Advertisement

ಕ್ರಿಪ್ಟೋ ವಂಚನೆ: ಉದ್ಯಮಿಗೆ 1.84 ಕೋಟಿ ರೂ.ಗೆ ವಂಚಿಸಿದ ವ್ಯಕ್ತಿ ಬಂಧನ

07:15 PM Sep 09, 2022 | Team Udayavani |

ನೋಯ್ಡಾ: 1.84 ಕೋಟಿ ರೂ ಕ್ರಿಪ್ಟೋಕರೆನ್ಸಿ ವಂಚನೆಗೆ ಸಂಬಂಧಿಸಿದಂತೆ ಒಬ್ಬನನ್ನು ಬಂಧಿಸಿರುವುದಾಗಿ ಉತ್ತರ ಪ್ರದೇಶ ಪೊಲೀಸರ ಸೈಬರ್ ಕ್ರೈಂ ವಿಭಾಗ ಶುಕ್ರವಾರ ತಿಳಿಸಿದೆ.

Advertisement

ಕ್ರಿಪ್ಟೋಕರೆನ್ಸಿಯಲ್ಲಿ ಹೂಡಿಕೆ ಮಾಡುವ ನೆಪದಲ್ಲಿ ಮೀರತ್ ಮೂಲದ ಉದ್ಯಮಿಯನ್ನು ವಂಚಿಸಿದ ಆರೋಪದ ಮೇಲೆ ಮುಂಬೈ ಮೂಲದ ಆರೋಪಿಯನ್ನು ನೋಯ್ಡಾದ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಅಧಿಕಾರಿಗಳು ಬಂಧಿಸಿದ್ದಾರೆ.

ಆರೋಪಿಗಳು ನಕಲಿ ವೆಬ್‌ಸೈಟ್ ಮೂಲಕ ಕ್ರಿಪ್ಟೋಕರೆನ್ಸಿ ಟ್ರೇಡಿಂಗ್ ನೆಪದಲ್ಲಿ ದೇಶಾದ್ಯಂತ ಜನರನ್ನು ದಾರಿ ತಪ್ಪಿಸಿ ಕೋಟ್ಯಂತರ ರೂಪಾಯಿ ವಂಚಿಸಿರುವುದು ತನಿಖೆಯ ವೇಳೆ ಪತ್ತೆಯಾಗಿದೆ. ನಕಲಿ ವೆಬ್‌ಸೈಟ್‌ಗಳ ಮೂಲಕ ಆನ್‌ಲೈನ್ ಕ್ರಿಪ್ಟೋ ಟ್ರೇಡಿಂಗ್ ನೆಪದಲ್ಲಿ ಜನರನ್ನು ವಂಚಿಸುವ ಇಂತಹ ಹಲವಾರು ಪ್ರಕರಣಗಳು ದೇಶಾದ್ಯಂತ ಬೆಳಕಿಗೆ ಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೀರತ್ ಮೂಲದ ಯೋಗೇಂದ್ರ ಕುಮಾರ್ ಚೌಧರಿ ಅವರು ತಮ್ಮ ಎಫ್‌ಐಆರ್‌ನಲ್ಲಿ ಕ್ರಿಪ್ಟೋ ಟ್ರೇಡಿಂಗ್‌ನಿಂದ ಭಾರಿ ಆದಾಯದ ನೆಪದಲ್ಲಿ 1.84 ಕೋಟಿ ರೂಪಾಯಿಗಳನ್ನು ವಂಚಿಸಿದ್ದಾರೆ ಎಂದು ಆರೋಪಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

“ತನಿಖೆಯ ಸಮಯದಲ್ಲಿ, ಹಣವನ್ನು 19 ಬ್ಯಾಂಕ್ ಖಾತೆಗಳಿಗೆ ಮತ್ತು ಒಂದು ಪಾವತಿ ಅಗ್ರಿಗೇಟರ್‌ಗೆ ವಹಿವಾಟು ನಡೆಸಿರುವುದು ಕಂಡುಬಂದಿದೆ. ದತ್ತಾಂಶವನ್ನು ವಿಶ್ಲೇಷಿಸಿದ ನಂತರ ಭುಲೇಶ್ವರನಾಥ್ ಮಿಶ್ರಾ (59) ಪಾತ್ರ ಬೆಳಕಿಗೆ ಬಂದಿದ್ದು, ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಶಂಕಿತ ಆರೋಪಿ ಮುಂಬೈನ ಕಾಂದಿವಲಿ ಪೂರ್ವದಲ್ಲಿರುವ ಹಿರಾನಂದನಿ ಹೆರಿಟೇಜ್‌ನಲ್ಲಿ ವಾಸವಾಗಿದ್ದು. ಕ್ರಿಪ್ಟೋ ಟ್ರೇಡಿಂಗ್ ಸಲಹೆಗಾರ ಎಂದು ಹೇಳಿಕೊಳ್ಳುವ ಸಿಂಗಾಪುರ ಮೂಲದ ವಿದೇಶಿಯರ ಕಮಿಷನ್‌ನಲ್ಲಿ ಕೆಲಸ ಮಾಡಿರುವುದಾಗಿ ತನಿಖಾ ತಂಡಕ್ಕೆ ತಿಳಿಸಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next