ನಲ್ಲಿ ಕೋಟ್ಯಂತರ ರೂ.ಹಣವನ್ನು ಹೂಡಿಕೆ ಮಾಡಿದ್ದರು.
ಶೇ.30 ಲಾಭಾಂಶ ಭರವಸೆ: ಕಳೆದ ಜ.11ರಂದು ಶೇರ್‌ಹ್ಯಾಶ್ ವರ್ಷನ್ 1ರಲ್ಲಿ ತಾಂತ್ರಿಕ ದೋಷ ಹೊಂದಿದ್ದು, ಹೊಸ ವೈಶಿಷ್ಟ್ಯಗಳೊಂದಿಗೆ ತಮ್ಮ ಅಪಿ É ಕೇಶನ್ ಅನ್ನು ಅಪ್‌ಗ್ರೇಡ್ ಮಾಡುವ ಅಗತ್ಯವಿದೆ. ಜ.18 ಮತ್ತು 19ರೊಳಗೆ ಶೇರ್‌ಹ್ಯಾಶ್ 2.0 ವರ್ಷನ್ -2 ಹೊಸ ಅಪ್ಲಿಕೇಶನ್ ಬಿಡುಗಡೆಯಾಗಲಿದೆ. ಅದರಲ್ಲಿ ಅಧಿಕ ಹಣ ಹೂಡಿಕೆ ಮಾಡುವವರಿಗೆ ಪ್ರೀಮಿಯಂ ಸದಸ್ಯತ್ವ ಸಿಗಲಿದೆ. ಜ.11ರಂದು ಸಂಜೆ 6 ಗಂಟೆಯೊಳಗೆ ಗ್ರಾಹಕರು ಹೆಚ್ಚಿನ ಹಣ ಹೂಡಿಕೆ ಮಾಡಿದರೆ, ಹೊಸ ಅಪ್ಲಿಕೇಶನ್ ಬಿಡುಗಡೆಯಾಗುವ ವೇಳೆ ಶೇ.30ರಷ್ಟು ಲಾಭಾಂಶ ಸಿಗಲಿದೆ ಎಂದು ಆರೋಪಿಗಳು ಗ್ರಾಹಕರಿಗೆ ಸಂದೇಶ ಕಳುಹಿಸಿ ನಂಬಿಸಿದ್ದರು.
ಇದನ್ನು ನಂಬಿ ನೂರಾರು ಗ್ರಾಹಕರು ಕೋಟ್ಯಂತರ ರೂ. ಹೂಡಿಕೆ ಮಾಡಿದ್ದರು. ಜ.19ರಂದು ಗ್ರಾಹಕರು ಶೇರ್‌ಹ್ಯಾಶ್ ಆ್ಯಪ್ ಲಾಗಿನ್ ಮಾಡಲು ಪ್ರಯತ್ನಿಸಿದರೂ ಸಾಧ್ಯವಾಗಿರಲಿಲ್ಲ. ಈ ಬಗ್ಗೆ ಪರಿಶೀಲಿಸಿದಾಗ ಗೂಗಲ್ ಪ್ಲೇ ಸ್ಟೋರ್‌ನಿಂದ ಶೇರ್ ಹ್ಯಾಶ್ ಅಪ್ಲಿಕೇಶನ್ ತೆಗೆದು ಹಾಕಿರುವುದು ಗ್ರಾಹಕರ ಗಮನಕ್ಕೆ ಬಂದಿತ್ತು. ಆರೋಪಿಗಳು ಯಾವುದೇ ಲಾಭಾಂಶ ನೀಡದೇ, ಕ್ರಿಪ್ಟೋ ಮೈನಿಂಗ್ ಯಂತ್ರವನ್ನೂ ನೀಡದೇ ವಂಚಿಸಿರುವ ಬಗ್ಗೆ ಗ್ರಾಹಕರು ಸಿಸಿಬಿ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದರು.